100 ಅಡಿ ಬಾವಿಗೆ ಬಿದ್ದ ಬೈಕ್- ಸವಾರ ಸ್ಥಳದಲ್ಲೇ ಸಾವು, ಆಶ್ಚರ್ಯಕರ ರೀತಿಯಲ್ಲಿ ಬದುಕುಳಿದ ಮಹಿಳೆ

ಬೆಳಗಾವಿ: ನಿಯಂತ್ರಣ ತಪ್ಪಿ ಬೈಕ್ ಸಮೇತ 100 ಅಡಿ ಬಾವಿಯಲ್ಲಿ ಬಿದ್ದು ಸವಾರರೊಬ್ಬರು ಸ್ಥಳದಲ್ಲಿ ಮೃತಪಟ್ಟಿದ್ದರೆ, ಆಶ್ಚರ್ಯಕರ ರೀತಿಯಲ್ಲಿ ಹಿಂಬದಿ ಕುಳಿತಿದಿದ್ದ ಮಹಿಳೆ ಬದುಕುಳಿದಿದ್ದಾರೆ.

ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಿರಾಪೂರಟ್ಟಿ ಗ್ರಾಮದ ಹೊರವಲಯದಲ್ಲಿ ಬುಧವಾರ ರಾತ್ರಿ ಈ ಅಪಘಾತ ನಡೆದಿದೆ. ಲಕ್ಕಪ್ಪ ಬೂದಿಹಾಳ ಮೃತ ಬೈಕ್ ಸವಾರ. ಬೈಕ್ ಹಿಂಬದಿಯಲ್ಲಿ ಕುಳಿತಿದಿದ್ದ ಅಕ್ಕವಾ ಖೋತ ಎಂಬ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಅಕ್ಕವಾರನ್ನು ರಕ್ಷಣೆ ಮಾಡಿ, ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಬೈಕ್ ಸವಾರ ಲಕಪ್ಪಾ ಬೂದಿಹಾಳ ಅವರ ಶವವನ್ನು ಕ್ರೇನ್ ಮೂಲಕ ಬಾವಿಯಿಂದ ಹೊರತೆಗೆಯಲಾಗಿದೆ.

ಬಾವಿ ರಸ್ತೆಯ ಪಕ್ಕದಲ್ಲಿಯೇ ಇದ್ದಿದ್ದರಿಂದ ಬೈಕ್ ನೇರವಾಗಿ ಒಳಗೆ ಬಿದ್ದಿದೆ. ಬಾವಿಯು ನೆಲಮಟ್ಟದಲ್ಲಿದ್ದು, ಯಾವುದೇ ತಡೆಗೋಡೆ ನಿರ್ಮಾಣ ಮಾಡಿಲ್ಲ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದು, ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments

Leave a Reply

Your email address will not be published. Required fields are marked *