ಕಾರು ಡಿಕ್ಕಿಯಾದ ರಭಸಕ್ಕೆ ಕೃಷ್ಣಾ ನದಿಗೆ ಹಾರಿಬಿದ್ದ ಬೈಕ್ ಸವಾರ ಕಣ್ಮರೆ

ರಾಯಚೂರು: ಕಾರು ಡಿಕ್ಕಿ (Accident) ಹೊಡೆದ ರಭಸಕ್ಕೆ ಬೈಕ್ ಸವಾರ ಕೃಷ್ಣಾ ನದಿಗೆ (Krishna River) ಹಾರಿ ಬಿದ್ದು, ನಾಪತ್ತೆಯಾದ ಘಟನೆ ತೆಲಂಗಾಣದ (Telangana) ಜುರಾಲಾ ಪ್ರಾಜೆಕ್ಟ್ ಬ್ಯಾರೇಜ್ ಮೇಲೆ ನಡೆದಿದೆ.

ಗದ್ವಾಲ್‍ನ ಬೂಡಿದಪಾಡು ಗ್ರಾಮದ ಮಹೇಶ್ (21) ನಾಪತ್ತೆಯಾದ ಯುವಕ. ಇನ್ನೋರ್ವ ಬೈಕ್ ಸವಾರ ಜಾನಕಿರಾಮ್ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಹೈದರಾಬಾದ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ಬೀದರ್ | ಸತತ 1 ಗಂಟೆ ಧಾರಾಕಾರ ಮಳೆ – ರಸ್ತೆಗಳು ಸಂಪೂರ್ಣ ಜಲಾವೃತ

ಕಾರು ಚಾಲಕ ಮೊಬೈಲ್ ನೋಡಿಕೊಂಡು ಚಾಲನೆ ಮಾಡಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ತೆಲಂಗಾಣದ ಧರೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ನಡೆದಿದೆ. ನಾಪತ್ತೆಯಾದ ಯುವಕನಿಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಇದನ್ನೂ ಓದಿ: ಮನೆಯಲ್ಲಿದ್ದ ಮಹಿಳೆಯರ ಮೇಲೆ ಅಪರಿಚಿತ ವ್ಯಕ್ತಿಯಿಂದ ಹಲ್ಲೆ; ಹಿಡಿದು ಪೊಲೀಸರಿಗೊಪ್ಪಿಸಿದ ಜನ