ಚಿಕ್ಕಬಳ್ಳಾಪುರ | ಟಿಪ್ಪರ್ ಹರಿದು ಬೈಕ್ ಸವಾರ ಸ್ಥಳದಲ್ಲೇ ಸಾವು

ಚಿಕ್ಕಬಳ್ಳಾಪುರ: ಬೈಕ್ ಮತ್ತು ಟಿಪ್ಪರ್ ನಡುವೆ ಭೀಕರ ಅಪಘಾತ ಸಂಭವಿಸಿ, ಬೈಕ್ ಸವಾರ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಯಲಗಲಹಳ್ಳಿ ಕ್ರಷರ್ ಝೋನ್‌ನಲ್ಲಿ ನಡೆದಿದೆ.

ಕಸುವುಗುಟ್ಟಹಳ್ಳಿ ಗ್ರಾಮದ ನಿವಾಸಿ ವೆಂಕಟೇಶ್ವರ ಕ್ರಷರ್‌ನ ರೈಟರ್ ವೆಂಕಟೇಶ್ (40) ಮೃತ ದುರ್ದೈವಿ. ಇದನ್ನೂ ಓದಿ: ಮಾಜಿ ಸಿಎಂ ವಿಜಯ್ ರೂಪಾನಿ ಮೃತದೇಹದ ಗುರುತು ಇನ್ನೂ ಪತ್ತೆಯಾಗಿಲ್ಲ

ವೆಂಕಟೇಶ್ ಪೇಟೆಯಿಂದ ಹಿಂತಿರುಗುವಾಗ ಬೈಕ್‌ಗೆ ಟಿಪ್ಪರ್ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಕೆಳಗೆ ಬಿದ್ದ ಬೈಕ್ ಸವಾರನ ಮೇಲೆ ಟಿಪ್ಪರ್ ಹರಿದ ಪರಿಣಾಮ ಮರ್ಮಾಂಗಕ್ಕೆ ಗಂಭೀರವಾದ ಗಾಯವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಡಿಕ್ಕಿ ಹೊಡೆದ ಟಿಪ್ಪರ್ ಜೆಪಿ ಪ್ರಕಾಶ್ ಗೌಡ ಕ್ರಷರ್‌ಗೆ ಸೇರಿದ ಟಿಪ್ಪರ್ ಎನ್ನಲಾಗಿದೆ. ಇದನ್ನೂ ಓದಿ: ಶೃಂಗೇರಿಯಲ್ಲಿ ವರುಣಾರ್ಭಟ – ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರೀ ಪ್ರಮಾಣದಲ್ಲಿ ಗುಡ್ಡ ಕುಸಿತ

ಪೇರೇಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಪೇರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.