ಕಮಿಷನ್ ದಂಧೆಯಿಂದ ಶಾಸಕ ಗೌರಿಶಂಕರ್ 8 ಕೋಟಿ ರೂ. ಗುಳುಂ- ಬಿಜೆಪಿ ಮಾಜಿ ಶಾಸಕ ಆರೋಪ

ತುಮಕೂರು: ಗ್ರಾಮಾಂತರ ಕ್ಷೇತ್ರದಲ್ಲಿ ಹಾಲಿ-ಮಾಜಿ ಎಂಎಲ್‍ಎ ಗಳ ಟಾಕ್ ಫೈಟ್ ಜೋರಾಗಿದೆ. ಹಾಲಿ ಶಾಸಕ ಸಿ.ಗೌರಿಶಂಕರ್ ಅವರು ಕಮೀಷನ್ ದಂಧೆಯಿಂದ ಕೇವಲ ಮೂರು ತಿಂಗಳಲ್ಲಿ 8 ಕೋಟಿ ರೂ. ಹಣ ಪಡೆದಿದ್ದಾರೆ ಎಂದು ಬಿಜೆಪಿಯ ಮಾಜಿ ಶಾಸಕ ಸುರೇಶ್ ಗೌಡರು ಗಂಭೀರ ಆರೋಪ ಮಾಡಿದ್ದಾರೆ.

ಶಾಸಕ ಗೌರಿಶಂಕರ್ ಅಧಿಕಾರಿಗಳ ವರ್ಗಾವಣೆಗಾಗಿ ರೇಟ್ ಫಿಕ್ಸ್ ಮಾಡಿದ್ದಾರೆ. ವರ್ಗಾವಣೆಗಾಗಿ ಪಿಎಸ್‍ಐ ಗೆ 15 ಲಕ್ಷ, ಸಿಪಿಐ ಗೆ 20 ಲಕ್ಷ ಅಂತ ಬೆಲೆ ನಿಗದಿ ಮಾಡಿದ್ದಾರೆ. ಗ್ರಾಮ ಪಂಚಾಯ್ತಿ, ಕಂದಾಯ ಇಲಾಖೆಯಲ್ಲೂ ಅಧಿಕಾರಿಗಳ ವರ್ಗಾವಣೆಯಲ್ಲಿ ಭಾರೀ ಭ್ರಷ್ಟಾಚಾರ ನಡೆಯುತ್ತಿದೆ. ಭ್ರಷ್ಟಾಚಾರಿಗಳು ಹಿಡಿಯಬೇಕಾದ ಪೊಲೀಸರೇ ಹಣ ನೀಡಿ ವರ್ಗಾವಣೆ ಮಾಡಿಕೊಳ್ಳುತ್ತಿರೋದು ದುರದೃಷ್ಟಕರ ಎಂದು ಸುರೇಶ್ ಗೌಡರು ಅಸಮಾಧಾನ ವ್ಯಕ್ತಪಡಿಸಿದರು.

ಯಾರಿಂದ ಎಷ್ಟು ಹಣ ಪಡೆಯಲಾಗಿದೆ ಎಂಬುದರ ಎಲ್ಲ ವಿಷಯಗಳನ್ನು ಶಾಸಕರ ಆಪ್ತರಾದ ನರೇಂದ್ರನಹಳ್ಳಿ ವಿಜಯಕುಮಾರ್ ಎಂಬವರ ತಮ್ಮ ಡೈರಿಯಲ್ಲಿ ದಾಖಲಿಸಿದ್ದಾರೆ. ಆ ಡೈರಿ ಸದ್ಯ ವಿಜಯಕುಮಾರ್ ಮನೆಯಲ್ಲಿದ್ದು, ಡೈರಿ ನೋಡಿದ ಕೆಲವರು ನಮಗೆ ತಿಳಿಸಿದ್ದಾರೆ. ಶಾಸಕರೊಬ್ಬರು ಕಡಿಮೆ ಅವಧಿಯಲ್ಲಿ ಇಷ್ಟೊಂದು ಭ್ರಷ್ಟಾಚಾರ ಮಾಡಿರೋದು ಕರ್ನಾಟಕ ಇತಿಹಾಸದಲ್ಲಿ ಇದೇ ಮೊದಲು. ಈ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಸುರೇಶ್ ಗೌಡರು ಒತ್ತಾಯಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *