ಇದು ನನ್ನ ಜೀವನದ ಶ್ರೇಷ್ಠ ಸಾಧನೆ : ಮೋದಿ ಹೊಗಳಿಕೆಗೆ ಕರಣ್ ಆಚಾರ್ಯ ಪ್ರತಿಕ್ರಿಯೆ

ಬೆಂಗಳೂರು: ವಾಹನಗಳ ಮೇಲೆ ಹೆಚ್ಚು ರಾರಾಜಿಸುತ್ತಿರುವ ಹನುಮಾನ್ ಚಿತ್ರವನ್ನು ರಚಿಸಿರುವ ಕರಣ್ ಆಚಾರ್ಯ ಪ್ರಧಾನಿ ನರೇಂದ್ರ ಮೋದಿ ಹೊಗಳಿಕೆಗೆ ಧನ್ಯವಾದ ತಿಳಿಸಿ, ಇದು ತನ್ನ ಜೀವನದ ಶ್ರೇಷ್ಠ ಸಾಧನೆ ಎಂದು ಹೇಳಿದ್ದಾರೆ.

ಕರ್ನಾಟಕ ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳೂರಿನ ಪ್ರಚಾರ ಭಾಷಣದಲ್ಲಿ ಹನುಮಾನ್ ಚಿತ್ರ ರಚಿಸಿದ್ದ ಕರಣ್ ಆಚಾರ್ಯ ಅವರ ಹೆಸರನ್ನು ಪ್ರಸ್ತಾಪಿಸಿ ಹೊಗಳಿದ್ದರು. ಮಂಗಳೂರಿನ ಯುವಕನ ಈ ಸಾಧನೆಗೆ ದೇಶದ ಹಲವು ಮಾಧ್ಯಮಗಳು ಸಂದರ್ಶನಕ್ಕಾಗಿ ಕಾದು ನಿಂತಿದ್ದರು. ಇದು ಪ್ರಶಂಸನಿಯ ಸಾಧನೆ ಎಂದು ತಿಳಿಸಿದ್ದರು. ಅಲ್ಲದೇ ಟ್ವಿಟ್ಟರ್ ನಲ್ಲಿ ಹನುಮಾನ್ ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದರು.

ಈ ವಿಡಿಯೋವನ್ನು ನೋಡಿದ ಕರಣ್, ಪ್ರಧಾನಿ ಮೋದಿ ಅವರು ನನ್ನ ಹೆಸರನ್ನು ಹೇಳಿ ಪ್ರಶಂಸೆ ವ್ಯಕ್ತಪಡಿಸಿರುವುದು ಸಂತಸ ಉಂಟು ಮಾಡಿದೆ ಎಂದು ಹೇಳಿದ್ದಾರೆ.

ಮೂಲತಃ ಕಾಸಗೋಡು ಜಿಲ್ಲೆಯ ಕರಣ್ ಮಾಧ್ಯಮವೊಂದರ ಜೊತೆ ಮಾತನಾಡಿ ಹರ್ಷವ್ಯಕ್ತ ಪಡಿಸಿದ್ದಾರೆ. ನನ್ನ ಸ್ನೇಹಿತರು ಅಂದು ಪದೇ ಪದೇ ಕರೆ ಮಾಡುತ್ತಿದ್ದರು. ಈ ವೇಳೆ ತನಗೆ ವಿಷಯ ತಿಳಿದಿರಲಿಲ್ಲ. ಬಳಿಕ ವಿಡಿಯೋ ನೋಡಿ ಮೇಲೆ ತನಗೆ ಈ ಬಗ್ಗೆ ತಿಳಿಯಿತು. ಇದು ನನ್ನ ಜೀವನದ ಶ್ರೇಷ್ಠ ಸಾಧನೆ ಎಂದು ತಿಳಿಸಿದ್ದಾರೆ.

