ಡೆಹ್ರಾಡೂನ್: ಉತ್ತರಾಖಂಡದಲ್ಲಿ ಡಿಜಿಟಲ್ ರ‍್ಯಾಲಿಗಳಿಗೆ ಬಿಜೆಪಿ ಸಂಪೂರ್ಣ ತಯಾರಿ ನಡೆಸಿದೆ ಎಂದು ಕೇಂದ್ರ ರಕ್ಷಣಾ ಮತ್ತು ಪ್ರವಾಸೋದ್ಯಮ ಸಚಿವ ಅಜಯ್ ಭಟ್ ತಿಳಿಸಿದರು.
ಅಸೆಂಬ್ಲಿ ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾನಾಡಿದ ಅವರು, ಶನಿವಾರ ಚುನಾವಣಾ ಆಯೋಗವು ಉತ್ತರ ಪ್ರದೇಶ, ಗೋವಾ, ಪಂಜಾಬ್, ಮಣಿಪುರ ಮತ್ತು ಉತ್ತರಖಂಡ್ ನಲ್ಲಿ ಅಸೆಂಬ್ಲಿ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಿದೆ. ಪ್ರಸ್ತುತ ಚುನಾವಣೆ ಎಂದು ನೇರವಾಗಿ ಜನರನ್ನು ಭೇಟಿ ಮಾಡುವುದು, ಬೀದಿಯಲ್ಲಿ ಪ್ರಚಾರ ಮಾಡುವುದನ್ನು ನಿಷೇಧಿಸಲಾಗಿದೆ. ಅದಕ್ಕೆ ಬಿಜೆಪಿ ಪಕ್ಷವು ಡಿಜಿಟಲ್ ರ‍್ಯಾಲಿ ಮಾಡಲು ತಯಾರಿ ಮಾಡಿಕೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಹಿಮದಿಂದ ಆವೃತವಾದ ಫೋಟೋ ಶೇರ್ ಮಾಡಿ ‘ಭೂಮಿಯ ಮೇಲಿನ ಸ್ವರ್ಗ’ ಎಂದ ರೈಲ್ವೇ ಸಚಿವ

ಬಿಜೆಪಿ ಕಾರ್ಯಕರ್ತರು ಮತ್ತು ನಾವು ಚುನಾವಣೆಯ ಆಯೋಗದ ಅದೇಶವನ್ನು ಎಂದೂ ಮೀರಿ ನಡೆದುಕೊಳ್ಳುವುದಿಲ್ಲ. ಅದಕ್ಕೆ ನಾವು ಡಿಜಿಟಲ್ ರ‍್ಯಾಲಿ ಬಗ್ಗೆ ಚಿಂತನೆ ನಡೆಸುತ್ತಿದ್ದೇವೆ. ಈ ರೀತಿ ಹಿಂದೆಯೂ ಸಹ ಮಾಡಿದ್ದೇವೆ. ನಮಗೆ ಜನರು ಸಹಕರಿಸುತ್ತಾರೆ ಎಂಬ ವಿಶ್ವಾಸವಿದೆ. ಸಾರ್ವಜನಿಕರು ಸರ್ಕಾರ ಹೇಳಿದ ರೀತಿ ಕೇಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹೆಚ್ಚು ನೆಟ್‍ವರ್ಕ್ ಇಲ್ಲದೇ ಇರುವ ಏರಿಯಾಗಳನ್ನು ನಾವು ಸಂಪರ್ಕಿಸುತ್ತೇವೆ. ಚಿಕ್ಕ-ಚಿಕ್ಕ ಹಳ್ಳಿಗಳನ್ನು ನಾವು ಸಂಪರ್ಕಿಸುತ್ತೇವೆ. ಒಂದು ವೇಳೆ ನೆಟ್‍ವರ್ಕ್ ತೊಂದರೆಯಿಂದ ಚಿಕ್ಕ ಪ್ರದೇಶಗಳನ್ನು ಸಂಪರ್ಕಿಸಲು ಸಾಧ್ಯವಾಗದೆ ಇದ್ದರೆ ಅದಕ್ಕೆ ಬೇರೆ ಉಪಾಯವನ್ನು ಕಂಡುಕೊಳ್ಳುತ್ತೇವೆ ಎಂದು ತಿಳಿಸಿದರು. ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ ಕುಮಾರ್‌ಗೆ ಕೊರೊನಾ ಪಾಸಿಟಿವ್

ಉತ್ತರಾಖಂಡ ಕುರಿತು ಮಾತನಾಡಿದ ಅವರು, ಓಮಿಕ್ರಾನ್ ಸೋಂಕನ್ನು ಸುಲಭವಾಗಿ ತೆಗೆದುಕೊಳ್ಳಲು ಆಗುವುದಿಲ್ಲ. ಬದಲಾಗಿ ಅದಕ್ಕೆ ನಾವು ಸರಿಯಾದ ಕ್ರಮಗಳನ್ನು ತೆಗದುಕೊಳ್ಳಬೇಕು. ಇದೇ ಕಾರಣದಿಂದ ಕೇಂದ್ರ ಸರ್ಕಾರ ಇಂದಿನಿಂದ ಬೂಸ್ಟರ್ ಡೋಸ್ ಅನ್ನು ಜಾರಿ ಮಾಡಿದೆ. ನಮ್ಮ ಪ್ರಧಾನಿ ನರೇಂದ್ರ ಮೊದಿ ಆಡಳಿತದಲ್ಲಿ ಭಾರತದಲ್ಲಿರುವ ಎಲ್ಲ ಕಾರ್ಯಕರ್ತರು, ಉದ್ಯೋಗಿಗಳು, ಜನರು ಸುರಕ್ಷಿತವಾಗಿ ಇರುತ್ತಾರೆ ಎಂದು ಭರವಸೆಯನ್ನು ವ್ಯಕ್ತಪಡಿಸಿದರು.

Leave a Reply