ಮಿನಿಸಮರ ಘೋಷಣೆ ಬೆನ್ನಲ್ಲೇ ಗರಿಗೆದರಿದ ಪಾಲಿಟಿಕ್ಸ್ – ಮಂಡ್ಯ ಗೆಲುವಿಗೆ ಬಿಜೆಪಿಯಿಂದ ತ್ರಿ-ಪ್ಲಾನ್

ಬೆಂಗಳೂರು: ಮಿನಿಸಮರ ಘೋಷಣೆ ಬೆನ್ನಲ್ಲೇ ರಾಜಕೀಯ ಗರಿಗೆದರಿದ್ದು, ಮಂಡ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಒಂದಾಗುವ ಸಾಧ್ಯತೆಯಿದ್ದು, ಬಿಜೆಪಿ ಎದುರಾಳಿಯಾಗಿ ನಿಲ್ಲಲಿದೆ. ಪ್ರತಿಷ್ಠೆಯ ಕಣವಾಗಿ ಮಾರ್ಪಾಡಿಸಲು ಬಿಜೆಪಿ ಪ್ಲಾನ್ ಮಾಡಿದ್ದು, ಮೂರು ಟಾರ್ಗೆಟ್ ಫಿಕ್ಸ್ ಮಾಡಿದೆ.

ಸಕ್ಕರೆ ನಾಡಿನ ಜನರ ಅಕ್ಕರೆ ಗಿಟ್ಟಿಸಲು ಬಿಜೆಪಿ ಮಾಸ್ಟರ್ ಗೇಮ್‍ಗೆ ಕೈ ಹಾಕಿದೆ. ಆದ್ರೆ ಅಕ್ಕರೆ ಗಿಟ್ಟಿಸಲು ನೆಲೆಕಂಡುಕೊಂಡಿರುವವರ ಜತೆ ಸೆಣಸುವುದು ಅಷ್ಟು ಸುಲಭವಲ್ಲ. ಅದಕ್ಕಾಗಿ ಘಟಾನುಘಟಿ ಅಭ್ಯರ್ಥಿಗಳ ಹುಡುಕಾಟ ನಡೆಸಲು ಬಿಜೆಪಿ ಮುಂದಾಗಿದೆ. ಮಂಡ್ಯ ಲೋಕಸಭಾ ಉಪಚುನಾವಣೆಯನ್ನ ಬಿಜೆಪಿ ಪ್ರತಿಷ್ಠೆಯಾಗಿ ತೆಗೆದುಕೊಂಡು, ಸೆಡ್ಡು ಹೊಡೆಯಲು ಮೂರು ಟಾರ್ಗೆಟ್ ಹಾಕಿಕೊಂಡಿದೆ. ನಾಲ್ಕೈದು ದಿನದಲ್ಲಿ ಬಿಜೆಪಿ ಅಭ್ಯರ್ಥಿ ಫೈನಲ್ ಮಾಡಬೇಕಿದ್ದು, ಸರ್ಕಸ್ ಶುರುವಾಗಿದೆ.

ಬಿಜೆಪಿಯ ‘ಆ’ ಪ್ಲಾನ್ ಏನು?
ಮಾಜಿ ಡಿಸಿಎಂ ಅವರು ಆರ್.ಅಶೋಕ್ ಅವರು ಒಕ್ಕಲಿಗ ಸಮುದಾಯದ ಪ್ರಭಾವಿ ಬಿಜೆಪಿ ನಾಯಕರಾಗಿದ್ದು, ಮಂಡ್ಯ ಭಾಗದಲ್ಲಿ ಹೆಚ್ಚು ಚಿರಪರಿಚಿತ ಲೀಡರ್ ಆಗಿದ್ದಾರೆ. ಅಲ್ಲದೇ ಇವರಿಗೆ ಈಗಾಗಲೇ ಮಂಡ್ಯದಲ್ಲಿ ಪಕ್ಷ ಸಂಘಟನೆಗೆ ಮಾಡಿದ ಅನುಭವವಿದೆ. ಆದ್ರೆ ಬೆಂಗಳೂರು ಬಿಟ್ಟು ಮಂಡ್ಯಕ್ಕೆ ಹೋಗಲು ಒಪ್ಪುತ್ತಾರಾ ಎಂಬುದು ಪ್ರಶ್ನೆಯಾಗಿದೆ.