ಅಲ್ಲದೇ ಹನುಮಾನ್ ಚಿತ್ರ ರಚನೆ ಮಾಡಿದ್ದ ಕುರಿತ ಸ್ವಾರಸ್ಯಕರ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ನನ್ನ ಗೆಳೆಯರು ಗಣೇಶ್ ಚರ್ತುಥಿಯ ಅಂಗವಾಗಿ ಧ್ವಜದ ಚಿತ್ರ ಬಿಡಿಸುವಂತೆ ಕೋರಿದ್ದರು. ಅದು ಇದುವರೆಗಿನ ಎಲ್ಲಾ ಧ್ವಜಗಳಿಗಿಂತ ಭಿನ್ನವಾಗಿರುವಂತೆ ರಚಿಸಲು ಒತ್ತಡ ಹಾಕಿದ್ದರು. ಎಲ್ಲರಿಗಿಂತ ಭಿನ್ನವಾದ ಚಿತ್ರ ಬಿಡಿಸಲು ನಿರ್ಧರಿಸಿದ ವೇಳೆ ನಾನು ಹನುಮಾನ್ ಚಿತ್ರ ಬಿಡಿಸಲು ಪ್ರಾರಂಭಿಸಿದೆ. ಗೂಗಲ್ ನಲ್ಲಿ ಹಲವು ಆಂಜನೇಯನ ಚಿತ್ರಗಳನನ್ನು ನೋಡಿದ ಬಳಿಕ ಹೊಸ ಚಿತ್ರದ ರಚನೆ ಮಾಡಿದೆ. ಅದ್ದರಿಂದ ತಾನು ಕೇಸರಿ ಬಣ್ಣವನ್ನು ಮಾತ್ರ ಬಳಕೆ ಮಾಡಿದೆ. ಈ ಚಿತ್ರ ಕೇವಲ ಅರ್ಧ ಗಂಟೆಯಲ್ಲೇ ರಚನೆ ಮಾಡಿದೆ ಎಂದು ವಿವರಿಸಿದರು.

ಕೇಸರಿ ಬಣ್ಣವನ್ನು ನಾನು ದೇವರ ಸಂಕೇತವಾಗಿ ಬಳಕೆ ಮಾಡಿದ್ದೇನೆ, ಹೊರತು ಯಾವುದೇ ರಾಜಕೀಯ ಪಕ್ಷಕ್ಕೆ ಬೆಂಬಲವಾಗಿ ರಚನೆ ಮಾಡಿಲ್ಲ ಎಂದು ಸ್ಪಷ್ಟನೆ ನೀಡಿದರು.

ಈ ಚಿತ್ರವನ್ನು ರಚನೆ ಮಾಡಿ ಮೂರು ವರ್ಷ ಕಳೆದಿದ್ದು ಎಲ್ಲೆಡೆ ವೈರಲ್ ಆಗಿದೆ. ಇದಕ್ಕಿಂತ ಹೆಚ್ಚಿನ ಕೊಡುಗೆ ಚಿತ್ರಕಾರನಿಗೆ ಸಿಗಲು ಸಾಧ್ಯವಿಲ್ಲ. ಯಾವುದೇ ಕಾರಿನ ಹಿಂಭಾಗ ನೋಡಿದರೂ ಈ ಚಿತ್ರ ಅತೀ ಹೆಚ್ಚು ಕಾಣಿಸಿಕೊಳ್ಳುತ್ತದೆ. ತನ್ನ ಈ ಸಾಧನೆಗೆ ಪೋಷಕರು ನೀಡಿದ ಬೆಂಬಲವೇ ಪ್ರಮುಖ ಕಾರಣ ಎಂದು ತಿಳಿಸಿದರು.  ಇದನ್ನು ಓದಿ: ಆಂಜನೇಯನ ಭಾವಚಿತ್ರ ಹಾಕಿಕೊಂಡ ಕ್ಯಾಬ್‍ನವರು ರೇಪಿಸ್ಟ್ ಗಳು, ಅವುಗಳಲ್ಲಿ ಪ್ರಯಾಣಿಸಬೇಡಿ : ರಶ್ಮಿ ನಾಯರ್

Comments

Leave a Reply

Your email address will not be published. Required fields are marked *