ಬೆಂಗ್ಳೂರು ಬಳಿ ಟಾಟಾ ಐಫೋನ್ ಉತ್ಪಾದನಾ ಘಟಕ – 60 ಸಾವಿರ ಮಂದಿಗೆ ಉದ್ಯೋಗ

ನವದೆಹಲಿ: ಆಪಲ್ ಐಫೋನ್ (Apple iPhone) ಅತಿದೊಡ್ಡ ಉತ್ಪಾದನಾ ಘಟಕ ಬೆಂಗಳೂರಿನ (Bengaluru) ಹೊಸೂರಿನಲ್ಲೇ ಸ್ಥಾಪನೆಯಾಗಲಿದೆ ಎಂದು ಕೇಂದ್ರ ಟೆಲಿಕಾಂ ಸಚಿವ ಅಶ್ವಿನಿ ವೈಷ್ಣವ್ (Ashwini Vaishnaw) ಹೇಳಿದ್ದಾರೆ.

ಮುಂದಿನ ಎರಡು ವರ್ಷದ ಒಳಗಡೆ ಘಟಕ ಕಾರ್ಯಾರಂಭಿಸಲಿದ್ದು, ಈ ಘಟಕವು 60 ಸಾವಿರ ಜನರಿಗೆ ಉದ್ಯೋಗ (Job) ನೀಡಲಿದೆ. ಅದರಲ್ಲಿ ಮೊದಲ 6 ಸಾವಿರ ಉದ್ಯೋಗಿಗಳು ರಾಂಚಿ ಹಾಗೂ ಹತ್ತಿರದ ಬುಡಕಟ್ಟು ಜನರು ಇರಲಿದ್ದಾರೆ. ಬುಡಕಟ್ಟು ಮಹಿಳೆಯರಿಗೆ ಈಗಾಗಲೇ ಐಫೋನ್ ತಯಾರಿಸಲು ತರಬೇತಿ ನೀಡಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ. ಇದನ್ನೂ ಓದಿ: ಕೇಸರಿ ರಾಜಕೀಯ ಬಣ್ಣವಾಗೋದು ಬೇಡ – ಸರ್ಕಾರಕ್ಕೆ ಶ್ರೀನಿವಾಸ್ ಪ್ರಸಾದ್ ಸಲಹೆ

ಟಾಟಾ ಎಲೆಕ್ಟ್ರಾನಿಕ್ಸ್‌ (Tata Electronics) ಕಂಪನಿಯ ಹೊಸೂರು ಘಟಕದಲ್ಲಿ ಐಫೋನ್ ತಯಾರಿಸಲು ಆಪಲ್ ಕಂಪನಿ ಗುತ್ತಿಗೆ ನೀಡಿದೆ. ಈಗ ಭಾರತದಲ್ಲಿ ಐಫೋನ್‌ಗಳನ್ನು ತೈವಾನ್ ಮೂಲದ ಫಾಕ್ಸ್ಕಾನ್ ಮತ್ತು ಪೆಗಟ್ರಾನ್ ಕಂಪೆನಿ ತಯಾರಿಸುತ್ತದೆ. ಇದನ್ನೂ ಓದಿ: `ಕಾಂತಾರ’ ದೈವದ ಗೆಟಪ್‌ನಲ್ಲಿ ಬಂದ ತಹಶೀಲ್ದಾರ್: ಡಿಸಿ ಶಾಕ್

ಈಗಾಗಲೇ ಫಾಕ್ಸ್‌ಕಾನ್‌ ಚೆನ್ನೈನಲ್ಲಿ ಘಟಕ ತೆರೆದಿದ್ದರೆ ವಿಸ್ಟ್ರಾನ್ ಕಂಪನಿ ಬೆಂಗಳೂರಿನ ಬಿಡದಿ ಮತ್ತು ಕೋಲಾರದ ನರಸಪುರದಲ್ಲಿ ಘಟಕ ತೆರೆದಿದೆ. 2008ರಲ್ಲಿ ಐಫೋನ್ ಬಿಡುಗಡೆಯಾದಾಗ ಭಾರತದಲ್ಲಿ 50 ಸಾವಿರ ಫೋನುಗಳು ಮಾರಾಟವಾಗಿತ್ತು. 2021ರಲ್ಲಿ 50 ಲಕ್ಷ ಐಫೋನ್ ಮಾರಾಟವಾಗಿದ್ದರೆ 2022ರಲ್ಲಿ 70 ಲಕ್ಷಕ್ಕೂ ಅಧಿಕ ಫೋನ್ ಮಾರಾಟವಾಗಿದೆ. ಮಾರಾಟ ಹೆಚ್ಚಾಗುತ್ತಿದ್ದಂತೆ ಆಪಲ್ ಭಾರತದಲ್ಲೇ ಹೆಚ್ಚು ಐಫೋನ್ ಉತ್ಪಾದನೆಗೆ ಮುಂದಾಗಿದೆ.
ಇದನ್ನೂ ಓದಿ: ಟಾಟಾ ಕಂಪನಿಯಿಂದ ಮೇಡ್‌ ಇನ್‌ ಇಂಡಿಯಾ ಐಫೋನ್‌ ಉತ್ಪಾದನೆ

ಕೋವಿಡ್ ಬಳಿಕ ಆಪಲ್ ಕಂಪನಿ ಚೀನಾದ ಹೊರಗಡೆ ಐಫೋನ್ ಉತ್ಪಾದನೆ ಹೆಚ್ಚು ಮಾಡಲು ಮುಂದಾಗಿದೆ. ಕೋವಿಡ್ ನಿಯಮದಿಂದಾಗಿ ಐಫೋನ್ ಉತ್ಪಾದನಾ ಘಟಕಗಳು ಬಂದ್ ಆಗಿದ್ದರಿಂದ ಪೂರೈಕೆಯಲ್ಲಿ ಸಮಸ್ಯೆಯಾಗಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *