ಮೊದಲ ಮಗುವಿನ ನಿರೀಕ್ಷೆಯಲ್ಲಿ ‌ʻಜೋಶ್ʼ ನಟಿ ಸ್ನೇಹಾ ಆಚಾರ್ಯ

ಜೋ‌ಶ್, ಆಕೆ, ಸಂತು ಸ್ಟೇಟ್ ಫಾರ್ವರ್ಡ್, ಕೃಷ್ಣಲೀಲಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಸ್ನೇಹಾ ಆಚಾರ್ಯ (Sneha Acharya) ಸದ್ಯ ತಮ್ಮ ಬೇಬಿ ಬಂಪ್ (Baby Bump) ಫೋಟೋ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಇದನ್ನೂ ಓದಿ: ರಿಷಬ್ ಶೆಟ್ಟಿ ಮಗಳ ಬರ್ತ್‌ಡೇ ಸಂಭ್ರಮದಲ್ಲಿ ಸ್ಯಾಂಡಲ್‌ವುಡ್ ತಾರೆಯರು

 

View this post on Instagram

 

A post shared by Sneha Acharya (@acharyasneh_official)

`ಬಿಗ್ ಬಾಸ್’ (Bigg Boss Kannaad) ಖ್ಯಾತಿಯ ಸ್ನೇಹಾ ಅವರು 2018ರಲ್ಲಿ ವಿದೇಶಿ ಮೂಲದ ರಾಯನ್ (Rayan) ಅವರನ್ನು ಮದುವೆಯಾಗಿದ್ದರು. ಇದೀಗ ವಿದೇಶದಲ್ಲಿಯೇ ಸೆಟಲ್ ಆಗಿರುವ ನಟಿ ಸೋಷಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ ಆಗಿರುತ್ತಾರೆ. ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಸಿಹಿಸುದ್ದಿಯನ್ನು ಬೇಬಿಬಂಪ್ ಫೋಟೋಶೂಟ್ ಹಂಚಿಕೊಳ್ಳುವ ಮೂಲಕ ನಟಿ ತಿಳಿಸಿದ್ದಾರೆ.

 

View this post on Instagram

 

A post shared by Sneha Acharya (@acharyasneh_official)

ಸ್ನೇಹಾ ಆಚಾರ್ಯ ಬೇಬಿ ಬಂಪ್ ಫೋಟೋ ಶೇರ್ ಮಾಡ್ತಿದ್ದಂತೆ ನಟಿ ಕವಿತಾ ಗೌಡ, ರ‍್ಯಾಪಿಡ್ ರಶ್ಮಿ ಸೇರಿದಂತೆ ಹಲವರು ಶುಭಹಾರೈಸಿದ್ದಾರೆ. ಅಭಿಮಾನಿಗಳು ಕೂಡ ನಟಿಗೆ ವಿಶ್ ಮಾಡಿದ್ದಾರೆ.

ವಿದೇಶಿ ಮೂಲದ ರಾಯನ್ ಅವರ ಹೆಡ್ ಕಂಪೆನಿ ಅಮೆರಿಕದಲ್ಲಿದ್ದು, ಹೀಗಾಗಿ ಅವರು ವಿದೇಶದಲ್ಲಿ ಸೆಟಲ್ ಆಗಿದ್ದಾರೆ. ಬಾಲಿವುಡ್‌ನಲ್ಲಿ ನಟ ಶಾಹಿದ್ ಕಪೂರ್, ಗೋವಿಂದ ಅವರಿಗೆ ನೃತ್ಯ ನಿರ್ದೇಶನ ಮಾಡಿರುವ ಸ್ನೇಹಾ ಅವರು ಡಾನ್ಸ್, ಯೋಗಕ್ಕೆ ಸಂಬಂಧಪಟ್ಟಂತೆ ಸ್ವಂತ ಕಂಪನಿ ಸ್ಥಾಪಿಸುವ ಉದ್ದೇಶ ಹೊಂದಿದ್ದರು. ಕಲರ್ಸ್ ಕನ್ನಡದ `ತಕಧಿಮಿತ’ ರಿಯಾಲಿಟಿ ಶೋನಲ್ಲಿ ಸ್ನೇಹಾ ಭಾಗವಹಿಸಿ ಜಡ್ಜ್‌ಗಳಿಂದ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. `ಜೋಶ್’ ಸಿನಿಮಾದಲ್ಲಿ ನಟಿಸಿದ್ದ ಸ್ನೇಹಾಗೆ ಬಾಲಿವುಡ್‌ನಲ್ಲಿ ಒಳ್ಳೆಯ ಪ್ರಶಂಸೆ ಸಿಕ್ಕಿತ್ತು.

Comments

Leave a Reply

Your email address will not be published. Required fields are marked *