ಬರ್ತ್‍ಡೇ ಕ್ಯಾಂಡಲ್ ಊದುವಾಗ ಕೂದಲಿಗೆ ಬೆಂಕಿ – ಕಿರುಚಾಡಿದ ಟಿವಿ ಸ್ಟಾರ್

birthday candle

ವಾಷಿಂಗ್ಟನ್: ಹುಟ್ಟುಹಬ್ಬದ ಸಮಾರಂಭದಲ್ಲಿ ಬರ್ತ್‍ಡೇ ಕ್ಯಾಂಡಲ್ ಊದುವಾಗ ಅಮೇರಿಕ ಸ್ಟಾರ್ ನಟಿ ನಿಕೋಲ್ ರಿಚಿ ಕೂದಲಿಗೆ ಬೆಂಕಿ ಹೊತ್ತಿ ಕಿರುಚಾಡಿದ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

birthday candle

ಸಾಮಾನ್ಯವಾಗಿ ಬರ್ತ್‍ಡೇ ದಿನ ಪ್ರತಿಯಬ್ಬರು ತಮ್ಮ ಪ್ರೀತಿ ಪಾತ್ರರೊಂದಿಗೆ ಇರಲು ಇಚ್ಛಿಸುತ್ತಾರೆ. ಅದರಲ್ಲಿಯೂ ಕೇಕ್, ಮೇಣದ ಬತ್ತಿ, ಬರ್ತ್‍ಡೇ ಕ್ಯಾಪ್ ಇವೆಲ್ಲವೂ ಸದಾ ನೆನಪಿನಲ್ಲಿ ಉಳಿಯುತ್ತದೆ. ಆದರೆ ಅಮೇರಿಕದ ಟಿವಿ ಸ್ಟಾರ್ ನಿಕೋಲ್ ರಿಚಿಯವರ 40ನೇ ವರ್ಷದ ಹುಟ್ಟುಹಬ್ಬದ ದಿನದಂದು ನಡೆದಿದ್ದೇ ಬೇರೆಯಾಗಿದೆ. ಸದ್ಯ ಈ ವೀಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, ಬರ್ತ್‍ಡೇ ಸಮಾರಂಭದಲ್ಲಿ ನಿಕೋಲ್ ರಿಚಿ ಮಾತ್ರವಲ್ಲ ಪಾರ್ಟಿಗೆ ಆಗಮಿಸಿದ್ದವರು ಕೂಡ ಈ ಘಟನೆಯನ್ನು ಸದಾ ನೆನಪಿನಲ್ಲಿಟ್ಟುಕೊಂಡಿರುತ್ತಾರೆ. ಇದನ್ನೂ ಓದಿ: ಮೂಲೆಗುಂಪಾಗಿರೋ ಕಾಂಗ್ರೆಸ್ ಟಾಂಗಾ, ಸೈಕಲ್ ಓಡಿಸೋದಕ್ಕೆ ಮಾತ್ರ ಸೀಮಿತ: ಆರ್. ಅಶೋಕ್

ಸೆಪ್ಟೆಂಬರ್ 21ರಂದು 40ನೇ ವಸಂತಕ್ಕೆ ಕಾಲಿಟ್ಟ ರಿಚಿ, ಕುಟುಂಬ ಮತ್ತು ಸ್ನೇಹಿತರೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ವೇಳೆ ಕಪ್ಪು ಬಣ್ಣದ ಆಫ್ ಶೋಲ್ಡರ್ ಟಾಪ್ ಧರಿಸಿ, ಕೇಕ್ ಮೇಲೆ ನಿಲ್ಲಿಸಿದ್ದ ಕ್ಯಾಂಡಲ್‍ನನ್ನು ಊದಲು ಮುಂದಕ್ಕೆ ವಾಲಿದಾಗ ರಿಚಿ ಗುಂಗುರು ಕೂದಲು ಕ್ಯಾಂಡಲ್‍ಗೆ ತಾಗಿ ಬೆಂಕಿ ಹೊತ್ತಿಕೊಳ್ಳುತ್ತದೆ. ಈ ವೇಳೆ ಗಾಬರಿಗೊಂಡ ರಿಚಿ ಕಿರುಚಾಡುತ್ತಾ ಕೂದಲನ್ನು ಹೊಡೆದುಕೊಳ್ಳುತ್ತಾರೆ. ಆಗ ಇತರರು ಕೂಡ ಆಕೆಗೆ ಸಹಾಯ ಮಾಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.

ಸದ್ಯ ಹುಟ್ಟುಹಬ್ಬದ ದಿನದಂದು ತಮ್ಮ ಅನುಯಾಯಿಗಳೊಂದಿಗೆ ನಡೆದ ಈ ಅಹಿತಕರವಾದ ಘಟನೆಯನ್ನು ರಿಚಿಯವರು ಹಂಚಿಕೊಂಡಿದ್ದಾರೆ. ವೈರಲ್ ಆಗುತ್ತಿರುವ ಈ ವೀಡಿಯೋ, ಇಲ್ಲಿಯವರೆಗೂ 2.8 ಮಿಲಿಯನ್‌ಗೂ  ಅಧಿಕ ಮಂದಿ ವೀಕ್ಷಿಸಿದ್ದು, ಕೆಲವರು  ಅದೃಷ್ಟವಶಾತ್ ಒಳ್ಳೆಯದಾಯಿತು ಎಂದರೆ, ಮತ್ತಷ್ಟು ಮಂದಿ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ. ಇದನ್ನೂ ಓದಿ: ನಾನು ಸಾಮಾನ್ಯ ಮುನುಷ್ಯ, ನನಗೆ ಸೆಕ್ಯೂರಿಟಿ ಬೇಡವೆಂದ: ಪಂಜಾಬ್ ಸಿಎಂ

Comments

Leave a Reply

Your email address will not be published. Required fields are marked *