ಬೆಂಗಳೂರು: ಇತ್ತೀಚೆಗೆ ಹಲವು ಹೇಳಿಕೆಗಳನ್ನು ನೀಡುವ ಮೂಲಕ ಭಾರೀ ಚರ್ಚೆಗೆ ಕಾರಣರಾಗಿದ್ದ ನಟ ಪ್ರಕಾಶ ರೈ ಅವರಿಗೆ ಬಿಗ್‍ಬಾಸ್ ವಿನ್ನರ್ ಪ್ರಥಮ್ ಬಹಿರಂಗವಾಗಿ ಸವಾಲು ಎಸೆದಿದ್ದಾರೆ.
ಕೆಲವು ದಿನಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಕ್ಷುಲ್ಲಕ ಕಾರಣಕ್ಕೆ ನಡೆದ ಕೋಮು ಗಲಭೆಯಲ್ಲಿ ಕಾಣೆಯಾಗಿದ್ದ ಪರೇಶ್ ಮೇಸ್ತ ಮೃತದೇಹ ಕೆರೆಯಲ್ಲಿ ಪತ್ತೆಯಾಗಿತ್ತು. ಈ ಕುರಿತು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದು ಕೊಂಡಿರುವ ಪ್ರಥಮ್, ನಟ ಪ್ರಕಾಶ್ ರೈ ಅವರಿಗೆ ಸವಾಲು ಎಸೆದಿದ್ದಾರೆ.

ಪ್ರಥಮ್ ಸವಾಲು ಏನು?
ತಮಗೆ ತಾವೇ ಹೇಳಿಕೊಳ್ಳುವಂತೆ ದೊಡ್ಡ ನಟ ಪ್ರಕಾಶ್ ರೈ ಅವರಿಗೆ ಬಹಿರಂಗ ಪ್ರಶ್ನೆ, ಏನ್ರೀ ಪ್ರಕಾಶ್ ರಾಜ್ so called ದೊಡ್ಡ ನಟ?!. ಅವತ್ತು ಗೌರಿ ಲಂಕೇಶ್ ಹತ್ಯೆಯಾದಾಗ ಈ ದೇಶದಲ್ಲಿ ಏನಾಗ್ತಿದೆ? ಅದು ಇದು ಅಂತ ಬಾಯಿಗೆ ಬಂದಂಗೆ ಎಲ್ಲಾ ಕೇಳಿ ಕೊನೆಗೆ ಜಸ್ಟ್ #just_asking ಅಂತಿದ್ರಿ.. ಇವತ್ತು ಪರೇಶ್ ಮೇಸ್ತಾ ವಿಕೃತ ರೀತಿಯಲ್ಲಿ ಹತ್ಯೆಯಾಗಿದೆ. ಈ ರಾಜ್ಯದಲ್ಲಿ ಏನಾಗ್ತಿದೆ ಅಂತ ಇವಾಗ ಕೇಳಲ್ವಾ So Called ದೊಡ್ಡ ನಟ (ಭಯಂಕರ)? ನರಕ ಅಂದರೆ ಏನು ಅಂತ ಸಾಯೋಕೂ ಮುಂಚೆನೇ ತೋರಿಸಿದ್ದಾರೆ ಆ ನಾಯಿಗಳು.. ಎಲ್ಲರಿಗೂ ಒಂದೇ ನ್ಯಾಯ ಇರಬೇಕಲ್ವೇನ್ರಿ ರೈ? ಹೊನ್ನಾವರದಲ್ಲಿ ಏನು ನಡೀತು ಅಂತ ಗೊತ್ತೇ ಇಲ್ವೇನ್ರಿ ಪ್ರಕಾಶ ರೈ ನಿಮಗೆ? ನಾನು ಹಿಂದು-ಮುಸ್ಲಿಂ ಅಂತ ಮಾತನಾಡುತ್ತಿಲ್ಲ. ಮಾನವೀಯತೆ, ಮನುಷ್ಯತ್ವ ಬಗ್ಗೆ ಮಾತನಾಡುತ್ತಿದ್ದೇನೆ. ಇದು ಬರಿ just asking ಅಲ್ಲ, #purposefully_asking ಎಂದು ತಮ್ಮ ಪೋಸ್ಟ್ ನಲ್ಲಿ ಬರೆದು ಕೊಂಡಿದ್ದಾರೆ.

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ನಡೆದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಹೇಳಿಕೆ ನೀಡಿದ್ದ ಅವರು, ಗೌರಿ ಲಂಕೇಶ್ ಹತ್ಯೆಯಯನ್ನು ಸಂಭ್ರಮಿಸುವಂತಹ ಟ್ರೋಲ್‍ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಇಂತಹ ಟ್ರೋಲ್‍ಗಳನ್ನು ಹಾಕಿದ ಕೆಲವು ಟ್ವಿಟ್ಟರ್ ಖಾತೆಗಳನ್ನು ಮೋದಿ ಫಾಲೋ ಮಾಡುತ್ತಿದ್ದಾರೆ. ಪ್ರಧಾನಿ ಮೋದಿ ಫಾಲೋ ಮಾಡ್ತಿರೋ ಜನರು ತುಂಬಾ ಕ್ರೂರಿಗಳು, ಅದರ ಬಗ್ಗೆ ಕಣ್ಣುಮುಚ್ಚಿ ಕುಳಿತಿರೋ ಪ್ರಧಾನಿ ನಮ್ಮಲ್ಲಿದ್ದಾರೆ. ಉತ್ತರ ಪ್ರದೇಶ ಸಿಎಂ ಅವರು ಮುಖ್ಯಮಂತ್ರಿಯೋ ಅಥವಾ ಪೂಜಾರಿಯೋ ಗೊಂದಲವಾಗುತ್ತದೆ. ಅವರು ನನಗಿಂತ ದೊಡ್ಡ ನಟರು ಎಂದು ಪ್ರಕಾಶ್ ರಾಜ್ ಹೇಳಿದ್ದರು.




















Leave a Reply