ಬಿಎಸ್‍ವೈ, ಈಶ್ವರಪ್ಪ ಭಿನ್ನರಾಗ- ಬೆಂಗಳೂರಿನಲ್ಲಿಂದು ಅತೃಪ್ತರ ಸಭೆ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಮತ್ತು ಈಶ್ವರಪ್ಪ ನಡುವಿನ ವಾರ್ ಮತ್ತೆ ಶುರುವಾಗಿದೆ. ಇವತ್ತು ಅತೃಪ್ತರ ಸಭೆ ನಡೆಯಲಿದ್ದು, ಈಶ್ವರಪ್ಪ ಭಾಗವಹಿಸಿದ್ರೆ ಶಿಸ್ತು ಕ್ರಮದ ಬಗ್ಗೆ ಬಿಎಸ್‍ವೈ ಈಗಾಗಲೇ ಎಚ್ಚರಿಕೆ ರವಾನಿಸಿದ್ದಾರೆ.

ಅಲ್ಲದೆ ಇವತ್ತು ಅತೃಪ್ತರೆಲ್ಲರೂ ಸೇರಿಕೊಂಡು ಸಮಾವೇಶ ನಡೆಸಿದ್ರೆ, ಸಭೆಯಲ್ಲಿ ಭಾಗವಹಿಸುವವರ ವಿರುದ್ಧ ಶಿಸ್ತುಕ್ರಮದ ಎಚ್ಚರಿಕೆಯನ್ನ ನೀಡಿದ್ದಾರೆ ಎನ್ನಲಾಗಿದೆ. ಬಿಎಸ್‍ವೈಗೆ ಟಾಂಗ್ ಕೊಡಲು ಈಶ್ವರಪ್ಪ ರೆಡಿಯಾಗಿದ್ದು, ಅತೃಪ್ತರ ಸಮಾವೇಶದಲ್ಲಿ ಬೇಕು ಅಂತಲೇ ಭಾಗಿಯಾಗ್ತಿದ್ದಾರೆ ಎಂದು ಹೇಳಲಾಗಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ `ಬಿಜೆಪಿ ಸಂಘಟನೆ ಉಳಿಸಿ’ ಹೆಸರಿನಲ್ಲಿ ಸಮಾವೇಶ ನಡೀತಿದ್ದು, 25ಕ್ಕೂ ಹೆಚ್ಚು ಮುಖಂಡರು, ಅವರ ಹಿಂಬಾಲಕರು ಸೇರಿದಂತೆ ಸುಮಾರು 500 ಮಂದಿ ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಸಂಘಟನೆ ಉಳಿಸಿ ಸಮಾವೇಶದ ಪೋಸ್ಟರ್‍ನಲ್ಲಿ ಬಿಎಸ್‍ವೈ ಭಾವಚಿತ್ರವನ್ನ ಹಾಕಲಾಗಿದೆ. ಒಟ್ಟಾರೆ ಇವತ್ತಿನ ಸಭೆ ಸಾಕಷ್ಟು ಕುತೂಹಲ ಮೂಡಿಸಿದೆ.

 

Comments

Leave a Reply

Your email address will not be published. Required fields are marked *