ದರ್ಶನ್ ಅಭಿಮಾನಿಗಳಿಗೆ ಕ್ಷಮೆ ಕೋರಿದ ಬಿಗ್ ಬಾಸ್ ಸಂಜನಾ

ಬೆಂಗಳೂರು: ಇನ್ನು ಮುಂದೆ ಇದೆ ನಿನಗೆ ಹಬ್ಬ…! ಒಂದು ಆರು ತಿಂಗಳು ಗಾಂಧಿನಗರದ ಕಡೆ ತಲೆಹಾಕಿ ಮಲಗ್ಬೇಡ..! ಹೀಗೆ ನಾನಾ ರೀತಿಯ ಟ್ರಾಲ್‍ಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಗ್ ಬಾಸ್ ಸಂಜನಾ ವಿರುದ್ಧ ಠೇಂಕರಿಸುತ್ತಿದ್ದು, ಇದೀಗ ನಟಿ ಸಂಜನಾ ಐ ಆಮ್ ಸಾರಿ ಅಂದಿದ್ದಾರೆ.

ಅಷ್ಟಕ್ಕು ಬಿಗ್‍ಬಾಸ್ ಸಂಜನಾ ಮೇಲೆ ದರ್ಶನ್ ಅಭಿಮಾನಿಗಳು ಈ ರೀತಿ ಗದಾಪ್ರಹಾರ ಮಾಡಲು ಕಾರಣ ಖಾಸಗಿ ವಾಹಿನಿಯ ರಿಯಾಲಿಟಿ ಶೋಗೆ ಸಂಜನಾ ನೀಡಿದ ಸಂದರ್ಶನ.

ಸ್ಟಾರ್ ನಿರೂಪಕ ಅಕುಲ್ ಬಾಲಾಜಿ ನಡೆಸಿಕೊಡುವ ಸೂಪರ್ ಟಾಕ್ ಟೈಮ್ ಕಾರ್ಯಕ್ರಮದಲ್ಲಿ ಸಂಜನಾಗೆ ಸ್ಯಾಂಡಲ್ ವುಡ್‍ನಲ್ಲಿ `ಬಿಲ್ಡಪ್’ ಅಂದ್ರೆ ಯಾರು ಎಂದು ಕೇಳಿದಾಗ ದರ್ಶನ್ ಎಂದು ಹೇಳಿದ್ದರು. ಈ ಉತ್ತರಕ್ಕೆ ದರ್ಶನ್ ಫ್ಯಾನ್ಸ್ ಕೆಂಡಾಮಂಡಲರಾಗಿದ್ದರು. ಸಂಜನಾ ಕ್ಷಮೆ ಕೆಳಬೇಕು ಇಲ್ಲದಿದ್ರೆ ಪರಿಸ್ಥಿತಿ ನೆಟ್ಟಗಿರೋದಿಲ್ಲ ಎಂದು ಗುಡುಗಿದ್ದರು.

ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಂಜನಾ ವಿರುದ್ಧ ತೀವ್ರ ಖಂಡನೆ ವ್ಯಕ್ತವಾದ ಬಳಿಕ ನಟಿ ವಿಡಿಯೋ ಮೂಲಕ ಕ್ಷಮೆ ಕೋರಿದ್ದಾರೆ.

I Am Sorry.. ದರ್ಶನ್ ಸರ್ ಫ್ಯಾನ್ಸ್ ಗೆ ಅಥವಾ ಅವರಿಗೆ ಬೇಜಾರು ಮಾಡುವ ಯಾವ ಉದ್ದೇಶ ಇರಲಿಲ್ಲ. ಅಕುಲ್ ನನ್ನನ್ನು Rapid Fire Round ನಲ್ಲಿ ಬಿಲ್ಡಪ್ ಅನ್ನೋ ಪದ ಕೇಳಿದ್ರು. ನಾನು ಸ್ಪಷ್ಟವಾಗಿ ಹೇಳಿದ್ದೀನಿ. ಅವರ ಸಿನಿಮಾಗಳಲ್ಲಿ ತುಂಬಾ ಬಿಲ್ಡಪ್ ಇರತ್ತೆ ಅಂತ ಹೇಳಿದ್ದೀನಿ. ಅದು ಇಷ್ಟು ಸೀರಿಯಸ್ ಆಗತ್ತೆ ಅಂತ ಗೊತ್ತಿರಲಿಲ್ಲ. I Am Extremely Sorry.. ಬೇಜಾರು ಮಾಡೋ ಉದ್ದೇಶ ಇರಲಿಲ್ಲ. ನನ್ನಿಂದ ಬೇಜಾರಾಗಿದ್ದರೆ I Am Sorry..

https://twitter.com/DarshanFanz/status/891260777650208769

Comments

Leave a Reply

Your email address will not be published. Required fields are marked *