ಬಿಟ್‌ ಕಾಯಿನ್‌ ಪ್ರಕರಣವನ್ನು ತನಿಖಾ ಸಂಸ್ಥೆಗೆ ವಹಿಸಿ: ಸಿಎಂಗೆ ಖಾಶೆಂಪೂರ್‌ ಮನವಿ

ಬೀದರ್: ಬಿಟ್‌ ಕಾಯಿನ್‌ ಪ್ರಕರಣವನ್ನು ಯಾವುದಾದರು ತನಿಖಾ ಸಂಸ್ಥೆಗೆ ತನಿಖೆ ನಡೆಸಲು ಸಿಎಂ ವಹಿಸಬೇಕು ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್ ಒತ್ತಾಯಿಸಿದ್ದಾರೆ.

ಬಿಟ್ ಕಾಯಿನ್ ಇದೆಯೋ ಅಥವಾ ಯಾವ ಕಾಯಿನ್ ಇದೆಯೋ ನನಗೆ ಗೊತ್ತಿಲ್ಲ. ನನಗೆ ರಿಸರ್ವ್ ಬ್ಯಾಂಕ್ ಕಾಯಿನ್ ಮಾತ್ರ ಗೊತ್ತು. ಈ ಪ್ರಕರಣದಲ್ಲಿ ಯಾರು ಭಾಗಿಯಾಗಿದ್ದಾರೆ ಎಂದು ಸರ್ಕಾರ ಮುಕ್ತವಾಗಿ ತನಿಖೆ ಮಾಡಲಿ. ಆ ಪಕ್ಷ, ಈ ಪಕ್ಷ ಅಂತ ಪ್ರಕರಣವನ್ನು ರಹಸ್ಯವಾಗಿ ಇಡುವುದು ಬೇಡ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಣದ ವಿಚಾರಕ್ಕೆ ಜೋಡಿ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳು ಅರೆಸ್ಟ್‌!

basavaraj bommai

ಆರೋಪ ಬಂದಾಗ ಸರ್ಕಾರದಲ್ಲಿದ್ದವರು ಮುಕ್ತವಾದ ತನಿಖೆಗೆ ಅವಕಾಶ ನೀಡಬೇಕು. ಆದರೆ ವಿರೋಧ ಪಕ್ಷ ಹಾಗೂ ಆಡಳಿತ ಪಕ್ಷದವರು ಪರಸ್ಪರರ ಮೇಲೆ ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬಿಟ್ ಕಾಯಿನ್ ಎಂದರೇನು? ನಮ್ಮಂತವರಿಗೆ ಸಿದ್ದರಾಮಯ್ಯನವರು ವಿವರಿಸಲಿ: ಪ್ರತಾಪ್ ಸಿಂಹ

 

Comments

Leave a Reply

Your email address will not be published. Required fields are marked *