ವಿಕಿಪೀಡಿಯಾಗೆ ಮಸ್ಕ್‌ ಸೆಡ್ಡು- 2 ವಾರದಲ್ಲಿ ಗ್ರೋಕಿಪೀಡಿಯಾ ಬಿಡುಗಡೆ

ವಾಷಿಂಗ್ಟನ್‌: ವಿಕಿಪೀಡಿಯಾಗೆ ಪ್ರತಿಯಾಗಿ ಟೆಸ್ಲಾ ಮುಖ್ಯಸ್ಥ ವಿಶ್ವದ ನಂಬರ್‌ ಶ್ರೀಮಂತ ಉದ್ಯಮಿ ಎಲೋನ್‌ ಮಸ್ಕ್‌ (Elon Musk) ಗ್ರೋಕಿಪೀಡಿಯಾ ತರುವುದಾಗಿ ಘೋಷಣೆ ಮಾಡಿದ್ದು ಆರಂಭಿಕ ಆವೃತ್ತಿ ಮುಂದಿನ ಎರಡು ವಾರದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಗ್ರೋಕಿಪೀಡಿಯಾ (Grokpedia) ಜನರಿಗೆ ಮತ್ತು AI ಗಾಗಿ ಬಳಕೆಯ ಮೇಲೆ ಯಾವುದೇ ಮಿತಿಗಳಿಲ್ಲದೆ ವಿಶ್ವದ ಅತಿದೊಡ್ಡ, ಅತ್ಯಂತ ನಿಖರವಾದ ಜ್ಞಾನ ಮೂಲವಾಗಲಿದೆ ಎಂದಿದ್ದಾರೆ.

ಮಸ್ಕ್‌ ಮೊದಲಿನಿಂದಲೂ ವಿಕಿಪೀಡಿಯಾವನ್ನು ಟೀಕಿಸುತ್ತಲೇ ಬಂದಿದ್ದಾರೆ. ವಿಶ್ವಕೋಶ ಎಂದೇ ಬಿಂಬಿತವಾಗಿರುವ ವಿಕಿಪೀಡಿಯಾನ್ನು (Wikipedia) ಎಡಪಂಥೀಯರು ನಿಯಂತ್ರಿಸುತ್ತಿದ್ದು ದೇಣಿಗೆ ನೀಡಬೇಡಿ ಮಸ್ಕ್‌ ಬಹಿರಂಗ ಕರೆ ನೀಡಿದ್ದರು.


ಮಸ್ಕ್‌ ಹೇಳೋದು ಏನು?
ವಿಕಿಪೀಡಿಯಾ ತಟಸ್ಥ ನೀತಿಯನ್ನು ಹೊಂದಿಲ್ಲ. ಇದನ್ನು ತೀವ್ರ ಎಡಪಂಥೀಯ ಕಾರ್ಯಕರ್ತರು ನಿರ್ವಹಿಸುತ್ತಿದಾರೆ. ವಿಶ್ವಕೋಶ ಪಕ್ಷಪಾತೀಯವಾಗಿ ಕೆಲಸ ಮಾಡುತ್ತಿದೆ. ತಮ್ಮ ಸಿದ್ಧಾಂತವನ್ನು ಬಳಸುವ ಪ್ರಚಾರ ಸಾಧನವಾಗಿ ಬಳಸುತ್ತಿದ್ದಾರೆ. ಇದನ್ನೂ ಓದಿ:  ಟ್ರಂಪ್‌ H-1B ವೀಸಾ ಟಫ್‌ ರೂಲ್ಸ್‌ ನಡುವೆಯೂ ಭಾರತೀಯರಿಗೆ ಮಣೆ ಹಾಕಿದ ಕಂಪನಿಗಳು – ಮೈಸೂರಲ್ಲಿ ಓದಿದ್ದ ವ್ಯಕ್ತಿಗೆ ಸಿಇಒ ಪಟ್ಟ

ಇಂದು ಅನೇಕ ಎಐಗಳು ಇಂಟರ್‌ನೆಟ್‌ನಿಂದ ಮಾಹಿತಿಯನ್ನು ಪಡೆದು ಉತ್ತರ ನೀಡುತ್ತಿವೆ. ವಿಕಿಪೀಡಿಯಾದ ಉತ್ತರವನ್ನು ಬಳಸುವುದರಿಂದ ತಪ್ಪು ಮಾಹಿತಿಗಳಿಗೆ ಪ್ರಚಾರ ಸಿಗುತ್ತಿವೆ.

ಗ್ರೋಕಿಪೀಡಿಯಾವನ್ನು ಯಾವುದೇ ಕಾರ್ಯಕರ್ತರು ಅಥವಾ ರಾಜಕೀಯ ಪಕ್ಷಗಳು ನಿಯಂತ್ರಿಸುವುದಿಲ್ಲ. ಇದು ಮುಕ್ತ ಮೂಲವಾಗಿರುತ್ತದೆ ಮತ್ತು ಎಲ್ಲರಿಗೂ ಬಳಸಲು ಉಚಿತವಾಗಿರುತ್ತದೆ.

ಇಸ್ರೇಲ್‌-ಹಮಾಸ್‌ ಯುದ್ಧಕ್ಕೆ ಸಂಬಂಧಿಸಿದಂತೆ ವಿಕಿಪೀಡಿಯಾದ ವರದಿಯನ್ನು ಮಸ್ಕ್‌ ಈ ಹಿಂದೆ ಟೀಕಿದ್ದರು. ವಿಕಿಪೀಡಿಯಾದ 40 ಸೂಪರ್‌ ಸಂಪಾದಕರು ಇಸ್ರೇಲ್‌ ವಿರುದ್ಧ ಮತ್ತು ಹಮಾಸ್‌ ಪರವಾಗಿ ಬರಹಗಳನ್ನು ಪ್ರಕಟಿಸುತ್ತಿದ್ದಾರೆ. ಇಸ್ರೇಲ್ -ಪ್ಯಾಲೆಸ್ತೀನ್ ಸಂಘರ್ಷದ ಕುರಿತಾದ ವ್ಯಾಖ್ಯಾನವನ್ನು ಬದಲಿಸುತ್ತಿದ್ದಾರೆ. ಇಸ್ಲಾಮಿಕ್ ಮೂಲಭೂತವಾದಿಗಳಿಗೆ ಅನುಕೂಲಕರವಾಗುವಂತೆ ಎಡಿಟ್‌ ಮಾಡಲಾಗುತ್ತಿದೆ. ಇಸ್ಲಾಮಿಕ್ ರಿಪಬ್ಲಿಕ್ ಪಾರ್ಟಿ ಅಧಿಕಾರಿಗಳು ಮಾಡಿರುವ ಮಾನವ ಹಕ್ಕುಗಳ ಅಪರಾಧಗಳನ್ನು ಅಳಿಸಿ ಹಾಕಲಾಗಿದೆ. ಹಲವಾರು ಲೇಖನಗಳಲ್ಲಿ ಇರಾನ್ ಸರ್ಕಾರದ ಹಿತಾಸಕ್ತಿಗಳನ್ನು ಉತ್ತೇಜಿಸಲು ಗುಂಪು ಪ್ರಯತ್ನಿಸುತ್ತಿದೆ ಎಂದು ಮಸ್ಕ್‌ ಹೇಳಿದ್ದರು.