ಬಿಗ್ ಬಾಸ್ ಕನ್ನಡ: ವೈಲ್ಡ್ ಕಾರ್ಡ್ ಎಂಟ್ರಿ ಪಡೆದ ಹಾಟ್ ಹುಡುಗಿ ಪವಿ

ನಿನ್ನೆ ಬೆಳ್ಳಂ ಬೆಳಗ್ಗೆ ಬಿಗ್ ಬಾಸ್ ಮನೆಗೆ (Bigg Boss Kannada) ಇಬ್ಬರು ಹೊಸ ಅತಿಥಿಗಳ ಆಗಮನವಾಗಿದೆ. ಹಾಗಂತ ಇವರು ಅಲ್ಲಿಗೆ ಕೇವಲ ಗೆಸ್ಟ್ ಆಗಿ ಹೋಗಿಲ್ಲ. ವೈಲ್ಡ್ ಕಾರ್ಡ್ (Wild Card) ಎಂಟ್ರಿ ಮೂಲಕ ಕಂಟೆಸ್ಟೆಂಟ್ ಆಗಿ ದೊಡ್ಮನೆಗೆ ಕಾಲಿಟ್ಟಿದ್ದಾರೆ. ಅವರು ಗ್ರ್ಯಾಂಡ್ ಎಂಟ್ರಿ ಸಖತ್ ಕ್ರೇಜ್ ಕ್ರಿಯೇಟ್ ಮಾಡಲಾಗಿದೆ. ಒಂದು ಹುಡುಗ ಮತ್ತು ಒಂದು ಹುಡುಗಿಯನ್ನು ಇಂದು ಬಿಗ್ ಬಾಸ್ ಮನೆಗೆ ಕಳುಹಿಸಲಾಗಿದ್ದು, ಮೊದ ಮೊದಲು ಆ ಹುಡುಗಿ ಸಾನ್ಯಾ ಐಯ್ಯರ್ ಇರಬಹುದಾ ಎಂಬ ಅನುಮಾನ ವ್ಯಕ್ತವಾಗಿತ್ತು. ಆನಂತರ ಅಸಲಿ ಹುಡುಗಿಯ ಹೆಸರು ಹೊರ ಬಿದ್ದಿದೆ. ಮಾಡೆಲಿಂಗ್ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಿರುವ, ಬಿಕಿನಿ ಬಾಲೆ ಎಂದೇ ಖ್ಯಾತರಾಗಿರುವ ಪವಿ ಪೂವಪ್ಪ ಈ ಬಾರಿ ವೈಲ್ಡ್ ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

ಪವಿ ಪೂವಪ್ಪ (Pavi Poovappa) ಹೆಸರು ಕೇಳುತ್ತಿದ್ದಂತೆಯೇ ಅನೇಕ ನೆಟ್ಟಿಗರು ಆ ಹೆಸರಿಗಾಗಿ ಹುಡುಕಾಡಿದ್ದಾರೆ. ಹುಡುಕಿದವರಿಗೆಲ್ಲ ಸಿಕ್ಕಿದ್ದು, ರಾಶಿ ರಾಶಿ ಹಾಟ್ ಫೋಟೋಗಳು. ಬಿಕಿನಿ ಶೂಟ್ ಗಳು. ಹೌದು, ಪವಿ ಪೂವಪ್ಪ ಹತ್ತು ವರ್ಷಗಳಿಂದ ಮಾಡೆಲಿಂಗ್ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಸಾವಿರಾರು ಶೋಗಳಿಗೆ ಹೆಜ್ಜೆ ಹಾಕಿದ್ದಾರೆ.

ಸಾಕಷ್ಟು ಜಾಹೀರಾತುಗಳಿಗೆ ರೂಪದರ್ಶಿಯಾಗಿ ಗುರುತಿಸಿಕೊಂಡಿದ್ದಾರೆ. ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಜೊತೆಗೆ ತಮ್ಮದೇ ಆದ ಅಭಿಮಾನಿ ಬಳಗವನ್ನೂ ಅವರು ಹೊಂದಿದ್ದಾರೆ.

ಪವಿ ಪೂವಪ್ಪ ಮೂಲತಃ ಕೊಡಗಿನವರು. ಹುಟ್ಟಿದ್ದು ಕೂರ್ಗನಲ್ಲಿಯಾದರೂ, ಬೆಳೆದದ್ದು ಮಾತ್ರ ಬೆಂಗಳೂರಿನಲ್ಲಿ. ಇವರ ಪೂರ್ಣ ಹೆಸರು ಪಾನಿಕುಟ್ಟೀರ ಪವಿತ್ರಾ ಪೂವಪ್ಪ. ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ನಂತರ ಪವಿ ಪೂವಪ್ಪ ಆಗಿ ಬದಲಾಗಿದ್ದಾರೆ. ಕಾಲೇಜು ದಿನಗಳಿಂದಲೇ ಮಾಡೆಲಿಂಗ್ ಕ್ಷೇತ್ರದತ್ತ ಮುಖ ಮಾಡಿದ ಇವರು, ಮಿಸ್ ಕರ್ನಾಟಕ ಬೆಸ್ಟ್ ಬಾಡಿ ಟೈಟಲ್ ಕೂಡ ಪಡೆದುಕೊಂಡಿದ್ದಾರೆ. ಅನೇಕ ಸೌಂದರ್ಯ ಸ್ಪರ್ಧೆಗಳಲ್ಲಿ ಭಾಗಿಯಾಗಿದ್ದಾರೆ. ಅನೇಕ ಪ್ರಶಸ್ತಿ ಗೌರವಗಳನ್ನೂ ಪಡೆದುಕೊಂಡಿದ್ದಾರೆ.

ಪವಿ ಸಾಂಪ್ರದಾಯಿಕ ಉಡುಗೆಗಿಂತ ತುಂಡುಡುಗೆ, ಬಿಕಿನಿ ತೊಟ್ಟಿದ್ದೇ ಹೆಚ್ಚು. ಅದರಲ್ಲೂ ಫ್ಯಾಷನ್ ಶೋಗಳಲ್ಲಿ ಹಾಟ್ ಹಾಟ್ ಆಗಿ ಕಂಡಿದ್ದೂ ಇದೆ. ಹಾಗಾಗಿ ಮಾಡೆಲಿಂಗ್ ಕ್ಷೇತ್ರದಲ್ಲಿ ಪವಿ ಅಂದರೆ ಅಚ್ಚುಮೆಚ್ಚು. ಸದ್ಯ ಮಾಡೆಲಿಂಗ್ ಜಗತ್ತಿನಿಂದ ಬಿಗ್ ಬಾಸ್ ಜಗತ್ತಿಗೆ ಎಂಟ್ರಿ ಪಡೆದಿದ್ದಾರೆ. ಜೊತೆಗೆ ತಮ್ಮ ಕಥೆ ಹೇಳುವುದಕ್ಕೂ ಅವರು ಸಿದ್ಧರಾಗಿದ್ದಾರೆ.

 

ಎಷ್ಟು ದಿನ ಅವರು ಆ ಮನೆಯಲ್ಲಿ ಉಳಿಯಬಹುದು ಎನ್ನುವ ಕುತೂಹಲ ಮೂಡಿದೆ. ಈಗಾಗಲೇ ಬಿಗ್ ಬಾಸ್ 50 ದಿನ ಪೂರೈಸಿದೆ. ಉಳಿದ ಐವತ್ತು ದಿನಗಳಲ್ಲಿ ಪವಿ ಏನೆಲ್ಲ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ.