ಬಿಗ್ ಬಾಸ್ ಕನ್ನಡ: ವಿನಯ್ ಕೋಪಕ್ಕೆ ಜೈಲು ಪಾಲಾದ ಸಂಗೀತಾ

ವಿನಯ್ ಕೋಪಕ್ಕೆ ಬಲಿಯಾಗಿ ಒಂದು ದಿನ ಜೈಲುವಾಸ ಅನುಭವಿಸಿದ್ದಾರೆ ನಟಿ ಸಂಗೀತಾ ಶೃಂಗೇರಿ. ಟಾಸ್ಕ್ ವಿಚಾರದಲ್ಲಿ ವಿನಯ್ ಅವರನ್ನು ಎದುರು ಹಾಕಿಕೊಂಡಿದ್ದರು ಸಂಗೀತಾ. ಎರಡ್ಮೂರು ದಿನ ಸರಿಯಾಗಿಯೇ ಠಕ್ಕರ್ ಕೊಟ್ಟಿದ್ದರು. ಸಂಗೀತಾ ಹೆಚ್ಚೆಚ್ಚು ಬಲಶಾಲಿ ಆಗುತ್ತಿರುವುದು ವಿನಯ್ ಗೆ ಸಹಿಸಿಕೊ‍ಳ್ಳಲು ಆಗುತ್ತಿರಲಿಲ್ಲ. ಈ ಎಲ್ಲ ಕಾರಣವನ್ನಿಟ್ಟುಕೊಂಡು ಸಂಗೀತಾರನ್ನು ನಿನ್ನೆ ಜೈಲಿಗೆ ಕಳುಹಿಸಿದ್ದರು ವಿನಯ್.

ಕೊನೆಗೂ ವಿನಯ್‌ ಬಿಗ್‌ಬಾಸ್‌ (Bigg Boss Kannada) ಮನೆಯಲ್ಲಿ ಕ್ಯಾಪ್ಟನ್ (Captain) ಆಗುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲನೇ ವಾರದಿಂದಲೂ ಕ್ಯಾಪ್ಟನ್‌ ಆಗಲು ಒಂದಿಲ್ಲ ಒಂದು ಬಗೆಯಲ್ಲಿ ಪ್ರಯತ್ನಿಸುತ್ತಲೇ ಇದ್ದ ವಿನಯ್‌ಗೆ (Vinay Gowda) ನಾಲ್ಕನೇ ವಾರದಲ್ಲಿ ಯಶಸ್ಸು ದೊರಕಿದೆ. ಈ ಯಶಸ್ಸು ಇಡೀ ಮನೆಯ ಇಕ್ವೇಷನ್‌ ಅನ್ನೇ ಬದಲಿಸುವ ಹಾಗಿದೆ. ಬದಲಾಗಿ ತಮ್ಮ ಬದ್ದವೈರಿ ಎಂದೇ ಕರೆಯಲ್ಪಡುವ ಸಂಗೀತಾರನ್ನು ಕಳಪೆ ಎಂಬ ಕಾರಣಕ್ಕಾಗಿ ಜೈಲು ಪಾಲು ಮಾಡಲಾಗಿದೆ. ಸಂಗೀತ ನಿನ್ನೆಯಿಂದ ಜೈಲಿನಲ್ಲಿ ವಾಸ ಶುರು ಮಾಡಿದ್ದಾರೆ.

ಹಳ್ಳಿಜೀವನದ ಟಾಸ್ಕ್‌ನಲ್ಲಿ ವಿನಯ್‌ ತಂಡ ಗೆದ್ದು ಬೀಗಿತ್ತು. ಸಂಗೀತಾ (Sangeetha Sringeri) ತಂಡ ಸೋತು ತಣ್ಣಗಾಗಿತ್ತು. ಹಾಗಾಗಿ ವಿನಯ್ ತಂಡದ ಎಲ್ಲರ ಜೊತೆ ತುಕಾಲಿ ಸಂತೋಷ್ ಕೂಡ ಕ್ಯಾಪ್ಟನ್ಸಿ ಟಾಸ್ಕ್‌ಗೆ ಅರ್ಹರಾಗಿದ್ದರು. ಟಾಸ್ಕ್‌ನಲ್ಲಿ ಕೊನೆಗೆ ಉಳಿದಿದ್ದು ತುಕಾಲಿ ಮತ್ತು ವಿನಯ್ ಇಬ್ಬರೇ. ತುಕಾಲಿ ಅವರಿಗೆ ವಿನಯ್‌ ಅವರನ್ನು ಕ್ಯಾಪ್ಟನ್ಸಿ ರೇಸ್‌ನಿಂದ ಹೊರಗೆ ಹಾಕುವ ಅವಕಾಶವಿದ್ದಾಗಲೂ ಅವರು ಅದನ್ನು ಬಳಸಿಕೊಳ್ಳದೆ ಸಿರಿ ಅವರನ್ನು ಹೊರಗೆ ಹಾಕಿದ್ದರು. ಇದರ ಪರಿಣಾಮವಾಗಿ ತುಕಾಲಿ ತಾವೇ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ಸೋತು ಕ್ಯಾಪ್ಟನ್‌ ಪಟ್ಟವನ್ನು ವಿನಯ್‌ ಅವರಿಗೆ ಬಿಟ್ಟುಕೊಡಬೇಕಾಗಿತ್ತು.

