ಶಬರಿಮಲೆ ಪ್ರವೇಶಿಸಿದ್ದ ಬಿಂದು ಮೇಲೆ ನಡು ರಸ್ತೆಯಲ್ಲಿ ದಾಳಿ – ಆರೋಪಿ ಅರೆಸ್ಟ್

ತಿರುವನಂತಪುರಂ: ಶಬರಿಮಲೆ ದೇಗುಲ ಪ್ರವೇಶಿಸಿದ ಮೊದಲ ಮಹಿಳೆ ಬಿಂದು ಮೇಲೆ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದಾನೆ.

2018 ರಲ್ಲಿ ಶಬರಿಮಲೆ ದೇವಾಲಯವನ್ನು ಪ್ರವೇಶಿಸಿದ ಮೊದಲ ಮಹಿಳೆ ದಲಿತ ಕಾರ್ಯಕರ್ತೆ ಬಿಂದು ಅಮ್ಮಿಣಿ ಅವರ ಮೇಲೆ ಉತ್ತರ ಕೇರಳದ ಕೋಝಿಕ್ಕೋಡ್‍ನಲ್ಲಿ ವ್ಯಕ್ತಿಯೊಬ್ಬ ದಾಳಿ ನಡೆಸಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ಮೋದಿ ಮೇಲೆ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮೇಲೆ ನಡೆದ ದಾಳಿ: ಕಂಗನಾ

ಮೋಹನ್ ದಾಸ್ ಬಂಧಿತ ಆರೋಪಿ. ಪೊಲೀಸ್ ಠಾಣೆಗೆ ಶರಣಾಗಲು ತೆರಳುತ್ತಿದ್ದ ವೇಳೆ ಪೊಲೀಸರು ಆತನನ್ನು ಬಂಧಿಸಿದ್ದಾರೆ. ಮದ್ಯದ ಅಮಲಿನಲ್ಲಿದ್ದ ವೇಳೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ.

ಈ ಕುರಿತು ಅಮ್ಮಿಣಿ ಅವರು ಪೊಲೀಸರಿಗೆ ದೂರು ನೀಡಿದ್ದು, ಸಮುದ್ರತೀರದಲ್ಲಿ RSS ಬೆಂಬಲಿತ ವ್ಯಕ್ತಿಯೊಬ್ಬ ನನ್ನ ಮೇಲೆ ಹಲ್ಲೆ ಮಾಡಿದ್ದಾನೆ. ರಸ್ತೆಯಲ್ಲಿ ನಾನು ನೆಲಕ್ಕೆ ಬೀಳುವವರೆಗೂ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದಾಖಲಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ಅಮ್ಮಿಣಿ ಅವರು, ಇದು ನನ್ನ ಮೇಲೆ ಮೊದಲ ಬಾರಿ ನಡೆಯುತ್ತಿರುವ ದಾಳಿಯಲ್ಲ. ನನ್ನನ್ನು ಹಿಂದೂ ಸಂಘಟನೆಗಳು ಯಾವಾಗಲೂ ಗುರಿಯಾಗಿಸಿಕೊಂಡಿದೆ. ಕಳೆದ ತಿಂಗಳು ಆಟೋ ಚಾಲಕನೊಬ್ಬ ನನ್ನ ಮೇಲೆ ವೇಗವಾಗಿ ಬಂದು ಡಿಕ್ಕಿ ಹೊಡೆದಿದ್ದ. ಈ ಪರಿಣಾಮ ನಾನು ಆಸ್ಪತ್ರೆಯಲ್ಲಿ ದಾಖಲಾಗಿದ್ದೆ ಎಂದಿದ್ದಾರೆ.

ವಕೀಲರೊಬ್ಬರನ್ನು ಸಂಪರ್ಕಿಸಲು ನಾನು ಸಮುದ್ರತೀರಕ್ಕೆ ಬಂದಿದ್ದೆ. ಆದರೆ ಇದ್ದಕ್ಕಿದ್ದಂತೆ ಒಬ್ಬ ವ್ಯಕ್ತಿ ಬಂದು ನನ್ನ ಬೈಕ್ ಅನ್ನು ತಡೆದಿದ್ದು, ನನ್ನ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದ. ಸ್ಥಳದಲ್ಲಿದ್ದ ಜನರು ಬಂದಾಗ ಆತ ಅಲ್ಲಿಂದ ಓಡಿ ಹೋದ. ನನ್ನ ಮೇಲೆ ಬೇಕೆಂದು ಈ ದಾಳಿ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಇದನ್ನೂ ಓದಿ:  ಶಿಕ್ಷಕಿ ಮನೆಯಲ್ಲಿ ಕಳ್ಳತನ – ಗೋಡೆ ಮೇಲೆ ಅಶ್ಲೀಲ ಚಿತ್ರ ಬಿಡಿಸಿ ವಿಕೃತಿ

ದಾಳಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಅಮ್ಮಣಿ ಅವರಿಗೆ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿತ್ತು. ಆದರೆ ನಂತರ ಅದನ್ನು ಹಿಂಪಡೆಯಲಾಯಿತು.

ಸುಪ್ರೀಂ ಕೋರ್ಟ್ ಶಬರಿಮಲೆಗೆ ಮಹಿಳಾ ಭಕ್ತರು ಪ್ರವೇಶ ಪಡೆಯಬಹುದು ಎಂದು ಆದೇಶ ನೀಡಿದ ಹಿನ್ನೆಲೆಯಲ್ಲಿ 2 ಜನವರಿ 2019 ರಂದು ಮೊದಲ ಬಾರಿಗೆ ಬಿಂದು ಅಮ್ಮಣಿ ಅವರು ದೇವಾಲಯವನ್ನು ಪ್ರವೇಶಿಸಿದ್ದರು. ಮಹಿಳೆಯರು ದೇವಾಲಯ ಪ್ರವೇಶಿಸಿದ ಕೆಲವೇ ಗಂಟೆಗಳಲ್ಲಿ ದೇವಾಲಯದ ಜಾಗವು ಯುದ್ಧರಂಗವಾಗಿ ಮಾರ್ಪಟ್ಟಿತ್ತು.

Comments

Leave a Reply

Your email address will not be published. Required fields are marked *