ಬಿಗ್ ಬಾಸ್ ಮನೆಯಲ್ಲಿ ಸ್ಪಂದನಾರನ್ನ ನೋಡಬೇಕು ಎಂದು ಕಣ್ಣೀರಿಟ್ಟಿದ್ದರು ಚಿನ್ನಾರಿಮುತ್ತ ವಿಜಯ್

ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ (Vijay Raghavendra) ಅವರು ಮುದ್ದಿನ ಪತ್ನಿ ಸ್ಪಂದನಾರನ್ನು ಕಳೆದುಕೊಂಡಿದ್ದಾರೆ. ಸ್ಪಂದನಾ ಅವರು 37ನೇ ವಯಸ್ಸಿಗೆ ಹೃದಯಾಘಾತದಿಂದ (Heart Attack)  ಆಗಸ್ಟ್ 7ರಂದು ವಿಧಿವಶರಾಗಿದ್ದಾರೆ. ವಿಜಯ್ ಹಾಗೂ ಸ್ಪಂದನಾ ಸ್ಯಾಂಡಲ್‌ವುಡ್‌ನ ಚೆಂದದ ಜೋಡಿ. ವಿಜಯ್ ತಮ್ಮ ಪತ್ನಿಯನ್ನು ತುಂಬಾ ಹಚ್ಚಿಕೊಂಡಿದ್ದರು. ಅದಕ್ಕೆ ದೊಡ್ಮನೆಯಲ್ಲಿ ಕಣ್ಣೀರು ಹಾಕಿದ್ದೇ ಸಾಕ್ಷಿ. ಇದನ್ನೂ ಓದಿ:ಸ್ಪಂದನಾ ನಿಧನಕ್ಕೆ ಸಿಎಂ ಸಿದ್ದರಾಮಯ್ಯ ಸಂತಾಪ

ವಿಜಯ್ ರಾಘವೇಂದ್ರ ಅವರು 2013ರಲ್ಲಿ ಬಿಗ್ ಬಾಸ್ ಸೀಸನ್ 1 (Bigg Boss Kannada) ಶೋನಲ್ಲಿ ಭಾಗವಹಿಸಿ, ಗೆದ್ದು ಬೀಗಿದ್ದರು. ಈ ಶೋನಲ್ಲಿ ವಿಜಯ್ ಅವರ ಗುಣ ವೀಕ್ಷಕರಿಗೆ ಇಷ್ಟ ಆಗಿತ್ತು. 100 ದಿನಗಳಿಗೂ ಅಧಿಕ ಕಾಲ ವಿಜಯ್ ಅವರು ಕುಟುಂಬವನ್ನು ಬಿಟ್ಟು ಬಿಗ್ ಬಾಸ್ ಮನೆಯಲ್ಲಿ ಆಟ ಆಡಿದ್ದರು. ಇದೇ ಮೊದಲ ಬಾರಿಗೆ ಅವರು ಪತ್ನಿಯನ್ನು ನೋಡದೆ, ಫೋನ್‌ನಲ್ಲಿ ಮಾತನಾಡದೆ ಇದ್ದಿದ್ದು. ಆ ವೇಳೆ ವಿಜಯ್ ಅವರು ಪದೇ ಪದೇ ನನ್ನ ಹೆಂಡ್ತಿ ನೋಡಬೇಕು, ಪ್ಲೀಸ್ ಕರೆಸಿ ಅಂತ ಸಾಕಷ್ಟು ಬಾರಿ ಕಣ್ಣೀರಿಟ್ಟಿದ್ದರು, ಮನವಿ ಮಾಡಿದ್ದರು.

ಅಷ್ಟರ ಮಟ್ಟಿಗೆ ವಿಜಯ್, ತಮ್ಮ ಪತ್ನಿಯನ್ನು ಪ್ರೀತಿಸುತ್ತಿದ್ದರು. ಪದೇ ಪದೇ ನನ್ನ ಹೆಂಡ್ತಿ ನೋಡಬೇಕು ಅಂತ ಹೇಳುತ್ತಿದ್ದ ವಿಜಯ್ ಇನ್ನೊಮ್ಮೆ ಪದೇ ಪದೇ ಹೆಂಡ್ತಿ ಕರೆಸಿ ಅಂತ ಹೇಳೋದು ನನಗೂ ಮುಜುಗರ ಆಗ್ತಿದೆ. ಆದರೆ ನನ್ನ ಹೆಂಡ್ತಿಯನ್ನೊಮ್ಮೆ ನೋಡಬೇಕು. ದಯವಿಟ್ಟು ಕರೆಸಿ ಬಿಗ್ ಬಾಸ್ ಅಂತ ಮಗುವಿನ ರೀತಿ ವಿಜಯ್ ಕಣ್ಣೀರಿಟ್ಟಿದ್ದರು. ವಿಜಯ್ ಮನವಿಗೆ ಬಿಗ್ ಬಾಸ್ ಸ್ಪಂದಿಸಿ, ಅವರ ಪತ್ನಿಯನ್ನು ಆ ನಂತರ ಬಿಗ್ ಬಾಸ್ ಮನೆಗೆ ಕಳುಹಿಸಿದ್ದರು. ಸ್ಪಂದನಾ (Spadana) ಎಂಟ್ರಿ ನೋಡಿ ವಿಜಯ್ ಅಂದು ಸಂಭ್ರಮಿಸಿದ್ದರು.

‘ನಿನಗಾಗಿ’ ಸಿನಿಮಾ ಮಾಡುವಾಗ ಮಂಗಳೂರಿನ ಹುಡುಗಿಯೇ ಬೇಕು ಎಂದು ವಿಜಯ್‌ಗೆ ಅನಿಸಿತ್ತು. ಅದರಂತೆಯೇ ಬೆಳ್ತಂಗಡಿಯ ಹುಡುಗಿ ಸ್ಪಂದನಾ ಅವರನ್ನ ನೋಡಿ ವಿಜಯ್ ಬೋಲ್ಡ್ ಆಗಿದ್ದರು. ಇಬ್ಬರ ಪರಿಚಯ ಪ್ರೀತಿಗೆ ತಿರುಗಿ ಎರಡು ಕುಟುಂಬದ ಒಪ್ಪಿಗೆ ಪಡೆದು 2007ರಲ್ಲಿ ವೈವಾಹಿಕ ಜೀವನಕ್ಕೆ ವಿಜಯ್- ಸ್ಪಂದನಾ ಕಾಲಿಟ್ಟಿದ್ದರು.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]