ಪರಪ್ಪನ ಅಗ್ರಹಾರದಲ್ಲಿ ನಡೇತಿದೆ ಬಿಂದಾಸ್ ಹುಟ್ಟುಹಬ್ಬದ ಪಾರ್ಟಿ!

ಬೆಂಗಳೂರು: ಇಲ್ಲಿನ ಪರಪ್ಪನ ಅಗ್ರಹಾರ ಜೈಲಿನ ಅಕ್ರಮಗಳ ಬಗ್ಗೆ ಉಪ ನಿರೀಕ್ಷಕಿ ರೂಪಾ ವರದಿ ನೀಡಿದ ಬಳಿಕ ಇದೀಗ ಮತ್ತೊಂದು ಕರ್ಮಕಾಂಡ ಬಯಲಾಗಿದ್ದು, ಸೆಂಟ್ರಲ್ ಜೈಲ್‍ನಲ್ಲಿ ಅಧಿಕಾರಿಗಳಿಗೆ ದುಡ್ಡು ಕೊಟ್ರೆ ಪಾರ್ಟಿ ಮಾಡಬಹುದಾಗಿದೆ.

ಹೌದು. ಜೈಲಿನಲ್ಲೇ ಭರ್ಜರಿ ಬರ್ತ್ ಡೇ ಪಾರ್ಟಿ ಮಾಡೋ ಎಕ್ಸ್ ಕ್ಲೂಸೀವ್ ದೃಶ್ಯವೊಂದು ಇದೀಗ ಪಬ್ಲಿಕ್ ಟಿವಿಗೆ ಲಭಿಸಿದೆ. ವಿಚಾರಣಾಧೀನ ಕೈದಿಯೊಬ್ಬ ಜೈಲಿನಲ್ಲೇ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾನೆ. ಅಲ್ಲದೇ ಸಹ ಖೈದಿಗಳಿಗೆಲ್ಲ ಬರ್ತ್ ಡೇ ಪಾರ್ಟಿ ಕೊಟ್ಟಿದ್ದಾನೆ. ಈ ಪಾರ್ಟಿ ಸೆಂಟ್ರಲ್ ಜೈಲ್‍ನ ಇ ಬ್ಲಾಕ್‍ನಲ್ಲಿ ನಡೆದಿದೆ.

ಕ್ಯಾತೆ ಚೇತನ್ ಅನ್ನುವ ವಿಚಾರಣಾ ಖೈದಿಯ ಬರ್ತ್ ಡೇ ಸೆಲೆಬ್ರೇಶನ್ ಮಾಡಿದ್ದು, ಈತನಿಗೆ ಜೈಲು ಸಿಬ್ಬಂದಿಯೇ ಕೇಕ್ ತಂದುಕೊಟ್ಟಿದ್ದಾರೆ ಅನ್ನೋ ಮಾಹಿತಿಯೊಂದು ಹೊರಬಿದ್ದಿದೆ.

ಡಿಐಜಿ ವಿರುದ್ಧ ತಿರುಗಿ ಬಿದ್ದ ಮಹಿಳಾ ಕೈದಿಗಳು: ಪರಪ್ಪನ ಅಗ್ರಹಾರ ಜೈಲಲ್ಲಿ ರಾಜಾತಿಥ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಐಜಿಯ ಮೇಲೆ ಇಬ್ಬರು ಮಹಿಳಾ ಕೈದಿಗಳು ಹರಿಹಾಯ್ದಿದ್ದಾರೆ. ಮೇರಿ ಮತ್ತು ರೇಖಾ ಡಿಐಜಿ ರೂಪಾ ವಿರುದ್ಧ ತಿರುಗಿಬಿದ್ದದ್ದು, ಇವರನ್ನು ತುಮಕೂರು ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಸ್ಥಳಾಂತರ ಮಾಡಲಾಗಿತ್ತು. ಮೇರಿ ಮತ್ತು ರೇಖಾ ಇಬ್ಬರಿಗೂ ತಮಿಳು ಚೆನ್ನಾಗಿ ಬರುತ್ತೆ ಅಂತ ಶಶಿಕಲಾ ಸೇವೆಗೆ ನಿಯೋಜನೆ ಮಾಡಿದ್ರು. ಹೀಗಾಗಿ ಇವರಿಬ್ಬರೂ ಶಶಿಕಲಾ ಸೇವೆ ಮಾಡುತ್ತಿದ್ದರು. ಇದೀಗ ಶಶಿಕಲಾ ಅಕ್ರಮವನ್ನು ಡಿಐಜಿ ರೂಪಾ ಬಯಲಿಗೆಳೆದಕ್ಕೆ ಕೋಪಗೊಂಡಿದ್ದ ಈ ಇಬ್ಬರು, ಡಿಐಜಿ ರೂಪ ಜೈಲಿಗೆ ಭೇಟಿ ನೀಡಿದಾಗ ಪ್ರತಿಭಟನೆಗೆ ಪ್ರಚೋದನೆ ನೀಡಿದ್ದಾರೆ.

ಇದನ್ನೂ ಓದಿ: ಬಗೆದಷ್ಟೂ ಪರಪ್ಪನ ಅಗ್ರಹಾರದ ಕರ್ಮಕಾಂಡ ಬಯಲು: ಇಲ್ಲಿ ಎಣ್ಣೆ ಪಾರ್ಟಿ ಖುಲ್ಲಂಖುಲ್ಲಾ, ಜೈಲು ವಾರ್ಡನ್ ಎದುರೇ ಇಸ್ಪೀಟ್ ಆಟ

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ತಿಂಗಳಿಗೆ 20 ಲಕ್ಷ ರೂ. ಕಲೆಕ್ಷನ್ – ಇಡೀ ಜೈಲನ್ನು ಮೇಂಟೇನ್ ಮಾಡೋದು ಪ್ರತಿಭಾ ಹಂತಕ

 

Comments

Leave a Reply

Your email address will not be published. Required fields are marked *