ಬಿಜೆಪಿ ಡಿಜಿಟಲ್ ರಥದಲ್ಲಿ ಉಚಿತ ವೈಫೈ – ಪಾಸ್‍ವರ್ಡ್ ಕೇಜ್ರಿವಾಲ್

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಯುವ ಮತದಾರರನ್ನು ಸೆಳೆಯಲು ದೆಹಲಿಯಲ್ಲಿ ಬಿಜೆಪಿ ‘ಡಿಜಿಟಲ್ ರಥ’ಕ್ಕೆ ಚಾಲನೆ ನೀಡಲಿದೆ. ಈ ಯಾತ್ರೆಯಲ್ಲಿ ಡಿಜಿಟಲ್ ರಥ ದೆಹಲಿಯ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಸಂಚರಿಸಿ, ಮೋದಿ ಸರ್ಕಾರದ ಸಾಧನೆಗಳನ್ನು ತಿಳಿಸುವ ಕೆಲಸ ಮಾಡಲಿದೆ ಎಂದು ಬಿಜೆಪಿ ಹೇಳಿದೆ.

ಡಿಜಿಟಲ್ ರಥದಲ್ಲಿ ದೊಡ್ಡ ಎಲ್‍ಇಡಿ ಪರದೆಯನ್ನು ಅಳವಡಿಸಿ. 5 ವರ್ಷದ ಮೋದಿ ಆಡಳಿತ ಮತ್ತು ಯೋಜನೆಗಳನ್ನು ಬಿತ್ತರಿಸಲಾಗುವುದು. ಈ ವೇಳೆ ಯುವಕರಿಗೆ ಉಚಿತ ವೈ-ಫೈ ಸೌಲಭ್ಯ ಸಿಗಲಿದೆ. ಏಕಕಾಲದಲ್ಲಿ 200 ಜನರು ಉಚಿತ ವೈ-ಫೈ ಸೌಲಭ್ಯ ಪಡೆಯಬಹುದು. ಉಚಿತ ವೈ-ಫೈಗಾಗಿ ಯೂಸರ್ ನೇಮ್ ಮತ್ತು ಪಾಸ್‍ವರ್ಡ್ ಗಾಗಿ ‘Kejriwal failed to give free Wi-Fi’ (ಕೇಜ್ರಿವಾಲ್ ಸರ್ಕಾರ ಉಚಿತ ವೈ-ಫೈ ನೀಡಲು ವಿಫಲವಾಗಿದೆ) ಎಂದು ಟೈಪ್ ಮಾಡಬೇಕು. ಈ ಮೂಲಕವೇ ಆಪ್ ಸರ್ಕಾರದ ವಿಫಲತೆಗಳನ್ನು ತಿಳಿಸಲು ಪ್ರಯತ್ನಿಸುತ್ತಿದೆ ಎಂದು ಪಕ್ಷ ಹೇಳಿದೆ.

ದೆಹಲಿ ಬಿಜೆಪಿಯ ಐಟಿ ಮತ್ತು ಸಾಮಾಜಿಕ ಜಾಲತಾಣ ಸೇಲ್ ನಾಯಕ ನೀಲಕಂಠ ಭಕ್ಷಿ ಪ್ರತಿಕ್ರಿಯಿಸಿ, ಏಪ್ರಿಲ್ ಮೊದಲ ವಾರದಿಂದ ಡಿಜಿಟಲ್ ರಥ ತನ್ನ ಸಂಚಾರವನ್ನು ಆರಂಭಿಸಲಿದೆ. ಯಾತ್ರೆಯಲ್ಲಿ ನೀಡಲಾಗುವ ಉಚಿತ ವೈಫೈ ಬಳಸಿಕೊಂಡು ಬಳಕೆದಾರರು ಬಿಜೆಪಿ ಟ್ವಿಟ್ಟರ್ ಮತ್ತು ಫೇಸ್‍ಬುಕ್ ಖಾತೆಯನ್ನು ಸಂಪರ್ಕಿಸಬಹುದು. ಈ ಮೂಲಕ ಪಕ್ಷ ಮತ್ತು ಅಭ್ಯರ್ಥಿಗಳ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದೇ ಮಾರ್ಚ್ 27 ರಿಂದ 28ರವರೆಗೆ ಟ್ವಿಟ್ಟರ್ ಸಂವಾದ ಆರಂಭಿಸಲಾಗುವುದು. ಇಲ್ಲಿ ಮತದಾರರ ಮನದಾಳವನ್ನು ತಿಳಿದುಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *