ಬಿಲ್ಕಿಸ್ ಬಾನು ಕುರಿತಾದ ಸ್ಕ್ರಿಪ್ಟ್ ರೆಡಿ ಇದೆ: ಅಚ್ಚರಿ ಹೇಳಿಕೆ ನೀಡಿದ ಕಂಗನಾ

ಗುಜರಾತ್ ಕೋಮುಗಲಭೆಯಲ್ಲಿ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿ, ಹತ್ಯೆಯಾಗಿದ್ದ ಬಿಲ್ಕಿಸ್ ಬಾನು (Bilkis Banu) ಕುರಿತಾದ ಚಿತ್ರ ಮಾಡಲು ಕಂಗನಾ ರಣಾವತ್ (Kangana Ranaut) ಹೊರಟಿದ್ದರಂತೆ. ಅದಕ್ಕೆ ಸಂಬಂಧಿಸಿದಂತೆ ಸ್ಕ್ರಿಪ್ಟ್ ಕೂಡ ರೆಡಿ ಮಾಡಿಕೊಂಡಿದ್ದರು. ಆದರೆ, ಆ ಸಿನಿಮಾವನ್ನು (Cinema) ಮಾಡಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದಾರೆ ಕಂಗನಾ.

ಬಿಲ್ಕಿಸ್ ಬಾನು ಕುರಿತಾಗಿ ಸಿನಿಮಾ ಮಾಡಬೇಕು ಅಂತ ಸ್ಕ್ರಿಪ್ಟ್ ಕೂಡ ರೆಡಿ ಮಾಡಿದ್ದೆವು. ಆದರೆ, ಈ ಕುರಿತಂತೆ ಸಿನಿಮಾ ಆಗುತ್ತಿಲ್ಲ. ನಿರ್ಮಾಣ ಕಂಪನಿಯ ತಾಂತ್ರಿಕ ಕಾರಣದಿಂದಾಗಿ ಚಿತ್ರ ಮಾಡಲು ಆಗುತ್ತಿಲ್ಲವೆಂದು ಕಂಗನಾ ರಣಾವತ್ ಹೇಳಿಕೊಂಡಿದ್ದಾರೆ. ಚಿತ್ರ ಕುರಿತಾದ ತಯಾರಿಯನ್ನೂ ಅವರು ಹೇಳಿಕೊಂಡಿದ್ದಾರೆ.

ಯಾರಿದು ಬಿಲ್ಕಿ ಬಾನು?

2002ರ ಗುಜರಾತ್ ಕೋಮುಗಲಭೆಯಲ್ಲಿ ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು. ಆಗ ಬಾನು ಅವರು 5 ತಿಂಗಳ ಗರ್ಭಿಣಿಯಾಗಿದ್ದರು. ಬಾನು ಅವರ 3 ವರ್ಷದ ಮಗು ಸೇರಿ 7 ಮಂದಿಯನ್ನು ಹತ್ಯೆ ಮಾಡಲಾಗಿತ್ತು.

ಈ ಪ್ರಕರಣದ 11 ಅಪರಾಧಿಗಳಿಗೆ ಕೋರ್ಟ್‌ ಜೀವಾವಧಿ ಶಿಕ್ಷೆ ವಿಧಿಸಿತ್ತು ಆಗಸ್ಟ್ 15, 2022ರಂದು ಗುಜರಾತ್ ಸರ್ಕಾರ ಜೈಲು ಸಲಹಾ ಸಮಿತಿಯ ಶಿಫಾರಸಿನ ಆಧಾರದ ಮೇಲೆ 11 ಜನರನ್ನು ಬಿಡುಗಡೆ ಮಾಡಿತ್ತು.