ಸಿಲಿಕಾನ್ ಸಿಟಿಯಲ್ಲೊಂದು ಖತರ್ನಾಕ್ ಜೋಡಿ – ಬಾಯ್‌ಫ್ರೆಂಡ್ ಜೊತೆಗೂಡಿ ಬೈಕ್‌ ಕಳ್ಳತನಕ್ಕಿಳಿದಿದ್ದ ಯುವತಿ

ಬೆಂಗಳೂರು: ಪ್ರೀತಿ, ಪ್ರೇಮದ ಜೊತೆಗೆ ಕಳ್ಳತನ, ಮೋಜು, ರಾಯಲ್‌ ಲೈಫ್‌ಗಾಗಿ ಪ್ರಿಯಕರನೊಂದಿಗೆ (Lovers) ಖುದ್ದು ತಾನೇ ಫೀಲ್ಟಿಗಿಳಿದು ಕಳ್ಳತನ ಮಾಡುತ್ತಿದ್ದ ಖತರ್ನಾಕ್ ಜೋಡಿ ಕೊನೆಗೂ ಪೊಲೀಸರ (Bengaluru Police) ಬಲೆಗೆ ಬಿದ್ದಿದೆ.

ಪ್ರೀತಿ, ಪ್ರೇಮದ ಜೊತೆಗೆ ಬೈಕ್‌ ಕದಿಯುವುದನ್ನೇ ವೃತ್ತಿ ಮಾಡಿಕೊಂಡಿದ್ದ ಆರೋಪಿ ಮುರುಗಾ ಮತ್ತು ಆತನ ಪ್ರೇಯಸಿಯನ್ನ ಮಲೇಶ್ವರಂ ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ: ವಿವಾಹಿತೆಗೆ ಪ್ರಿಯಕರನಿಂದ ಬ್ಲ್ಯಾಕ್‌ಮೇಲ್ – ಮೊಬೈಲ್‌ನಲ್ಲಿ ವೀಡಿಯೋ ಆನ್ ಮಾಡಿ ಮಹಿಳೆ ನೇಣಿಗೆ ಶರಣು

ಬೈಕ್‌ ಕಳ್ಳತನ ಮಾಡುತ್ತಿದ್ದ ಈ ಪ್ರೇಮಿಗಳು, ಅಲ್ಪ ಸ್ವಲ್ಪ ಹಣಕ್ಕೆ ಮಾರಾಟ ಮಾಡ್ತಿದ್ರು. ನಂತರ ಮಾದಕವಸ್ತು ಸೇವಿಸಿ ಮೋಜು ಮಾಡುತ್ತಿದ್ದರು. ಒಮ್ಮೆ ಮುರುಗಾ ಬೈಕ್‌ (Bike) ಕದ್ದರೆ, ಇನ್ನೊಮ್ಮೆ ಪ್ರೇಯಸಿ ಬೈಕ್‌ ಕದಿಯುತ್ತಿದ್ದಳು. ಮುರುಗನ ಪ್ರೀತಿಯಲ್ಲಿ ಬಿದ್ದು, ಯುವತಿಯೂ ಕಳ್ಳತನಕ್ಕೆ ಸಾಥ್ ಕೊಟ್ಟಿದ್ದಳು. ಇದನ್ನೂ ಓದಿ: ರ‍್ಯಾಪಿಡೋ ಬೈಕ್‌ ಸವಾರನಿಂದ ಲೈಂಗಿಕ ಕಿರುಕುಳ – ಬೇಸತ್ತ ಯುವತಿ ಬೈಕ್‌ನಿಂದ ಜಂಪ್‌

ಈ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಎಂಡಿಎಂಎ, ಗಾಂಜಾ ಸೇವಿಸೋಕೆ ಕಳ್ಳತನವನ್ನೇ ಕಸುಬಾಗಿ ಮಾಡಿಕೊಂಡಿದ್ದ ಈ ಇಬ್ಬರು ಆರೋಪಿಗಳ ವಿರುದ್ಧ ಶ್ರೀರಾಂಪುರ, ಮಲ್ಲೇಶ್ವರಂ ಸೇರಿ ಹಲವು ಠಾಣೆಗಳಲ್ಲಿ ಕೇಸ್‌ ದಾಖಲಾಗಿತ್ತು. ಇದೀಗ ಬೆಂಗಳೂರು ಮಲ್ಲೇಶ್ವರಂ ಪೊಲೀಸರು ಇವರಿಬ್ಬರನ್ನ ಬಂಧಿಸಿದ್ದಾರೆ.

ಬಂಧಿತ ಆರೋಪಿಗಳಿಂದ 3 ಬೈಕ್‌ ಹಾಗೂ ಮೊಬೈಲ್‌ ಫೋನ್‌ಗಳನ್ನ ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.