ಬಿಗ್‌ಬಾಸ್‌ ಈ ಸೀಸನ್‌ನ ಪ್ರಾರಂಭದ ದಿನಂದಿಗಲೂ ಸಂಗೀತಾ ವರ್ಸಸ್ ವಿನಯ್‌ ಜಟಾಪಟಿ ನಡೆಯುತ್ತಲೇ ಇದೆ. ಹಳ್ಳಿಜೀವನದ ಟಾಸ್ಕ್‌ಗಳಲ್ಲಿಯಂತೂ ಅದು ಅತಿರೇಕಕ್ಕೇ ಹೋಗಿತ್ತು. ಸಂಗೀತಾ ಮತ್ತು ಅವರ ತಂಡದ ಎಲ್ಲ ಸದಸ್ಯರೂ ವಿನಯ್ ಅವರನ್ನು ಕೆಣಕಿ, ಅವರ ಮಾತಿಗೆ ನೇರವಾಗಿ ಕೌಂಟರ್ ಕೊಟ್ಟು ಸಾಕಷ್ಟು ಕೆರಳಿಸಿದ್ದರು. ಆದರೆ ಇದೀಗ ವಿನಯ್ ಈ ವಾರದ ಕ್ಯಾಪ್ಟನ್ ಆಗಿದ್ದಾರೆ. ಯಾವ ಅಧಿಕಾರ ಇಲ್ಲದಿದ್ದಾಗಲೂ ವಿನಯ್ ಅವರನ್ನು ತಡೆಯುವುದು ಕಷ್ಟ. ಇನ್ನು ಅಧಿಕಾರ ಸಿಕ್ಕ ಮೇಲೆ ಕೇಳಬೇಕೆ?

ಪ್ರತಾಪ್‌ ಅವರು ‘ವಿನಯ್ ಅವರು ಈ ವಾರ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ’ ಎಂದು ಘೋಷಿಸಿದ ಗಳಿಗೆಯಲ್ಲಿ ಸಂಗೀತಾ ಗ್ಯಾಂಗ್‌ ಪೂರ್ತಿ ಮೌನವಾಗಿ ಕೂತುಬಿಟ್ಟಿತ್ತು. ವಿನಯ್‌, ತಮ್ಮದೇ ಸ್ಟೈಲ್‌ನಲ್ಲಿ, ‘ಆನೆ ಬಂತೊಂದಾನೆ…’ ಎಂದು ಸಂಭ್ರಮಿಸುತ್ತಿರುವಾಗ ಕಾರ್ತಿಕ್ ಮುಖದಲ್ಲಿ ಆತಂಕ ಎದ್ದು ಕಾಣಿಸುವಂತಿತ್ತು.

 

ಡ್ರೆಸ್ಸಿಂಗ್ ರೂಮಿನಲ್ಲಿ ಸಂಗೀತಾ ಕನ್ನಡಿ ಮುಂದೆ ನಿಂತು, ‘ನಾವು ಆನೆ ವಿರೋಧಿಗಳಲ್ಲ; ನಾವು ಆನೆಗೆ ಹೆದರೋದೂ ಇಲ್ಲ’ ಎಂದು ಡೈಲಾಗ್ ಹೊಡೆದಿರುವುದು ಮುಂದಿನ ವಾರ ಇನ್ನಷ್ಟು ಹಗ್ಗ ಜಗ್ಗಾಟ ನಡೆಯುವ ಸ್ಪಷ್ಟ ಸೂಚನೆಯನ್ನಂತೂ ಅದಕ್ಕೂ ಮೊದಲ ಸಂಗೀತಾರನ್ನು ಜೈಲಿಗೆ ತಳ್ಳುವ ಮೂಲಕ ಮೊದಲ ಶೇಡ್ ತೀರಿಸಿಕೊಂಡಿದ್ದಾರೆ ವಿನಯ್.

Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]