ಕಾವ್ಯಶ್ರೀ ಔಟ್: ರೂಪೇಶ್ ಶೆಟ್ಟಿ ಮೇಲೆ‌ ಶುರುವಾಯ್ತು `ಪುಟ್ಟಗೌರಿ’ಗೆ ಪ್ಯಾರ್

ಬಿಗ್ ಬಾಸ್ ಓಟಿಟಿಯಲ್ಲಿ(Bigg Boss Ott) ಗಮನ ಸೆಳೆದ ಜೋಡಿ ರೂಪೇಶ್(Roopesh) ಮತ್ತು ಸಾನ್ಯ (Sanya) ಫ್ರೆಂಡ್‌ಶಿಪ್‌ನಲ್ಲಿ ಕಾವ್ಯ ಎಂಟ್ರಿಯಿಂದ ಕೊಂಚ ಬಿರುಕಾಗಿದೆ. ದೊಡ್ಮನೆಯಲ್ಲಿ ಕಾವ್ಯ ಮತ್ತು ರೂಪೇಶ್ ಆತ್ಮೀಯತೆ ಸಾನ್ಯಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹೀಗಿರುವಾಗ ರೂಪೇಶ್ ಜೊತೆ ಮಾತನಾಡುವಾಗ ನಾನು ಸಾನ್ಯ ಅಯ್ಯರ್ ಶೆಟ್ಟಿ (Sanya Iyer Shetty) ಎಂದು ಮತ್ತೆ ಹೇಳಿಕೊಂಡಿದ್ದಾರೆ.

ದೊಡ್ಮನೆಯ ಮೊದಲ ವಾರದ ಟಾಸ್ಕ್‌ನಲ್ಲಿ ಹೊಸಬರು ಹಾಗೂ ಹಳೆಬರು ಜೋಡಿ ಆಗಬೇಕು. ಅದರಂತೆ ರೂಪೇಶ್ ಹಾಗೂ ಕಾವ್ರಶ್ರೀ ಗೌಡ(Kavyashree Gowda) ಅವರು ಜೋಡಿ ಆದರು. ಇಬ್ಬರ ನಡುವೆ ಆಪ್ತತೆ ಬೆಳೆದಿದೆ. ರೂಪೇಶ್ ಅವರು ತಾಯಿ ಕಳೆದುಕೊಂಡ ವಿಚಾರ ಹೇಳಿಕೊಂಡು ಅತ್ತಿದ್ದಾರೆ. ಈ ವೇಳೆ ಕಾವ್ಯ ಸಮಾಧಾನ ಮಾಡಿದ್ದರು. ಇಬ್ಬರು ಒಂದು ವಾರಗಳ ಕಾಲ ಸಾಕಷ್ಟು ಸಮಯ ಕಳೆದಿದ್ದಾರೆ.

ಕಾವ್ಯ ಜೊತೆ ರೂಪೇಶ್ ಕ್ಲೋಸ್ ಆಗುತ್ತಿದ್ದಂತೆ ಸಾನ್ಯಗೆ ಬೇಸರ ಆಗಿದೆ. ಅನೇಕ ಸಂದರ್ಭದಲ್ಲಿ ಸಾನ್ಯಾ ಹಾಗೂ ರೂಪೇಶ್ ಒಟ್ಟಾಗಿ ಇರಬೇಕು ಅಂದುಕೊಂಡರು ಅದು ಸಾಧ್ಯವಾಗುತ್ತಿರಲಿಲ್ಲ. ಇದು ಸಾನ್ಯಗೆ ಸಾಕಷ್ಟು ಬೇಸರ ಮೂಡಿಸಿದೆ. ಜೋಡಿ ಟಾಸ್ಕ್ ಮುಗಿದ ಬಳಿಕ ಸಾನ್ಯಾ ಹಾಗೂ ರೂಪೇಶ್ ಈ ವಿಚಾರವಾಗಿ ಮಾತನಾಡಿದ್ದಾರೆ. ಬೆಳಗ್ಗೆ ಯಾಕೆ ಮಾತನಾಡೋಕೆ ಬರಲಿಲ್ಲ ಎಂದು ರೂಪೇಶ್ ಕೇಳಿದರು. ಇದಕ್ಕೆ ಸಾನ್ಯ ಬೇಸರದಲ್ಲಿಯೇ ಉತ್ತರ ನೀಡಿದರು. ಈ ವೇಳೆ ಅವಳ ಕಣ್ಣಲ್ಲಿ ನೀರಿತ್ತು. ನೀನು ಅವಳ ಜೊತೆ ಇದ್ದೆ. ಹೀಗಾಗಿ ನಾನು ಅಲ್ಲಿಗೆ ಬರೋಕೆ ಹೋಗಿಲ್ಲ ಎಂಬ ಮಾತನ್ನು ಸಾನ್ಯ ಹೇಳಿದ್ದಾರೆ. ಆ ರೀತಿ ಏನು ಇಲ್ಲ. ಅದು ಜೋಡಿ ಟಾಸ್ಕ್ ಆಗಿತ್ತು. ಹೀಗಾಗಿ ಅವಳ ಜೊತೆ ಇದ್ದೆ ಅಷ್ಟೇ ಎಂಬ ಮಾತನ್ನು ನೇರವಾಗಿ ರೂಪೇಶ್ ಹೇಳಿದರು. ಇದನ್ನೂ ಓದಿ:ಆಂಟಿ ಎಂದು ಕರೆದ ಗೊಬ್ಬರಗಾಲ ಮೇಲೆ ʻಮಂಗಳಗೌರಿʼ ಗರಂ

ನೀವು ಕ್ಲೋಸ್ ಆದರೆ ನನ್ನ ಕಥೆ ಏನು ಎಂಬ ರೀತಿಯಲ್ಲಿ ಸಾನ್ಯ ಮಾತನಾಡಿದರು. ಇದಕ್ಕೆ ರೂಪೇಶ್ ನೇರವಾಗಿ ಉತ್ತರಿಸಿದರು. ನಾನು ಯಾರು ಹೇಳು, ರೂಪೇಶ್ ಶೆಟ್ಟಿ. ನಾನು ಯಾರು ಹೇಳು ಎಂದು ರೂಪೇಶ್ ಕೇಳಿದರು.  ರೂಪೇಶ್ ಅಯ್ಯರ್ ಎಂದರು ಸಾನ್ಯ. ಅಮ್ಮ ಹೇಳಿದ ಮಾತು ನೆನಪಿದೆಯೇ ಎಂದು ಕೇಳಿದರು ರೂಪೇಶ್. ಅಮ್ಮ, ಸಾನ್ಯಾ ಅಯ್ಯರ್ ಶೆಟ್ಟಿ ಎಂದು ಕರೆಯೋಕೆ ಓಕೆ ಎಂದಿದ್ದರು ಎಂದು ನಗುತ್ತಲೇ ಸಾನ್ಯ ಉತ್ತರಿಸಿದ್ದಾರೆ. ಇದೀಗ ಇಬ್ಬರ ನಡುವೆ ಕಣ್ ಕಣ್ಣಾ ಸಲಿಗೆ ಶುರುವಾಗಿದೆ. ಮುಂದಿನ ದಿನಗಳಲ್ಲಿ ಕರಾವಳಿ ಹುಡುಗನ ಜೊತೆ ʻಪುಟ್ಟಗೌರಿʼ ಪ್ರೇಮ ಪ್ರಸಂಗ ಎಲ್ಲಿಯವೆರೆಗೂ ತಲುಪಲಿದೆ ಎಂಬುದನ್ನ ಕಾದುನೋಡಬೇಕಿದೆ.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *