ಕರ್ನಾಟಕ ಚುನಾವಣೆಗೆ ಹಿಂದುತ್ವ, ದೇಶಾಭಿಮಾನವೇ ಬಿಜೆಪಿ ತಂತ್ರ- ಸಚಿವರಿಗೆ ಹೈಕಮಾಂಡ್ ಟಾಸ್ಕ್ ಡೆಡ್ ಲೈನ್

ಬೆಂಗಳೂರು: ಗುಜರಾತ್ (Gujarat) ಹಾಗೂ ಹಿಮಾಚಲ ಪ್ರದೇಶದ (Himachal Pradesh) ಚುನಾವಣೆ ಮುಗಿದಿದ್ದು, ಇದೀಗ ಪ್ರತಿಷ್ಠೆಯ ಕಣವಾಗಿರುವ ಕರ್ನಾಟಕ ರಾಜಕಾರಣದತ್ತ ಬಿಜೆಪಿ (BJP) ಹದ್ದಿನ ಕಣ್ಣಿಟ್ಟಿದೆ.

ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ (BJP) ಗೆಲುವು ಸಾಧಿಸಿದ್ರೆ ಅದೇ ಮಾದರಿಯನ್ನ ಕರ್ನಾಟಕದಲ್ಲೂ ರೂಪಿಸಲು ಚಿಂತನೆ ನಡೆಸಿದೆ. ಒಂದು ಫಲಿತಾಂಶ ವ್ಯತಿರಿಕ್ತವಾದರೆ ಕರ್ನಾಟಕಕ್ಕೆ ಪ್ರತ್ಯೇಕ ಮಾಡೆಲ್‌ಗೆ ಹೈಕಮಾಂಡ್ ಪ್ಲ್ಯಾನ್‌ ಮಾಡಿದೆ. ಇದನ್ನೂ ಓದಿ: ಗುಜರಾತ್ ಆಯ್ತು, ಇಂದಿನಿಂದಲೇ ಕರ್ನಾಟಕ ಚುನಾವಣೆಗೆ ತಯಾರಿ

ಗುಜರಾತ್- ಹಿಮಾಚಲ ಪ್ರದೇಶ ಮಾಡೆಲ್ ಏನಿದೆ?: ಬಿಜೆಪಿ ಕರ್ನಾಟಕ ವಿಧಾನಸಭಾ ಚುನಾವಣೆ ಶತಾಯಗತಾಯ ಗೆಲ್ಲಲೇಬೇಕು ಎಂದು ರಣತಂತ್ರ ಎಣೆದಿದ್ದು, ಎರಡು ಮಾಸ್ಟರ್ ಪ್ಲ್ಯಾನ್‌ ಪ್ರಯೋಗಕ್ಕೆ ಸಜ್ಜಾಗಿದೆ. ಎರಡು ರಾಜ್ಯದಲ್ಲಿ ಬಿಜೆಪಿ ಗೆದ್ರೆ ಗುಜರಾತ್, ಹಿಮಾಚಲ ಮಾದರಿಯಲ್ಲಿ ಚುನಾವಣೆ ತಂತ್ರ ಹೆಣೆಯೋದು. ಮೋದಿ (Narendra Modi), ಅಮಿತ್ ಶಾ (Amit Shah), ಯೋಗಿ ಆದಿತ್ಯನಾಥರಿಂದ ಅತಿ ಹೆಚ್ಚು ರಾಲಿಗಳನ್ನ ಕರ್ನಾಟಕದಲ್ಲೂ ಮಾಡೋದು. ಇದನ್ನೂ ಓದಿ: ಉಗ್ರ ಶಾರೀಕ್‍ಗೆ ಹರಿದು ಬರುತ್ತಿತ್ತು ಡಾಲರ್ ಮನಿ – ಕರೆನ್ಸಿ ವರ್ಗಾಯಿಸಿದ 40ಕ್ಕೂ ಅಧಿಕ ಜನರ ವಿಚಾರಣೆ

ಹಿರಿಯ ತಲೆಗಳಿಗೆ ಕೊಕ್ ಕೊಟ್ಟು ಯುವಕರಿಗೆ ಚುನಾವಣೆಯಲ್ಲಿ (Election) ಆದ್ಯತೆ ಕೊಡೋದು. ಕೆಲಸ ಮಾಡದೇ ಜನ ವಿರೋಧಿ ಹೆಸರು ಇರೋ ಹಾಲಿ ಎಂಎಲ್‌ಎ ಗಳಿಗೆ ಟಿಕೆಟ್ ಕಟ್ ಮಾಡಿ ಹೊಸಬರಿಗೆ ಅವಕಾಶ ಕೊಡೋದು. ಕುಟುಂಬ ರಾಜಕೀಯ ಹೊರತಾಗಿ ಗೆಲ್ಲೋ ಕುದುರೆಗಳಿಗೆ ಮಣೆ ಹಾಕೋದು. ಗುಜರಾತ್ ನಲ್ಲಿ ಮಾಡಿದಂತೆ ಹಿರಿಯ ನಾಯಕರನ್ನ ಸ್ಪರ್ಧಾ ಕಣದಿಂದ ದೂರ ಇಟ್ಟು ಪಕ್ಷದ ಚಟುವಟಿಕೆಗಳಲ್ಲಿ, ಚುನಾವಣೆ ಪ್ರಚಾರದಲ್ಲಿ ಮಾತ್ರ ಬಳಸಿಕೊಳ್ಳೋದು. ಟಿಕೆಟ್ ಹಂಚಿಕೆಯಲ್ಲಿ ಗುಜರಾತ್, ಹಿಮಾಚಲ ಪ್ರದೇಶದ ಮಾದರಿಯನ್ನೆ ಸಂಪೂರ್ಣವಾಗಿ ಅಳವಡಿಸಿಕೊಳ್ಳೋದು ಈ ರೀತಿಯಾಗಿ ಪ್ಲ್ಯಾನ್‌ ಮಾಡಿದೆ. ಇದನ್ನೂ ಓದಿ: ಮುಲ್ಲಾಗಳಿಗೆ ಬಿಜೆಪಿಯಿಂದ ಅವಮಾನ- ಸಿದ್ದರಾಮಯ್ಯ ಬೆಂಬಲಿಸಿದ ಮುಸ್ಲಿಂ ಸಂಘಟನೆ

