ಆಸ್ಪತ್ರೆಯಲ್ಲಿದ್ದ ಮಗನ ಶವ ಹಿಂಪಡೆಯಲು 50 ಸಾವಿರಕ್ಕಾಗಿ ಭಿಕ್ಷೆ ಬೇಡಿದ ವೃದ್ಧ ದಂಪತಿ

ಪಾಟ್ನಾ: ಸರ್ಕಾರಿ ಆಸ್ಪತ್ರೆಯಲ್ಲಿದ್ದ ತಮ್ಮ ಮಗನ ಶವವನ್ನು ಮರಳಿ ಪಡೆಯಲು 50 ಸಾವಿರ ರೂ. ಲಂಚ ಕೇಳಿದ್ದರಿಂದ ವೃದ್ಧ ದಂಪತಿ ಬೀದಿ, ಬೀದಿಗಳಲ್ಲಿ ಹಣಕ್ಕಾಗಿ ಭಿಕ್ಷೆ ಬೇಡಿರುವ ಘಟನೆ ಬಿಹಾರದ ಸಮಸ್ತಿಪುರದಲ್ಲಿ ನಡೆದಿದೆ.

ಮಗನ ಶವ ಪಡೆಯಲು ದಂಪತಿ ಬಳಿ ಹಣವಿಲ್ಲದ ಕಾರಣ, ಹಣಕ್ಕಾಗಿ ಊರೂರು ಭಿಕ್ಷೆ ಬೇಡುತ್ತಾ ಅಲೆಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸದ್ಯ ಈ ಕುರಿತಂತೆ ಮಾತನಾಡಿದ ಮೃತನ ತಂದೆಮಹೇಶ್ ಠಾಕೂರ್ ಅವರು, ಕೆಲವು ದಿನಗಳ ಹಿಂದೆ ನನ್ನ ಮಗ ನಾಪತ್ತೆಯಾಗಿದ್ದನು. ಈಗ ನನ್ನ ಮಗನ ಶವ ಸಮಸ್ತಿಪುರದ ಸದರ್ ಆಸ್ಪತ್ರೆಯಲ್ಲಿದೆ ಎಂದು ನಮಗೆ ಕರೆ ಬಂದಿತ್ತು. ಹೀಗಾಗಿ ನನ್ನ ಮಗನ ಶವವನ್ನು ನೀಡುವುದಕ್ಕೆ ಆಸ್ಪತ್ರೆಯ ಸಿಬ್ಬಂದಿ 50 ಸಾವಿರ ರೂ. ಕೇಳಿದ್ದಾರೆ. ನಾವು ಬಡವರು, ಅಷ್ಟು ಮೊತ್ತವನ್ನು ನಾವು ಹೇಗೆ ಪಾವತಿಸಲು ಸಾಧ್ಯ ಎಂದು ಅಳಲು ತೊಡಿಕೊಂಡಿದ್ದಾರೆ.

ಆಸ್ಪತ್ರೆಯಲ್ಲಿನ ಬಹುತೇಕ ಆರೋಗ್ಯ ಕಾರ್ಯಕರ್ತರು ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದು, ಸಮಯಕ್ಕೆ ಸರಿಯಾಗಿ ಸಂಬಳ ಸಿಗದ ಕಾರಣ ರೋಗಿಗಳ ಸಂಬಂಧಿಕರಿಂದ ಸಿಬ್ಬಂದಿ ಹಣ ಪಡೆದಿರುವ ಹಲವಾರು ನಿದರ್ಶನಗಳಿವೆ. ಇದನ್ನೂ ಓದಿ: ಸುಡು ಬಿಸಿಲಿನಲ್ಲಿ 5 ವರ್ಷದ ಬಾಲಕಿ ಕೈ ಕಟ್ಟಿ ತಾಯಿಯಿಂದಲೇ ಚಿತ್ರಹಿಂಸೆ

ಸದ್ಯ ಈ ಬಗ್ಗೆ ಮಾತನಾಡಿದ ಸಮಸ್ತಿಪುರದ ಸಿವಿಲ್ ಸರ್ಜನ್ ಡಾ.ಎಸ್.ಕೆ.ಚೌಧರಿ ಅವರು, ಘಟನೆ ಸಂಬಂಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ಬೇಜವಾಬ್ದಾರರಾಗಿ ಕೆಲಸ ಮಾಡುವವರನ್ನು ಬಿಡುವುದಿಲ್ಲ. ಇದು ಮಾನವೀಯತೆಗೆ ಅವಮಾನ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪೋಷಕರಿಂದಲೇ ನನಗೆ ಸಾವು – ಹತ್ಯೆಗೂ ಮುನ್ನ ಪೊಲೀಸರಿಗೆ ಬರೆದ ಪತ್ರ ಔಟ್

Comments

Leave a Reply

Your email address will not be published. Required fields are marked *