ಈ ಹಿಂದೆ ಶ್ರೀನಿವಾಸ ಕಲ್ಯಾಣ ಚಿತ್ರವನ್ನು ನಿರ್ದೇಶನ ಮಾಡಿ ನಟಿಸಿದ್ದವರು ಎಂ ಜಿ ಶ್ರೀನಿವಾಸ್ ಅವರೀಗ ಬೀರ್‌ಬಲ್ ಎಂಬ ಮತ್ತೊಂದು ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ತಾವೇ ನಾಯಕನಾಗಿಯೂ ನಟಿಸಿದ್ದಾರೆ. ಇದರ ಟ್ರೈಲರ್ ಅನ್ನು ಇದೀಗ ರಿಯಲ್ ಸ್ಟಾರ್ ಉಪೇಂದ್ರ ಬಿಡುಗಡೆ ಮಾಡಿದ್ದಾರೆ.
ಒಂದು ಮರ್ಡರ್ ಮಿಸ್ಟರಿಯ ಸೂಚನೆ ಕೊಡುವಂಥಾ ವೇಗದ ಟ್ರೈಲರ್ ಅನ್ನು ಬಹುವಾಗಿ ಮೆಚ್ಚಿಕೊಂಡೇ ಉಪ್ಪಿ ಬಿಡುಗಡೆ ಮಾಡಿದ್ದಾರೆ. ಬಿಡುಗಡೆಯಾದ ಕೆಲ ಹೊತ್ತಲ್ಲಿಯೇ ಈ ಟ್ರೈಲರ್ ಗೆ ಎಲ್ಲೆಡೆಯಿಂದಲೂ ಅದ್ಭುತ ಪ್ರತಿಕ್ರಿಯೆ ಕೇಳಿ ಬರಲಾರಂಭಿಸಿವೆ.

ಶ್ರೀನಿವಾಸ ಕಲ್ಯಾಣ ಚಿತ್ರದಲ್ಲಿ ಕಾಮಿಡಿ ಟ್ರ್ಯಾಕಿನಲ್ಲಿಯೇ ಭಿನ್ನವಾದೊಂದು ಕಥೆ ಹೇಳಿದ್ದವರು ಶ್ರೀನಿವಾಸ್. ಅದರ ಮೂಲಕ ನಟನಾಗಿ ನಿರ್ದೇಶಕನಾಗಿಯೂ ಅವರು ಗೆದ್ದಿದ್ದರು. ಆದರೆ ಎರಡನೇ ಪ್ರಯತ್ನವಾದ ಬೀರ್‌ಬಲ್ ಚಿತ್ರದಲ್ಲವರು ಸಸ್ಪೆನ್ಸ್ ಥ್ರಿಲ್ಲರ್ ಕಥೆಯೊಂದನ್ನು ಆರಿಸಿಕೊಂಡಿರುವಂತಿದೆ. ಇದೆಲ್ಲ ಏನೇ ಇದ್ದರೂ ಈ ಟ್ರೈಲರ್ ಅಂತೂ ಎಲ್ಲೆಡೆ ಹರಿದಾಡುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply