ಮೈಸೂರು: ಕನ್ನಡಿಯಲ್ಲಿ ಕಾಣುವ ತನ್ನದೇ ಪ್ರತಿಬಿಂಬವನ್ನು ನೋಡಿ ಇನ್ನೊಂದು ಹಕ್ಕಿ ಎಂದು ಭಾವಿಸಿ ಪಕ್ಷಿಯೊಂದು ಗುದ್ದಾಟ ಮಾಡಿರುವ ದೃಶ್ಯ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಎಲ್ಲರನ್ನು ನಗಿಸುವಂತೆ ಮಾಡಿದೆ.
ಪ್ರತಿದಿನ ಕುವೆಂಪುನಗರ ಪೊಲೀಸ್ ಠಾಣೆಯ ಸಿಬ್ಬಂದಿಯೊಬ್ಬರ ಬೈಕಿನ ಕನ್ನಡಿ ಮುಂದೆ ಕುಳಿತ ಪಕ್ಷಿ ತನ್ನ ಪ್ರತಿಬಿಂಬವನ್ನು ನೋಡಿ ಬೇರೊಂದು ಪಕ್ಷಿಯೆಂದು ತಿಳಿದು ತನ್ನ ಜಾಗದಲ್ಲಿ ಬಂದು ಕುಳಿತಿದೆ ಎಂದು ಭಾವಿಸಿ ಸಿಟ್ಟಿನಿಂದ ಫೈಟ್ ಮಾಡಲು ಮುಂದಾಗಿದೆ.
ತನ್ನ ಮೊನಚಾದ ಕೊಕ್ಕಿನಿಂದ ಪ್ರತಿಬಿಂಬದಲ್ಲಿರುವ ತನಗೆ ಕುಕ್ಕಲು ಪ್ರಾರಂಭಿಸಿದೆ. ಸ್ವಲ್ಪ ಹೊತ್ತಿನವರೆಗೂ ಗುದ್ದಾಡಿ ಹೋಗಿರಬೇಕು ಎಂದು ನೋಡಿದೆ. ಆದರೆ ಅದು ನೋಡಿದರೆ ಅದರದೇ ಪ್ರತಿಬಿಂಬ ಮತ್ತೆ ಕಂಡಿದೆ. ಮತ್ತೆ ಕೋಪಗೊಂಡು ಗುದ್ದಾಡಲು ಶುರು ಮಾಡಿದೆ.
ಈ ಪಕ್ಷಿ ನಗರದ ಕುವೆಂಪುನಗರ ಪೊಲೀಸ್ ಠಾಣೆಯ ಆವರಣದಲ್ಲೇ ಗೂಡನ್ನು ಕಟ್ಟಿಕೊಂಡು ಮರಿ ಮಾಡಿ ಕುಟುಂಬ ಬೆಳೆಸಿಕೊಂಡಿದೆ.
https://youtu.be/P3wCcI4FnnU

Leave a Reply