ನವದೆಹಲಿ: ತಮಿಳುನಾಡಿನ ಊಟಿಯಲ್ಲಿ ನಡೆದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ಬಿಪಿನ್ ರಾವತ್ ಅವರ ಪಾರ್ಥಿವ ಶರೀರವನ್ನು ಕೆಲಹೊತ್ತಿನಲ್ಲೇ ದೆಹಲಿಗೆ ರವಾನಿಸಲಾಗುತ್ತದೆ.

ತಮಿಳುನಾಡಿನ ಊಟದಲ್ಲಿ ನಡೆದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ಸೇರಿದಂತೆ 13 ಜನ ಬುಧವಾರ ಸಾವನ್ನಪ್ಪಿದ್ದರು. ಸದ್ಯ ಹುತಾತ್ಮ ಯೋಧರಿಗೆ ತಮಿಳುನಾಡು ಸಿಎಂ ಸ್ಟಾಲಿನ್ ಅವರು ವೆಲ್ಲಿಂಗ್ಟನ್ ಸೇನಾ ಕ್ಯಾಂಪಸ್‍ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಿದರು. ಇದನ್ನೂ ಓದಿ: ಸೇನಾ ಹೆಲಿಕಾಪ್ಟರ್ ಪತನ – ಬದುಕುಳಿದಿರುವ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಯಾರು ಗೊತ್ತಾ?

ಇದೀಗ ಬಿಪಿನ್ ರಾವತ್ ಅವರ ಪಾರ್ಥೀವ ಶರೀರವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲು, ಮಿಲಿಟರಿ ಆಸ್ಪತ್ರೆಯಿಂದ ಸೂಳೂರು ವಾಯುನೆಲೆಗೆ ರವಾನಿಸಲಾಗುತ್ತದೆ. ಬಳಿಕ ಸೇನಾ ವಿಮಾನದಲ್ಲಿ ಸೂಳೂರಿನಿಂದ ದೆಹಲಿಗೆ ರವಾನಿಸಲಾಗುತ್ತಿದೆ.

ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರವನ್ನು ರವಾನಿಸಲಾಗುತ್ತಿದೆ. ಸೇನಾ ವಿಮಾನದಲ್ಲಿ ರಾವತ್, ಪತ್ನಿ ಮೃತದೇಹ ದೆಹಲಿಗೆ ರವಾನೆಯಾಗಲಿದೆ. ನಾಳೆ ಬೆಳಗ್ಗೆ 11ರಿಂದ ಮಧ್ಯಾಹ್ನ 2ರವರೆಗೆ ದೆಹಲಿಯ ರಾವತ್ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಬಳಿಕ ಕಾಮ್‍ರಾಜ್ ಮಾರ್ಗದಿಂದ ಅಂತಿಮಯಾತ್ರೆ ನಡೆಯಲಿದ್ದು, ದೆಹಲಿ ಕಂಟೋನ್‍ಮೆಂಟ್‍ನ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇದನ್ನೂ ಓದಿ: ಇಂದು ಸಂಜೆ ದೆಹಲಿಗೆ ರಾವತ್ ಪಾರ್ಥಿವ ಶರೀರ – ನಾಳೆ ಮಧ್ಯಾಹ್ನವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ

Leave a Reply