ಮನೆಯಲ್ಲಿ ಐದು ಸದಸ್ಯರಿದ್ದರೂ ಒಂದೇ ಮತ ಪಡೆದ ಬಿಜೆಪಿ ಅಭ್ಯರ್ಥಿ

– ಟ್ರೆಂಡ್ ಆಯ್ತು ಹ್ಯಾಶ್ ಸಿಂಗಲ್ ವೋಟ್ ಬಿಜೆಪಿ

ಚೆನ್ನೈ: ತಮಿಳುನಾಡಿನಲ್ಲಿ ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿಯಿಂದ ಅಭ್ಯರ್ಥಿಯೊಬ್ಬರು ಸ್ಪರ್ಧಿಸಿ ಒಂದು ಮತವನ್ನು ಪಡೆದು ಸುದ್ದಿಯಾಗಿದ್ದಾರೆ.

ಚುನಾವಣೆಯಲ್ಲಿ ಒಂದು ಮತವನ್ನು ಪಡೆಯುವುದು ದೊಡ್ಡ ಸುದ್ದಿಯಲ್ಲ. ಆದರೆ ಅಭ್ಯರ್ಥಿಯ ಮನೆಯಲ್ಲಿ 5 ಮಂದಿ ಇದ್ದರೂ ಅವರು ಒಂದೇ ಮತವನ್ನು ಪಡೆದ ಕಾರಣ ಸುದ್ದಿಯಾಗಿದ್ದಾರೆ.

ಬಿಜೆಪಿ ಅಭ್ಯರ್ಥಿ ಡಿ.ಕಾರ್ತಿಕ್ ಎಂಬವರು ಕೊಯಮತ್ತೂರು ಜಿಲ್ಲೆಯ ಪೆರಿಯನೈಕೆನ್ಪಾಳ್ಯಂ ಒಕ್ಕೂಟದಲ್ಲಿ ವಾರ್ಡ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆದರೆ ಕೇವಲ ಒಂದು ಮತವನ್ನು ಪಡೆದುಕೊಂಡಿದ್ದಾರೆ. ಇದನ್ನೂ ಓದಿ: ಮೇಕ್ ಇನ್ ಇಂಡಿಯಾದಿಂದ ನವಭಾರತ ನಿರ್ಮಾಣ: ಡಾ.ಕೆ.ಸುಧಾಕರ್

ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಅಕ್ಟೋಬರ್ 6 ಮತ್ತು 9 ರಂದು ನಡೆದಿತ್ತು. ಒಟ್ಟಾರೆಯಾಗಿ, 79,433 ಅಭ್ಯರ್ಥಿಗಳು, 27,003 ಹುದ್ದೆಗಳಿಗೆ ಸ್ಪರ್ಧಿಸಿದ್ದರು. ಪಿಎಂ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಂತಹ ಕೇಂದ್ರ ನಾಯಕರ ಫೋಟೋಗಳನ್ನು ಪೋಸ್ಟರ್‌ನಲ್ಲಿ ಹಾಕಿ ಕಾರ್ತಿಕ್ ಚುನಾವಣೆಗೆ ಭಾರೀ ಪ್ರಚಾರ ಮಾಡಿದ್ದರು.

ಬರಹಗಾರ್ತಿ ಮತ್ತು ಕಾರ್ಯಕರ್ತೆ ಮೀನಾ ಕಂದಸಾಮಿ ಟ್ವಿಟ್ವರ್ ನಲ್ಲಿ, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗೆ ಕೇವಲ ಒಂದು ಮತ ಸಿಕ್ಕಿದೆ. ಇತರರಿಗೆ ಮತ ಹಾಕಲು ನಿರ್ಧರಿಸಿದ ಅವರ ಮನೆಯ ಇತರ ನಾಲ್ಕು ಮತದಾರರ ಬಗ್ಗೆ ಹೆಮ್ಮೆ ಇದೆ ಎಂದು ಬರೆದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: ಯಡಿಯೂರಪ್ಪ ವ್ಯಕ್ತಿ ಅಲ್ಲ ದೊಡ್ಡ ಶಕ್ತಿ: ಶ್ರೀರಾಮುಲು

ಕಾಂಗ್ರೆಸ್ಸಿನ ಅಶೋಕ್ ಕುಮಾರ್ ಈ ಕುರಿತು ಟ್ವೀಟ್ ಮಾಡಿದ್ದು, ಬಿಜೆಪಿ ಅಭ್ಯರ್ಥಿಯು ಕೊಯಮತ್ತೂರಿನಲ್ಲಿ ವಾರ್ಡ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದು, ಅವರ ಮನೆಯಲ್ಲಿ ಐದು ಸದಸ್ಯರಿದ್ದು, ಒಂದೇ ಒಂದು ಮತವನ್ನು ಪಡೆದರು. ಈ ರೀತಿ ತಮಿಳುನಾಡು ಬಿಜೆಪಿಯನ್ನು ನಿಭಾಯಿಸುತ್ತದೆ ಎಂದು ಬರೆದಿದ್ದಾರೆ.

Comments

Leave a Reply

Your email address will not be published. Required fields are marked *