ಮತ್ತೆ ಸ್ಟೈಲೀಶ್‌ ಆಗಿ ಕಾಣಿಸಿಕೊಂಡ ‘ಬಿಗ್‌ ಬಾಸ್‌’ ಸಾನ್ಯ ಅಯ್ಯರ್

ಕಿರುತೆರೆಯ ಪುಟ್ಟಗೌರಿ, ಬಿಗ್ ಬಾಸ್ ಬೆಡಗಿ ಸಾನ್ಯ ಅಯ್ಯರ್ (Saanya Iyer) ಈಗ ಬದಲಾಗಿದ್ದಾರೆ. ತಮ್ಮ ಹೊಸ ಲುಕ್ ಮೂಲಕ ಆಗಾಗ ಫೋಟೋಶೂಟ್‌ನಿಂದ ಸೆನ್ಸೇಷನ್ ಕ್ರಿಯೇಟ್ ಮಾಡ್ತಿದ್ದಾರೆ. ಇದು ಅವರೇನಾ.? ಸಾನ್ಯ ಅಯ್ಯರ್ ಆ ಎಂಬಷ್ಟರ ಮಟ್ಟಿಗೆ ನಟಿ ಬದಲಾಗಿದ್ದಾರೆ. ದೊಡ್ಮನೆಯಿಂದ ಹೊರ ಬರುತ್ತಿದ್ದಂತೆ ನಯಾ ಅವತಾರಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಸದ್ಯ ಸಾನ್ಯ ಸ್ಟೈಲೀಶ್ ಲುಕ್‌ನಲ್ಲಿ ಶೈನ್ ಆಗ್ತಿದ್ದಾರೆ.

‘ಪುಟ್ಟಗೌರಿ ಮದುವೆ’ (Puttagowri Maduve) ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದ ನಟಿ ಸಾನ್ಯ, ಬಾಲನಟಿಯಾಗಿ ಸಾಕಷ್ಟು ಸಿನಿಮಾ, ಸೀರಿಯಲ್‌ಗಳಲ್ಲಿ ನಟಿಸಿದ್ದರು. ಆಟ ಆಡುವ ವಯಸ್ಸಿನಲ್ಲಿ ಕ್ಯಾಮೆರಾ ಮುಂದೆ ಬಂದ ಯುವನಟಿ ಸಾನ್ಯ, ಈಗ ಹೀರೋಯಿನ್ ಆಗೋದ್ದಕ್ಕೆ ತಾಲೀಮು ನಡೆಸುತ್ತಿದ್ದಾರೆ. ಈಗ ಗೋಲ್ಡ್ & ವೈಟ್ ಕಲರ್ ಡ್ರೆಸ್‌ನಲ್ಲಿ ನಟಿ ಹೊಸ ಫೋಟೋಶೂಟ್ ಶೇರ್ ಮಾಡಿದ್ದಾರೆ. ಶಾರ್ಟ್ ಹೇರ್ ಲುಕ್‌ನಲ್ಲಿ ಸಾನ್ಯ ಸೂಪರ್ ಆಗಿ ಕಾಣಿಸಿಕೊಳ್ತಿದ್ದಾರೆ.

ಕಳೆದ ವರ್ಷ ಓಟಿಟಿ ಬಿಗ್ ಬಾಸ್, ಟಿವಿ ಬಿಗ್ ಬಾಸ್‌ನಲ್ಲಿ (Bigg Boss Kannada) ನಟಿ ಸಾನ್ಯ ಅಯ್ಯರ್ ಅವರು ಗುರುತಿಸಿಕೊಂಡರು. ಗಟ್ಟಿ ಸ್ಪರ್ಧಿಯಾಗಿದ್ರು, ಹೆಚ್ಚಾಗಿ ಸುದ್ದಿಯಾಗಿದ್ದು, ರೂಪೇಶ್ ಶೆಟ್ಟಿ (Roopesh Shetty) ಅವರ ಜೊತೆಗಿನ ಒಡನಾಟದಿಂದ ನಟಿ ಹೈಲೆಟ್ ಆದ್ರು. ದೊಡ್ಮನೆ ಆಟ ಮುಗಿದ ಮೇಲೆ ಸಿನಿಮಾ ಅವಕಾಶಗಳು ಸಿಗುತ್ತೆ ಅಂತಾ ಕಾದು ಕುಳಿತಿರೋ ಸಾನ್ಯಗೆ ಕೊಂಚ ಬೇಸರವಾಗಿದೆ. ಸಿನಿಮಾ ಅವಕಾಶಕ್ಕಿಂತ ಒಂದಲ್ಲಾ ಒಂದು ವಿಚಾರವಾಗಿ ಕಿರಿಕ್ ಮಾಡಿಕೊಳ್ಳುವ ಮೂಲಕ ಅಭಿಮಾನಿಗಳ ಕಣ್ಣಿಗೆ ಕಾಣಿಸಿಕೊಳ್ತಿದ್ದಾರೆ. ಇದನ್ನೂ ಓದಿ:ಹೊಸ ತಂಡದ ‘ಅಗ್ರಸೇನಾ’ ಪ್ರಯತ್ನಕ್ಕೆ ಪ್ರೇಕ್ಷಕರ ಉತ್ತಮ ಪ್ರತಿಕ್ರಿಯೆ

ಕೆಲ ದಿನಗಳ ಹಿಂದೆ ಸಾನ್ಯ ಅಯ್ಯರ್ ಅವರು ಬಾಲಿವುಡ್‌ನ (Bollywood) ಖ್ಯಾತ ಫೋಟೋಗ್ರಾಫರ್ ಡಬೂ ರತ್ನಾನಿ ಕ್ಯಾಮೆರಾ ಕಣ್ಣಲ್ಲಿ ನಟಿ ಸೆರೆಯಾದರು. ಸಿನಿಮಾ ಚಾನ್ಸ್‌ಗಾಗಿ ಹಾಟ್ & ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ರು. ಈ ಫೋಟೋ ನೋಡಿದ ಅಭಿಮಾನಿಗಳಿಗೆ ಇವ್ರು ನಮ್ಮ ಕನ್ನಡದ ಹುಡುಗಿ ಪುಟ್ಟಗೌರಿನಾ ಎಂದು ಬಾಯಿ ಮೇಲೆ ಬೆರಳಿಡೋ ಹಾಗೆ ಕ್ಯಾಮೆರಾಗೆ ಪೋಸ್ ಕೊಟ್ಟರು. ಬಗೆ ಬಗೆಯ ಅವತಾರದಲ್ಲಿ ನಟಿ ಕಾಣಿಸಿಕೊಂಡರು. ಈ ಹಾಟ್ ಫೋಟೋಸ್ ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡ್ತು. ಈಗ ಮತ್ತೆ ಹೊಸ ಫೋಟೋಶೂಟ್ ಮಾಡಿಸಿದ್ದಾರೆ.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_title” view=”carousel” /]