ಜನ ಕೆಲಸಕ್ಕೆ ಮನ್ನಣೆ ನೀಡ್ತಾರೆ, ಹಣಕ್ಕಲ್ಲ: ದಿನೇಶ್ ಗುಂಡೂರಾವ್ ಗೆ ಐಶ್ವರ್ಯ ಟಾಂಗ್

ಬೆಂಗಳೂರು: ಬಿನ್ನಿಪೇಟೆ ವಾರ್ಡ್ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಜೆಡಿಎಸ್ ಅಭ್ಯರ್ಥಿ ಐಶ್ವರ್ಯ ನಾಗರಾಜ್ ಅವರು 1,939 ಮತಗಳ ಅಂತರದಲ್ಲಿ ಜಯಸಾಧಿಸಿದ್ದಾರೆ.

ಜೆಡಿಎಸ್ ಅಭ್ಯರ್ಥಿ ಐಶ್ವರ್ಯಾ ಅವರು 7,188 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಇನ್ನು ಕಾಂಗ್ರೆಸ್ ಅಭ್ಯರ್ಥಿ ವಿದ್ಯಾ ಅವರು 5,243 ಮತಗಳನ್ನು ಪಡೆದು ಪರಾಭವಗೊಂಡಿದ್ದಾರೆ. ಬಿಜೆಪಿಯ ಚಾಮುಂಡೇಶ್ವರಿ ಅವರು 2,445 ಮತಗಳನ್ನು ಪಡೆದಿದ್ದಾರೆ. ಒಟ್ಟಿನಲ್ಲಿ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅವರ ಅಧೀನದಲ್ಲಿದ್ದ ಬಿನ್ನಿಪೇಟೆ ವಾರ್ಡ್, ಈ ಬಾರಿ ಜೆಡಿಎಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಇದನ್ನು ಓದಿ: ಇಂದು ಬಿನ್ನಿಪೇಟೆ ವಾರ್ಡ್ ಉಪಚುನಾವಣೆ ಫಲಿತಾಂಶ

ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಐಶ್ವರ್ಯ ನಾಗರಾಜ್ ಅವರು, ನಮ್ಮ ತಾಯಿ ಈ ಗೆಲುವಿನ ಮೂಲಕ ಜೀವಂತವಾಗಿದ್ದಾರೆ ಎನ್ನುತ್ತ ದಿವಂಗತ ಮಹದೇವಮ್ಮ ಅವರನ್ನು ನೆನೆದು ಭಾವುಕರಾದರು. ಈ ಗೆಲುವನ್ನು ಜೆಡಿಎಸ್ ವರಿಷ್ಠ ದೇವೇಗೌಡ, ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಕ್ಷೇತ್ರದ ಜನತೆಗೆ ಅರ್ಪಿಸುತ್ತೇನೆ. ನನ್ನ ತಂದೆ-ತಾಯಿ ಅವರ ಸೇವೆಯನ್ನು ಜನ ಗುರುತಿಸಿದ್ದಾರೆ ಎಂದು ನೆನೆಪಿಸಿಕೊಂಡರು.

ಜನ ಕೆಲಸಕ್ಕೆ ಮನ್ನಣೆ ನೀಡುತ್ತಾರೆ, ಹಣಕ್ಕೆ ಅಲ್ಲ ಎನ್ನುವ ಸಂದೇಶವನ್ನು ಮತದಾರರು ತಿಳಿಸಿದ್ದಾರೆ. ಬಿನ್ನಿಪೇಟೆ ಅಂದ್ರೆ ಕಾಂಗ್ರೆಸ್, ಕಾಂಗ್ರೆಸ್ ಇಲ್ಲದೆ ಬಿನ್ನಿಪೇಟೆ ಇಲ್ಲ ಎಂದು ದಿನೇಶ್ ಗುಂಡೂರಾವ್ ಭಾವಿಸಿದ್ದರು. ಅದರೆ ಈಗ ಬಿನ್ನಿಪೇಟೆ ಅಂದ್ರೆ ಬಿಟಿಎಸ್ ನಾಗರಾಜ್ ಅಂತಾ ಜನ ಉತ್ತರಿಸಿದ್ದಾರೆ ಎಂದು ಗುಂಡೂರಾವ್ ವಿರುದ್ಧ ಐಶ್ವರ್ಯ ವಾಗ್ದಾಳಿ ನಡೆಸಿದರು.

https://youtu.be/NjT2yLFgZZ4

Comments

Leave a Reply

Your email address will not be published. Required fields are marked *