ವರುಣ್- ವರ್ಷ ಕಾವೇರಿ ಬ್ರೇಕಪ್ ಬಗ್ಗೆ ಸೋನು ಗೌಡ ಪ್ರತಿಕ್ರಿಯೆ

ಸೋಶಿಯಲ್ ಮೀಡಿಯಾದಲ್ಲಿ ಸದ್ಯ ಚರ್ಚೆಗೆ ಗ್ರಾಸವಾಗಿರುವ ವಿಚಾರ ಅಂದರೆ ವರುಣ್ ಆರಾಧ್ಯ- ವರ್ಷ ಕಾವೇರಿ ಬ್ರೇಕಪ್ ಮ್ಯಾಟರ್. ಈ ಜೋಡಿಯ ಬ್ರೇಕಪ್‌ಗೆ ಸೋನು ಕಾರಣ ಅಂತಾ ಕೂಡ ಸಖತ್ ಟ್ರೋಲ್ ಆಗಿತ್ತು. ಈ ಬಗ್ಗೆ ‘ಬಿಗ್ ಬಾಸ್’ ಸೋನು (Sonu Gowda) ಸ್ಪಷ್ಟನೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ವರ್ಷ ಕಾವೇರಿ- ವರುಣ್(Varun Aradhya) ಬ್ರೇಕ್‌ಗೆ ಸೋನುನೇ ಕಾರಣ ಎಂಬಂತೆ ಸೋನು ಮಾಲ್ಡೀವ್ಸ್ ಫೋಟೋ ಸೇರಿಸಿ ಸಖತ್ ಟ್ರೋಲ್ ಮಾಡಲಾಗಿತ್ತು. ಈ ಬಗ್ಗೆ ಸೋನು ಮಾತನಾಡಿ, ಇಬ್ಬರ ಬ್ರೇಕಪ್‌ಗೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ಈ ಟ್ರೋಲ್‌ನವರು ಸಾವಿರ ಕೆಲಸ ಮಾಡುತ್ತಾರೆ. ಈ ಇನ್ಸ್ಟಾಗ್ರಾಂನಲ್ಲಿ ಏನು ಆಗುತ್ತಿದೆ ಎಂದೇ ನನಗೆ ತಿಳಿಯುತ್ತಿಲ್ಲ. ಕೆಲ ದಿನಗಳಿಂದ ನನ್ನ ಮಾಲ್ಡೀವ್ಸ್ ವಿಡಿಯೋಸ್‌ನ ವೈರಲ್ ಮಾಡ್ತಿದ್ದರು. ಈಗ ವರುಣ್ ಬ್ರೇಕಪ್‌ಗೆ ನನ್ನ ಫೋಟೋ ಮ್ಯಾಚ್ ಮಾಡ್ತಿದ್ದಾರೆ.

ವರುಣ್-ವರ್ಷ (Varsha Kaveri) ಅವರದ್ದು 5 ವರ್ಷದ ಲವ್. ಇವರಿಬ್ಬರ ಮಧ್ಯೆ ನಾನು ತಗ್ಲಾಕೊಂಡಿದ್ದೀನಿ. ನಾನೇನು ತಪ್ಪು ಮಾಡಿಲ್ಲ. ಇನ್ನೂ ಲವ್ ವಿಷ್ಯ ಅಂದರೆ ಕೇಳಬೇಕಾ? ಅವರ ಪೋಸ್ಟ್‌ಗೆ ಅನೇಕರು ಕಾಮೆಂಟ್ ಮಾಡ್ತಿದ್ದಾರೆ. ಇದಕ್ಕೆಲ್ಲಾ ಸೋನು ಮಾಲ್ಡೀವ್ಸ್‌ಗೆ ಹೋಗಿದ್ದ ವಿಡಿಯೋನೇ ಕಾರಣ ಅಂತೆಲ್ಲಾ ಕಾಮೆಂಟ್ ಮಾಡ್ತಿದ್ದಾರೆ. ಇದನ್ನೂ ಓದಿ:ಮದುಮಗಳಂತೆ ಮಿಂಚಿದ ಅನುಶ್ರೀಗೆ ಮದುವೆ ಯಾವಾಗ ಎಂದ ನೆಟ್ಟಿಗರು?

ಲೇ ಸೋನು ನಿನಗೆ ಬೇರೆ ಯಾರು ಸಿಗಲಿಲ್ವಾ ಇಬ್ಬರ ಮಧ್ಯೆ ಹೋಗಿದ್ಯಾ ಅಂತೆಲ್ಲಾ ಮಾತು ಬಂತು. ವರುಣ್-ವರ್ಷ ಬ್ರೇಕಪ್‌ಗೂ (Breakup) ನನಗೂ ಯಾವುದೇ ಸಂಬಂಧವಿಲ್ಲ. ಸುಮ್ಮನೆ ಇಂತಹದೊಂದು ಸುದ್ದಿ ಸೃಷ್ಟಿ ಮಾಡಿದ್ದಾರೆ. ನೆಗೆಟಿವ್‌ ಮಾತುಗಳಿಗೆ, ಟ್ರೋಲ್‌ಗೆ ನಾನು ತಲೆ ಕೆಡಿಸಿಕೊಳ್ಳುವುದಿಲ್ಲ ಎಂದು ಈ ಮೂಲಕ ಗಾಳಿ ಸುದ್ದಿಗೆ, ಟ್ರೋಲ್‌ಗೆ ನಟಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಈ ಬಾರಿ ಬಿಗ್‌ ಬಾಸ್‌ ಸೀಸನ್‌ 10ಕ್ಕೆ (Bigg Boss Kannada 10) ವರುಣ್‌ ಅಥವಾ ವರ್ಷ ಕಾವೇರಿ ಕಾಲಿಡುತ್ತಾರೆ ಎನ್ನಲಾಗಿತ್ತು. ಆದರೆ ಈ ಸುದ್ದಿ ಕೂಡ ಸುಳ್ಳಾಗಿದೆ. ಇಬ್ಬರಲ್ಲಿ ಒಬ್ಬರು ಕೂಡ ದೊಡ್ಮನೆ ಆಟಕ್ಕೆ ಎಂಟ್ರಿ ಕೊಟ್ಟಿಲ್ಲ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]