KRSಗೆ ಇಂದು ಬಿಜೆಪಿ ನಿಯೋಗ – ಮಂಡ್ಯದಲ್ಲಿ ಮುಂದುವರಿದ ಪ್ರತಿಭಟನೆ

ಮಂಡ್ಯ: ಕೆಆರ್‌ಎಸ್‌ (KRS) ಡ್ಯಾಂನಿಂದ ತಮಿಳುನಾಡಿಗೆ (Tamil Nadu) ನೀರು ಹರಿಸುತ್ತಿರೋ ವಿಚಾರಕ್ಕೆ ರಾಜ್ಯದಲ್ಲಿ ಖಂಡನೆಗಳು ವ್ಯಕ್ತವಾಗುತ್ತಿವೆ. ಇದೀಗ ರಾಜ್ಯ ಬಿಜೆಪಿ ಕೆಆರ್‌ಎಸ್‌‌ನ ವಸ್ತುಸ್ಥಿತಿ ಅರಿಯಲು ಇಂದು (ಶುಕ್ರವಾರ) ಡ್ಯಾಂ ಬಳಿಗೆ ನಿಯೋಗದ ಮೂಲಕ ತೆರಳಿದೆ. ಇತ್ತ ಮಂಡ್ಯ (Mandya) ಜಿಲ್ಲೆಯಲ್ಲಿ ಅನ್ನದಾತರ ಪ್ರತಿಭಟನೆ ಮುಂದುವರಿದಿದೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಮೇರೆ ರಾಜ್ಯ ಸರ್ಕಾರ ಕಳೆದ 9 ದಿನಗಳಿಂದ ಕೆಆರ್‌ಎಸ್‌ ಡ್ಯಾಂನಿಂದ ತಮಿಳುನಾಡಿಗೆ ನಿತ್ಯ ಐದು ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಹರಿಸಲಾಗುತ್ತಿದೆ. ರಾಜ್ಯ ಸರ್ಕಾರದ ನಿರ್ಧಾರದ ವಿರುದ್ಧ ಮಂಡ್ಯದಲ್ಲಿ ಅನ್ನದಾತರು ಪ್ರತಿಭಟನೆ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದೀಗ ಇಂದು ಬಿಜೆಪಿ ನಿಯೋಗ ಕೆಆರ್‌ಎಸ್‌‌ಗೆ ವಸ್ತುಸ್ಥಿತಿಯನ್ನು ತಿಳಿಯಲು ಬರುತ್ತಿದೆ. ಇದನ್ನೂ ಓದಿ: ಬೆಂಗಳೂರು ಆರೋಗ್ಯ ಸುಧಾರಣೆಗೆ ಪ್ರತ್ಯೇಕ ವಿಭಾಗ, ಡೆಂಗ್ಯೂ ಪ್ರಕರಣಗಳ ಮೇಲ್ವೀಚಾರಣೆಗೆ ತಂತ್ರಾಶ: ದಿನೇಶ್ ಗುಂಡೂರಾವ್

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ‌ ನೇತೃತ್ವದಲ್ಲಿ ಮಾಜಿ ಸಚಿವರಾದ ಗೋವಿಂದ ಕಾರಜೋಳ, ಗೋಪಾಲಯ್ಯ, ಸಂಸದರಾದ ಸುಮಲತಾ ಅಂಬರೀಶ್, ಪ್ರತಾಪ್ ಸಿಂಹ, ಮೈಸೂರಿನ ಬಿಜೆಪಿ ಶಾಸಕರು ಹಾಗೂ ಮುಖಂಡರು ನಿಯೋಗದಲ್ಲಿ ಬರಲಿದ್ದಾರೆ. ಕೆಆರ್‌ಎಸ್‌‌ನಲ್ಲಿ‌ ಇರುವ ನೀರು ಮುಂದಿನ ಐದು ದಿನ ತಮಿಳುನಾಡಿಗೆ ಐದು ಸಾವಿರಕ್ಕೂ ಅಧಿಕ ಕ್ಯೂಸೆಕ್ ನೀರು ಬಿಟ್ಟರೆ ಎಷ್ಟು ನೀರು ಉಳಿಯುತ್ತದೆ. ಅಲ್ಲದೇ ಮುಂದೆ ಮಳೆ ಬೀಳದೆ ಇದ್ದರೆ ಜನರು ಏನೆಲ್ಲಾ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಮಾಹಿತಿಯನ್ನು ಈ ನಿಯೋಗ ತಿಳಿಯಲಿದೆ. ಮುಂದೆ ರಾಜ್ಯ ಬಿಜೆಪಿ ಈ ವಿಚಾರವನ್ನು ಇಟ್ಟುಕೊಂಡು ಹೇಗೆ ಹೋರಾಟದ ರೂಪುರೇಷೆಯನ್ನು ರೂಪಿಸಬೇಕೆಂದು ಇಲ್ಲಿ ಚರ್ಚೆ ಮಾಡಲಾಗುತ್ತದೆ. ಮಧ್ಯಾಹ್ನ 2:30ರ ವೇಳೆ ಬಿಜೆಪಿ ನಿಯೋಗ ಕೆಆರ್‌ಎಸ್‌‌ಗೆ ಬರಲಿದೆ.

ಒಂದು ಕಡೆ ಬಿಜೆಪಿ ನಿಯೋಗ ಕೆಆರ್‌ಎಸ್‌ ಅಣೆಕಟ್ಟೆಗೆ ಭೇಟಿ ನೀಡಿದರೆ, ಇನ್ನೊಂದೆಡೆ ಸಕ್ಕರೆ ನಾಡಲ್ಲಿ ಪ್ರತಿಭಟನೆಯ ಕಾವು ದಿನೇ ದಿನೇ ಹೆಚ್ಚಾಗುತ್ತಾ ಇದೆ. ಕಾವೇರಿ ನೀರಿನ ವಿಚಾರವಾಗಿ ಇಂದು ಮದ್ದೂರು ತಾಲೂಕಿನ ಬೆಸಗರಹಳ್ಳಿ ಗ್ರಾಮ ಪಂಚಾಯಿತಿ ಬಂದ್ ಆಗಲಿದೆ. ಇಲ್ಲಿ ಜನರು ತಲೆ ಬೋಳಿಸಿಕೊಂಡು ಪ್ರತಿಭಟನೆಯ ಮೂಲಕರ ಸರ್ಕಾರ ಹಾಗೂ ಕಾವೇರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಲಿದ್ದಾರೆ. ಇದಲ್ಲದೇ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ರೈತ ಸಂಘ ಶ್ರೀರಂಗಪಟ್ಟಣದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಆರಂಭಗೊಳ್ಳಲಿದೆ. ಕೆಆರ್‌ಎಸ್‌‌ನ ನೀರಾವರಿ ಕಚೇರಿಯ ಎದುರು ಭೂಮಿ ತಾಯಿ‌ ಹೋರಾಟ ಸಮಿತಿ ಭಜನೆ ಮಾಡುವ ಮೂಲಕ ವಿಭಿನ್ನ ಪ್ರತಿಭಟನೆ ಮಾಡಲಿದೆ. ಇದನ್ನೂ ಓದಿ: ಬಿಜೆಪಿ, ಜೆಡಿಎಸ್ ಮೈತ್ರಿ? – ಶಾ, ಹೆಚ್‌ಡಿಡಿ ಸಭೆಯ ಇನ್‌ಸೈಡ್‌ ಸ್ಟೋರಿ

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]