ನಿಜವಾಗ್ಲೂ ವೈಷ್ಣವಿನ ಚಂದನ್ ಶೆಟ್ಟಿ ಮದುವೆ ಆಗ್ತಾರಾ?- ಬಿಗ್ ಬಾಸ್ ವಿನ್ನರ್ ಹೇಳಿದ್ದು ಹೀಗೆ!

ಬೆಂಗಳೂರು: ರ‍್ಯಾಪರ್ ಚಂದನ್ ಶೆಟ್ಟಿ ಈಗಾಗಲೇ ಬಿಗ್ ಬಾಸ್-5 ಪಟ್ಟವನ್ನು ತಮ್ಮದಾಗಿಸಿಕೊಂಡಿದ್ದಾರೆ. ಬಿಗ್ ಬಾಸ್ ವಿಜಯಪತಾಕೆ ಹಾರಿಸಿದ ಚಂದನ್ ಗೆ ಸಾಕಷ್ಟು ಅವಕಾಶಗಳು ಹುಡುಕಿಕೊಂಡು ಬಂದಿವೆ. ಈ ಮಧ್ಯೆ ಅಗ್ನಿಸಾಕ್ಷಿ ಖ್ಯಾತಿಯ `ಸನ್ನಿಧಿ’ ಜೊತೆ ಚಂದನ್ ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡಿದೆ.

ಚಂದನ್ ಅಗ್ನಿಸಾಕ್ಷಿ ಖ್ಯಾತಿಯ ಸನ್ನಿಧಿ ಅಲಿಯಾಸ್ ವೈಷ್ಣವಿ ಗೌಡ ಅವರನ್ನು ಮದುವೆ ಆಗುವ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆಯೇ ಚಂದನ್ ಶೆಟ್ಟಿ ಅವರು ಫೇಸ್ ಬುಕ್ ಲೈವ್ ಗೆ ಬಂದು ಸ್ಪಷ್ಟನೆ ನೀಡುವ ಮೂಲಕ ಗಾಸಿಪ್ ಗೆ ತೆರೆ ಎಳೆದಿದ್ದಾರೆ.

ಲೈವ್ ನಲ್ಲಿ ಏನ್ ಹೇಳಿದ್ರು?: ನನಗೆ ನಿಜವಾಗ್ಲೂ ಮದುವೆ ಆಗುತ್ತಿಲ್ಲ. ನಾನು ಹಾಗೂ ವೈಷ್ಣವಿ ಇಬ್ಬರೂ ಟ್ವೀಟ್ ಮಾಡಿರೋ ತರಹ ಮೆಸೇಜ್ ಎಡಿಟ್ ಮಾಡಿದ್ದಾರೆ ಎಂದು ಚಂದನ್ ಶೆಟ್ಟಿ ತಿಳಿಸಿದ್ದಾರೆ.

ಸದ್ಯಕ್ಕೆ ನಾನು ನಿಜವಾಗ್ಲೂ ಯಾರನ್ನೂ ಮದುವೆ ಆಗುತ್ತಿಲ್ಲ. ನನಗೆ ಮದುವೆ ಆಗೋಕೆ ಅಷ್ಟು ಅವಸರ ಕೂಡ ಇಲ್ಲ. ನನಗೆ ನನ್ನ ಕೆಲಸ ಮುಖ್ಯ. ಇದು ನನ್ನ ಕೆರೆಯರ್ ಬಿಲ್ಡ್ ಮಾಡೋ ಟೈಂ. ಬಿಗ್ ಬಾಸ್ ಮನೆಯಿಂದ ಬಂದ ಮೇಲೆ ನನಗೆ ಈ ಸಮಯ ಹಾಳು ಮಾಡಿಕೊಳ್ಳೊಕೆ ಇಷ್ಟವಿಲ್ಲ. ಈ ಸಮಯವನ್ನು ನಾನು ಸಂಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು. ನನ್ನ ಕೆಲಸದ ಮೇಲೆ ನಾನು ಗಮನ ಕೋಡುತ್ತಿದ್ದೇನೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೇ ವೈಷ್ಣವಿ ಅವರೇ ನನಗೂ ಗೊತ್ತಿಲ್ಲ, ಯಾರೂ ಈ ರೀತಿ ಸುದ್ದಿಗಳನ್ನು ಹಬ್ಬಿಸಿದ್ದಾರೋ ಎಂಬುದು. ಧಾರಾವಾಹಿಯಲ್ಲಿ ಎರಡೂ ಸಲ ನೋಡಿದ್ದು, ಅದು ಬಿಟ್ಟರೆ ವೈಯಕ್ತಿಕವಾಗಿ ನನಗೆ ಅವರು ಗೊತ್ತಿಲ್ಲ. ಯಾಕೆ ಈ ರೀತಿ ಸುದ್ದಿಗಳು ಹಬ್ಬಿಸಿದ್ದಾರೋ ಎಂದು ನನಗೆ ಗೊತ್ತಿಲ್ಲ ಎಂದು ಚಂದನ್ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ಆಗಿದ್ದೇನು?: ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಅವರು ವೈಷ್ಣವಿ ಗೌಡ ಅವರೊಂದಿಗೆ ಅತೀ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿರಿಸಲಿದ್ದಾರೆ. ಇದೇ ತಿಂಗಳ 11ರಂದು ವಿವಾಹ ನಿಶ್ಚಿತಾರ್ಥ ನಡೆಯಲಿದೆ ಅಂತ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಹಿನ್ನೆಲೆಯಲ್ಲಿ ಚಂದನ್ ನಿನ್ನೆಯೇ ಫೇಸ್ ಬುಕ್ ಲೈವ್ ಗೆ ಬಂದು ಗಾಳಿ ಸುದ್ದಿಗಳಿಗೆ ಕಿವಿಗೊಡಬೇಡಿ, ನಾನು ಇನ್ನೂ ಸಾಧಿಸಲು ಸಾಕಷ್ಟು ಇದೆ ಅಂತ ಹೇಳುವ ಮೂಲಕ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

Comments

Leave a Reply

Your email address will not be published. Required fields are marked *