ಮಾಜಿ ಸಚಿವ ಚಲುವರಾಯಸ್ವಾಮಿ ಅವರು ಸದ್ಯ ಕಾಂಗ್ರೆಸ್‍ನಲ್ಲಿರುವ ಮಾಜಿ ಸಚಿವರಾಗಿದ್ದಾರೆ. ಇವರು ಈ ಹಿಂದೆ ಜೆಡಿಎಸ್‍ನಲ್ಲಿ ಇದ್ದರು. ನಾಗಮಂಗಲ ವಿಧಾನಸಭಾ ಕ್ಷೇತ್ರದಿಂದ ಸೋತಿರುವ ಚಲುವರಾಯಸ್ವಾಮಿ, ಮಂಡ್ಯ ರಾಜಕಾರಣದ ಬಗ್ಗೆ ಇಂಚಿಂಚೂ ಗೇಮ್ ಗೊತ್ತಿರುವ ನಾಯಕರಾಗಿದ್ದಾರೆ. ಹೀಗಾಗಿ ಇವರಿಗೆ ಆಹ್ವಾನ ಕೊಟ್ಟು, ಬಿಜೆಪಿಯಿಂದ ಅಖಾಡಕ್ಕಿಳಿಸಲು ಮೆಗಾ ಪ್ಲಾನ್ ಮಾಲಾಗುತ್ತಿದೆ. ಆದ್ರೆ ಚಲುವರಾಯಸ್ವಾಮಿ ಒಪ್ಪುವ ಸಾಧ್ಯತೆ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.

ಅಂದಹಾಗೆ ಈ ಇಬ್ಬರು ಫೈಟರ್ ಹುಡುಕಾಟದ ಬಗ್ಗೆ ನಿಮಗೆ ಗೊತ್ತಿದೆ. ಆದ್ರೆ ಮತ್ತೊಬ್ಬ ಫೈಟರ್ ಟಾರ್ಗೆಟ್ ಮಾಡಿಕೊಂಡಿದೆಯಂತೆ ಬಿಜೆಪಿ. ಅಚ್ಚರಿಯ ಟಾರ್ಗೆಟ್ ಇದಾಗಿದ್ದು, ಈ ಫೈಟರ್ ಒಪ್ಪಿದ್ರೆ ಬಿಜೆಪಿ ಬಿಗ್ ಫೈಟ್ ನೀಡುತ್ತಂತೆ. ಈ ಫೈಟರ್ ಹುಡುಕಾಟವನ್ನು ರಹಸ್ಯವಾಗಿಯೇ ಇಟ್ಟಿದ್ದು, ಅವರು ಒಪ್ಪಿದ್ರೆ ಮೂರು ದಿನಗಳ ಬಳಿಕ ಅಧಿಕೃತ ಘೋಷಣೆ ಮಾಡ್ತಾರೆ ಎನ್ನಲಾಗಿದೆ. ಇವರು ಮಂಡ್ಯ ರಾಜಕಾರಣ ಬಲ್ಲವರಂತೆ. ಜೆಡಿಎಸ್‍ಗೆ ಪ್ರಬಲ ಪೈಪೋಟಿ ನೀಡುವ ಅಚ್ಚರಿ ಅಂತಾ ಬಿಜೆಪಿ ನಾಯಕರು ಹೇಳ್ತಿದ್ದಾರೆ.

ಒಟ್ಟಿನಲ್ಲಿ ಇಷ್ಟು ದಿನ ಕಾಂಗ್ರೆಸ್, ಜೆಡಿಎಸ್ ನಡುವೆ ಕಾಳಗ ನಡೀತಾ ಇದ್ದ ಮಂಡ್ಯದಲ್ಲೀಗ ಇಬ್ಬರು ಒಂದಾಗಿದ್ದಾರೆ, ಇಲ್ಲಿ ಇಬ್ಬರಿಗೂ ಪೈಪೋಟಿ ಬಿಜೆಪಿಯಾಗಿದ್ದು, ಎಷ್ಟರ ಮಟ್ಟಿಗೆ ಕಾದಾಟ ನಡೆಯುತ್ತೆ, ಬಿಜೆಪಿ ಸುಲಭವಾಗಿ ಬಿಟ್ಟುಕೊಡುತ್ತಾ ಅಥವಾ ಕಠಿಣ ಸ್ಪರ್ಧೆ ಕೊಡುತ್ತಾ ಅನ್ನೋದನ್ನ ನವೆಂಬರ್ 6ರ ವರೆಗೆ ಕಾದುನೋಡಬೇಕು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *