ಬಿಜೆಪಿ ಬಣ್ಣ ಬಯಲಾಗುತ್ತೆಂದು ನಮ್ಮನ್ನು ಹೋಟೆಲ್ ಒಳಗೆ ಬಿಟ್ಟಿಲ್ಲ: ಶಿವಲಿಂಗೇಗೌಡ

ಮುಂಬೈ: ಸಚಿವ ಡಿ.ಕೆ ಶಿವಕುಮಾರ್, ಜಿಟಿ ದೇವೇಗೌಡ ಹಾಗೂ ಬಾಲಕೃಷ್ಣ ಅವರ ಜೊತೆ ನನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾವು ಹೋಟೆಲ್ ಒಳಗೆ ಹೋದರೆ ಬಿಜೆಪಿ ಅವರ ಬಣ್ಣ ಬಯಲಾಗುತ್ತೆ ಎಂದು ನಮ್ಮನ್ನು ಒಳಗೆ ಬಿಟ್ಟಿಲ್ಲವೆಂದು ಶಾಸಕ ಶಿವಲಿಂಗೇಗೌಡ ವಾಗ್ದಾಳಿ ನಡೆಸಿದ್ದಾರೆ.

ಪೊಲೀಸರ ವಶದಲ್ಲಿರುವ ಶಿವಲಿಂಗೇಗೌಡ ಅವರು ಫೋನ್‍ನಲ್ಲಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಸಚಿವ ಡಿ.ಕೆ ಶಿವಕುಮಾರ್, ಜಿಟಿ ದೇವೇಗೌಡ ಹಾಗೂ ಬಾಲಕೃಷ್ಣ ಅವರ ಜೊತೆ ನನ್ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಕೆಶಿ ಅವರನ್ನು ಮುಂದೆ ಕಾರಿನಲ್ಲಿ ಕರೆದೊಯ್ದಿದ್ದಾರೆ. ನಮ್ಮನ್ನು ಪೊಲೀಸ್ ವಾಹನದಲ್ಲಿ ಕರೆದೊಯ್ಯುತ್ತಿದ್ದಾರೆ. ಇದೆಲ್ಲಾ ಬಿಜೆಪಿ ಷಡ್ಯಂತ್ರ ಎಂದು ಕಿಡಿಕಾರಿದರು. ಇದನ್ನೂ ಓದಿ:ಪೊಲೀಸ್ ವಶಕ್ಕೆ ಡಿ.ಕೆ ಶಿವಕುಮಾರ್

ನಿಜ ಹೇಳುತ್ತಿದ್ದೇನೆ ನಾವು ಇಂದು ಇಲ್ಲಿಗೆ ಬಂದಿದ್ದು ನಮಗೆ ದೊರೆತ ಮಾಹಿತಿಯಿಂದ. ನಮ್ಮ ಶಾಸಕರು ಬಿಜೆಪಿ ವಶದಲ್ಲಿದ್ದಾರೆ, ಆರ್ ಅಶೋಕ್ ಹಾಗೂ ಮಾಜಿ ಮೇಯರ್ ನಮ್ಮವರನ್ನು ಭೇಟಿಯಾಗಿದ್ದಾರೆ. ಹೋಟೆಲ್‍ನಲ್ಲಿ ಬಿಜೆಪಿ ನಾಯಕರು ನಮ್ಮವರನ್ನು ಬಲವಂತವಾಗಿ ಇಟ್ಟಿದ್ದಾರೆ ಎನ್ನುವ ಮಾಹಿತಿ ಬಂದಿತ್ತು. ಈ ಬಗ್ಗೆ ತಿಳಿದು ನಾವು ಶಾಸಕರ ಮನವೊಲಿಸಲು ಡಿ.ಕೆ.ಶಿ ಅವರ ಜೊತೆ ಇಲ್ಲಿ ಬಂದೆವು. ನಾವು ಬಂದಿಲ್ಲ ಎಂದರೆ ಮನವೊಳಿಸಲು ಯಾರು ಬಂದಿಲ್ಲ ಎಂದು ಅತೃಪ್ತ ಶಾಸಕರು ಹೇಳುತ್ತಾರೆ. ಹಾಗೆಯೇ ಕೆಲ ಶಾಸಕರು ಫೋನ್ ಮಾಡಿ ಹಿರಿಯ ನಾಯಕರು ಬಂದು ಅತೃಪ್ತರ ಬಳಿ ಮಾತನಾಡಿ ಎಂದಿದ್ದರು. ಹೀಗಾಗಿ ನಾವು ಬಂದೆವು ಎಂದು ತಿಳಿಸಿದರು.

ನಾವು ಹೋಟೆಲ್‍ನಲ್ಲಿ ರೂಮ್ ಬುಕ್ ಮಾಡಿದ್ದರು ನಮ್ಮನ್ನು ಒಳಗೆ ಬಿಟ್ಟಿಲ್ಲ. ಮಹಾರಾಷ್ಟ್ರ ಹಾಗೂ ಕರ್ನಾಟಕ ಬಿಜೆಪಿ ನಾಯಕರು ಹೋಟೆಲ್ ಒಳಗೆ ಇದ್ದಾರೆ. ಇದು ಬಿಜೆಪಿ ಷಡ್ಯಂತ್ರ. ಈ ವಿಚಾರ ಎಲ್ಲರಿಗೂ ಗೊತ್ತು ಎಂದು ವಾಗ್ದಾಳಿ ನಡೆಸಿದರು.

Comments

Leave a Reply

Your email address will not be published. Required fields are marked *