ಗಾಳಿಯಲ್ಲಿ ಗುಂಡು ಹಾರಿಸಿ ದೀಪಾವಳಿ ಆಚರಿಸಿದ ಬಿಜೆಪಿ ಕಾರ್ಪೋರೇಟರ್

ಲಕ್ನೋ: ದೀಪಾವಳಿ ಬಂದರೆ ಪಟಾಕಿ ಹೊಡೆಯುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ಹಾಗೆಯೇ ಮಕ್ಕಳು ಸಹ ಆಟಿಕೆ ಗನ್ ಬಳಸಿ ಪಟಾಕಿ ಹೊಡೆಯುತ್ತಾರೆ. ಉತ್ತರ ಪ್ರದೇಶದ ಮಹಿಳಾ ಕಾರ್ಪೋರೇಟರ್ ನಿಜವಾದ ಗನ್ ಮೂಲಕ ಗಾಳಿಯಲ್ಲಿ ಗುಂಡು ಹಾರಿಸಿ ದೀಪಾವಳಿ ಆಚರಣೆ ಮಾಡಿದ್ದಾರೆ. ಅಷ್ಟೇ ಅಲ್ಲದೇ ಕೈಯಲ್ಲಿ ಗನ್ ಹಿಡಿದಿರುವ ಫೋಟೋವನ್ನು ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.

ಉತ್ತರ ಪ್ರದೇಶದ ಬೃಂದಾವನ ನಗರದ ವಾರ್ಡ್ 50ರ ಕಾರ್ಪೋರೇಟರ್ ರಶ್ಮಿ ಶರ್ಮಾ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ರಶ್ಮಿ ಅವರು ಫೈರಿಂಗ್ ಮಾಡಿರುವ ವಿಡಿಯೋ ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ. ಫೇಸ್‍ಬುಕ್ ನಲ್ಲಿ ಫೋಟೋ ಹಾಕಿಕೊಂಡು, ನಾನು ಅಸಹಾಯಕರ ಧ್ವನಿ, ಯಾರು ಕಷ್ಟದಿಂದ ಬಳಲುತ್ತಿದ್ದಾರೋ ಅವರಿಗೆ ನಾನು ಮಮತಾ ಮೂರ್ತಿ, ನನ್ನನ್ನು ಅಸಹಾಯಕ ಹೆಣ್ಣು ಅಂತಾ ನೀವು ತಿಳಿದಿದ್ರೆ ಅದು ನಿಮ್ಮ ಭ್ರಮೆಯಾಗಿದ್ದು, ಅಂತಹವರಿಗೆ ನಾನು ಮಹಕಾಳಿ ಆಗಿರುತ್ತೇನೆ. ಜೈ ಶ್ರೀರಾಮ ಎಂಬ ಸಾಲುಗಳನ್ನು ಬರೆದುಕೊಂಡಿದ್ದಾರೆ.

ರಶ್ಮಿ ಅವರ ಇದೇ ರೀತಿ ಹಲವು ಗನ್ ಗಳನ್ನು ಹೊಂದಿದ್ದಾರೆ. ಯಾವ ಗನ್ ಗಳಿಗೂ ಲೈಸನ್ಸ್ ಪಡೆದಿಲ್ಲ ಎಂದು ಹೇಳಲಾಗುತ್ತಿದೆ. ದೀಪಾವಳಿ ದಿನ ಬಳಕೆ ಮಾಡಿರುವ ಗನ್ ಲೈಸನ್ಸ್ ಅವರ ಹೆಸರಿನಲ್ಲಿ ಇಲ್ಲ ಎಂದು ಸ್ಥಳೀಯ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸಿವೆ. ತಮ್ಮ ಫೋಟೋ ವೈರಲ್ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ರಶ್ಮಿ ಶರ್ಮಾ, ನನ್ನ ಮೇಲೆ ದಾಳಿ ನಡೆದಾಗ ಗನ್ ಲೈಸನ್ಸ್ ಪಡೆದವರ ಅನುಮತಿ ಕೇಳಬೇಕಾ ಎಂದು ಹೇಳುವ ಮೂಲಕ ದೀಪಾವಳಿಗಾಗಿ ತಾವು ಗುಂಡು ಹಾರಿಸಿಲ್ಲ ಅಂತಾ ಹೇಳಿದ್ದಾರೆ.

https://www.facebook.com/permalink.php?story_fbid=2206835572897577&id=100007134667675

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

 

Comments

Leave a Reply

Your email address will not be published. Required fields are marked *