ವ್ಯತಿರಿಕ್ತ ಫಲಿತಾಂಶ ಬಂದ್ರೇ ಏನ್ ಮಾಡೋದು?: ಒಂದು ವೇಳೆ ಎರಡೂ ರಾಜ್ಯಗಳಲ್ಲಿ ವ್ಯತಿರಿಕ್ತ ಫಲಿತಾಂಶ ಬಂದರೆ, ಕರ್ನಾಟಕಕ್ಕೆ ಹೊಸ ಮಾಡೆಲ್ ಪ್ರಚಾರದ ಕಾರ್ಯತಂತ್ರ ರೂಪಿಸಲು ಪ್ಲ್ಯಾನ್‌ ಮಾಡಿದೆ. ಜಾತಿ ಆಧಾರದ ಜೊತೆ ಪ್ರದೇಶವಾರು ಅಂಶಗಳನ್ನ ಪರಿಗಣಿಸಿ ಟಿಕೆಟ್ ನೀಡೋದು. ಗುಜರಾತ್ ಮಾದರಿಯಂತೆ ಹಿರಿಯರಿಗೆ ಕೊಕ್ ಕೊಡೋ ವ್ಯವಸ್ಥೆ ಬಿಟ್ಟು ಗೆಲ್ಲೋ ಮಾನದಂಡ ಮಾತ್ರ ನೋಡೋದು. ಬೂತ್ ಲೆವಲ್ ನಿಂದಲೇ ಚುನಾವಣೆಗೆ ಕಾರ್ಯತಂತ್ರ ರೂಪಿಸೋದು. ಹಿಂದುತ್ವ, ದೇಶಾಭಿಮಾನದ ಮೇಲೆ ಚುನಾವಣೆಗೆ ತಂತ್ರ ಹೆಣೆಯೋದು ಹಾಗೂ ಕುಟುಂಬ ರಾಜಕೀಯದ ಅಸ್ತ್ರವನ್ನ ಅಗತ್ಯ ಕಡೆ ಉಳಿಸಿಕೊಂಡು ಗೆಲ್ಲೋಕೆ ತಂತ್ರ ರೂಪಿಸೋದು ಎಂದು ಪ್ಲ್ಯಾನ್‌ ಮಾಡಿಕೊಂಡಿದೆ.

ಸಚಿವರಿಗೆ ಹೈಕಮಾಂಡ್ ಟಾಸ್ಕ್ ಡೆಡ್ ಲೈನ್: ಚುನಾವಣಾ ಭರ್ಜರಿ ತಯಾರಿ ಶುರು ಮಾಡಿರುವ ಬಿಜೆಪಿ ಹೈಕಮಾಂಡ್ ರಾಜ್ಯದ ಸಚಿವರಿಗೆ ಹಲವು ಟಾಸ್ಕ್ಗಳನ್ನ ನೀಡಿದೆ. ಡಿಸೆಂಬರ್ ಅಂತ್ಯದ ಒಳಗೆ ಯಾವ ಕ್ಷೇತ್ರದ ಜವಾಬ್ದಾರಿ ತೆಗೆದುಕೊಳ್ತೀರಾ ಅನ್ನೋದರ ವಿವರವನ್ನ ಸಚಿವರು ಕೊಡಬೇಕು. ಸಚಿವರು ತೆಗೆದುಕೊಳ್ಳೋ ಕ್ಷೇತ್ರದಲ್ಲಿ ಗೆಲುವಿಗೆ ಈವರೆಗೂ ಮಾಡಿರೋ ತಯಾರಿ ಏನು ಅಂತ ಮಾಹಿತಿ ಕೊಡಬೇಕು. ಸಚಿವರು ತೆಗೆದುಕೊಳ್ಳೋ ಕ್ಷೇತ್ರ ಗೆಲುವಿಗೆ ಹೇಗೆ ಕಾರ್ಯತಂತ್ರ ರೂಪಿಸಲಾಗಿದೆ ಅನ್ನೋ ಮಾಹಿತಿ ಕೊಡಬೇಕು. ಸಚಿವರು ತೆಗೆದುಕೊಳ್ಳೋ ಕ್ಷೇತ್ರದ ಸಂಘಟನೆ, ಜಾತಿ ಸಮೀಕರಣ, ಜಾತಿ ಲೆಕ್ಕಾಚಾರದ ವಿವರ ನೀಡಬೇಕು. ಕ್ಷೇತ್ರದಲ್ಲಿನ ಸಮಸ್ಯೆ ಏನು? ಅದರ ಪರಿಹಾರಕ್ಕೆ ಶೀಘ್ರವಾಗಿ ಇರೋ ಮಾರ್ಗಗಳೇನು ಅನ್ನೋದ್ರ ಡಿಟೇಲ್ ಕೊಡಬೇಕು ಅನ್ನೋ ಟಾಸ್ಕ್ ನೀಡಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *