ನಿನ್ನೆಯದ್ದು ಘಟನೆಯೇ ಅಲ್ಲ, ಬಿಜೆಪಿಗೆ ಕೆಲಸವಿಲ್ಲ: ಸಿದ್ದರಾಮಯ್ಯ ಕಿಡಿ

ಮೈಸೂರು: ನಿನ್ನೆಯದ್ದು ಘಟನೆಯೇ ಅಲ್ಲ. ಅವರು ನಮ್ಮ ಕಾರ್ಯಕರ್ತರಾಗಿದ್ದು, ಸ್ಪಷ್ಟನೆಯನ್ನು ನೀಡಿದ್ದಾರೆ. ಹಾಗಾಗಿ ಅದರ ಬಗ್ಗೆ ಪದೇ ಪದೆ ಕೇಳಬೇಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಗರಂ ಆಗಿದ್ದಾರೆ.

ನಿನ್ನೆಯದ್ದು ಘಟನೆಯೇ ಅಲ್ಲ. ಸುಮ್ಮನೆ ಘಟನೆ ಘಟನೆ ಎಂದು ಹೇಳಬೇಡಿ. ಅವರು ನಮ್ಮ ಕಾರ್ಯಕರ್ತರು. ಅವರೇ ಆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ. ಮತ್ತೆ ಯಾಕೇ ಆ ಬಗ್ಗೆ ಪ್ರಶ್ನಿಸುತ್ತಿದ್ದೀರಿ. ಬಿಜೆಪಿಯವರಿಗೆ ಮಾತಾನಾಡೋದಕ್ಕೆ ಬೇರೆ ವಿಚಾರ ಇಲ್ಲ. ಅದಕ್ಕೆ ಇದನ್ನು ಎಳೆಯುತ್ತಿದ್ದಾರೆ. ಮಹಾಭಾರತದ ಪಾತ್ರಗಳನ್ನು ಬಿಜೆಪಿಯವರು ಹಾಗೂ ಮಾಧ್ಯಮಗಳು ತರುತ್ತಿದ್ದಾರೆ ಎಂದು ಸೋಮವಾರ ನಡೆದ ಘಟನೆ ಬಗ್ಗೆ ಮಾಜಿ ಸಿಎಂ ಗರಂ ಆಗಿಯೇ ಸ್ಪಷ್ಟನೆ ನೀಡಿದ್ದಾರೆ. ಇದನ್ನು ಓದಿ: ಸಾರ್ವಜನಿಕ ಸಭೆಯಲ್ಲಿ ಸಿದ್ದರಾಮಯ್ಯ ರೌದ್ರಾವತಾರ – ಮಹಿಳೆಯ ಮೈಕ್ ಕಿತ್ತುಕೊಂಡು ಕೋಪ ಪ್ರದರ್ಶನ 

ಮಾಜಿ ಕೇಂದ್ರ ಸಚಿವ ಜಾರ್ಜ್ ಫರ್ನಾಂಡಿಸ್ ನಿಧನಕ್ಕೆ ಸಂತಾಪ ಸೂಚಿಸಿದ ಸಿದ್ದರಾಮಯ್ಯನವರು, ಫರ್ನಾಂಡಿಸ್ ಅವರೇ ನನಗೆ ರಾಜಕೀಯದಲ್ಲಿ ಸಹಾಯ ಮಾಡಿದ ವ್ಯಕ್ತಿ. ಅವರು ನನ್ನ ಗುರುಗಳ ಸಮಾನ. ಯಾವಾಗಲು ಅವರೊಂದಿಗೆ ಒಡನಾಟ ಚೆನ್ನಾಗಿತ್ತು. ಅವರು ಕರ್ನಾಟದಿಂದ ಹೋಗಿ ಮುಂಬೈ ಹಾಗೂ ಬಿಹಾರದಲ್ಲಿ ರಾಜಕೀಯ ನೆಲೆ ಕಂಡುಕೊಂಡಿದ್ದರು. ಅಲ್ಲದೇ ಅಂದಿನ ಕಾಲದಲ್ಲಿ ಮಹಾನ್ ಕಾಂಗ್ರೆಸ್ ನಾಯಕರೊಬ್ಬರನ್ನು ಸೋಲಿಸಿ ಖ್ಯಾತಿ ಗಳಿಸಿದ್ದರು. ವರ್ಷದ ಹಿಂದೆ ಭೇಟಿ ಮಾಡಿದ್ದಾಗ ಅವರು ನನ್ನನ್ನು ಗುರುತಿಸುವ ಶಕ್ತಿ ಇರಲಿಲ್ಲ. ಇಂದು ಅವರ ಅಗಲಿಕೆ ನನಗೆ ಆಘಾತ ತಂದಿದೆ. ಅವರ ಅಂತಿಮ ದರ್ಶನ ಪಡೆಯಲು ತೆರಳುತ್ತೇನೆ ಎಂದು ಸಿದ್ದರಾಮಯ್ಯ ನವರು ತಿಳಿಸಿದರು.

https://www.youtube.com/watch?v=U55ame3QXpU

https://www.youtube.com/watch?v=SYhHfLYL3y8

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *