ಬಿಗ್‌ಬಾಸ್ 12ರ ಮನೆಗೆ 19 ಸ್ಪರ್ಧಿಗಳ ಎಂಟ್ರಿ – ಒಂಟಿ, ಜಂಟಿ ಆಟಕ್ಕೆ ಕಾದಾಟ ಶುರು

ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-12 (Bigg Boss Kannada  Season 12) ಶುರು ಆಗಿದೆ. ಈ ಬಾರಿ ಬಿಗ್‌ಬಾಸ್ ಮನೆಗೆ 19 ಸದಸ್ಯರು ಎಂಟ್ರಿ ಕೊಟ್ಟಿದ್ದು, ಒಬ್ಬೊಬ್ಬರು ಒಂದೊಂದು ವಿಭಿನ್ನ ಹಿನ್ನೆಲೆಯುಳ್ಳವರು ಮನೆ ಸೇರಿದ್ದಾರೆ. ಇಂದಿನಿಂದ ಬಿಗ್‌ಬಾಸ್ ಸೀಸನ್ 12ರ ಒಂಟಿ, ಜಂಟಿ ಆಟಕ್ಕೆ ಕಾದಾಟ ಶುರುವಾಗಿದೆ.

ಈ ಬಾರಿ ಹಿಂದೆಂದೂ ಇರದಂತೆ ಗ್ರ್ಯಾಂಡ್‌ ಓಪನಿಂಗ್‌ಗೂ ಮೊದಲ ದಿನವೇ ಮೂವರು ಸ್ಪರ್ಧಿಗಳ ಹೆಸರನ್ನು ಬಹಿರಂಗಪಡಿಸಿದ್ದರು. ಅದರಂತೆ ಬಿಗ್‌ಬಾಸ್ ಮನೆಗೆ ಮೊದಲ ಸ್ಪರ್ಧಿಯಾಗಿ ಕಾಕ್ರೋಚ್ ಸುಧಿ, ಎರಡನೇಯದಾಗಿ ಕೊತ್ತಲವಾಡಿ ಸಿನಿಮಾದ ನಾಯಕಿ ಕಾವ್ಯಾ, ಮೂರನೇಯವರಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ನಾಯಿಗಳನ್ನು ಖರೀದಿ ಮಾಡುವ ಡಾಗ್ ಸತೀಶ್ ಎಂಟ್ರಿ ಕೊಟ್ಟಿದ್ದಾರೆ.ಇದನ್ನೂ ಓದಿ: ಸ್ಟೇಜ್‌ನಲ್ಲೇ ನಕ್ಕು ನಗಿಸಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟ ಮಲ್ಲಮ್ಮ

ನಾಲ್ಕನೇ ಸ್ಪರ್ಧಿಯಾಗಿ ಕಾಮಿಡಿ ಕಲಾವಿದ ಗಿಲ್ಲಿ, ಐದನೇ ಸ್ಪರ್ಧಿಯಾಗಿ ನಿರೂಪಕಿ, ನಟಿ ಜಾನ್ಹವಿ, ಆರನೇ ಸ್ಪರ್ಧಿಯಾಗಿ ಗೀತಾ ಧಾರಾವಾಹಿಯಲ್ಲಿ ವಿಜಯ್ ಪಾತ್ರದಲ್ಲಿ ನಟಿಸಿದ್ದ, ಹಿರಿತೆರೆಯಲ್ಲಿಯೂ ಕಾಣಿಸಿಕೊಂಡಿದ್ದ ನಟ ಧನುಶ್, ಏಳನೇ ಸ್ಪರ್ಧಿಯಾಗಿ ಗಿಚ್ಚಿ-ಗಿಲಿಗಿಲಿ ವಿಜೇತ ಚಂದ್ರಪ್ರಭಾ, ಎಂಟನೇ ಸ್ಪರ್ಧಿಯಾಗಿ ಸಿಲ್ಲಿ-ಲಲ್ಲಿ ಧಾರಾವಾಹಿ ಖ್ಯಾತಿಯ ಮಂಜು ಭಾಷಿಣಿ ಕಾಲಿಟ್ಟಿದ್ದಾರೆ.

ಮುಂದುವರೆದು, `ಮನದ ಕಡಲು’ ಸಿನಿಮಾದ ನಾಯಕಿ ರಾಶಿಕಾ ಶೆಟ್ಟಿ, ಲಕ್ಷಣ ಧಾರಾವಾಹಿಯಲ್ಲಿ ಮೌರ್ಯ ಪಾತ್ರದಲ್ಲಿ ನಟಿಸಿದ್ದ ಅಭಿಷೇಕ್, ಮಾತಿನ ಮೂಲಕವೇ ಎಲ್ಲರ ಮನಗೆದಿದ್ದ ಮಲ್ಲಮ್ಮ, ಮುದ್ದುಲಕ್ಷ್ಮಿ ಧಾರಾವಾಹಿಯ ನಟಿ ಅಶ್ವಿನಿ, ಲವಲವಿಕೆ ಧಾರಾವಾಹಿ ಖ್ಯಾತಿಯ ಮಂಗಳೂರು ಮೂಲದ ಧ್ರುವಂತ್, ಯೂಟ್ಯೂಬರ್ ರಕ್ಷಿತಾ ಶೆಟ್ಟಿ, ಬಾಡಿ ಬಿಲ್ಡರ್ ಕರಿಬಸಪ್ಪ, `ನಾ ಡ್ರೈವರ್, ನನ ಲವ್ವರ್ ಹಾಡಿನ ಗಾಯಕ ಮಾಳು ನಿಪನಾಳ, ನಟಿ ಸ್ಪಂದನ, ಖ್ಯಾತ ನಟಿ ಹಾಗೂ ಕನ್ನಡ ಪರ ಹೋರಾಟಗಾರ್ತಿ ಅಶ್ವಿನಿ ಗೌಡ, ಇನ್ನೂ ಕೊನೆಯ ಸ್ಪರ್ಧಿಯಾಗಿ ಖ್ಯಾತ ಆರ್‌ಜೆ ಅಮಿತ್ ಎಂಟ್ರಿ ಕೊಟ್ಟಿದ್ದಾರೆ.

ಇನ್ನೂ ಈ ಬಾರಿ ಬಿಗ್‌ಬಾಸ್ ಮನೆಯೂ ಕೂಡ ವಿಭಿನ್ನವಾಗಿದ್ದು, ಕರ್ನಾಟಕದ ಸಂಸ್ಕೃತಿಯನ್ನು ಎತ್ತಿಹಿಡಿಯುವಂತಿದೆ. ಕರ್ನಾಟಕದ ಪ್ರಾದೇಶಿಕತೆ, ಇತಿಹಾಸ, ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದೆ. ಜೊತೆಗೆ ಈ ಬಾರಿ ಮನೆಯೂ ವಿಭಿನ್ನವಾಗಿದ್ದು, ಎರಡು ಬೆಡ್ ರೂಮ್, ಎರಡು ಡೈನಿಂಗ್ ಟೇಬಲ್ ಕಾಣಿಸಿಕೊಂಡಿದೆ. ಅಲ್ಲದೇ ಪ್ರಾರಂಭದಲ್ಲಿಯೇ ಒಂಟಿ-ಜಂಟಿ ಎಂಬ ಆಟ ಇನ್ನಷ್ಟು ಕೂತುಹಲಕ್ಕೆ ಎಡೆಮಾಡಿಕೊಟ್ಟಿದೆ.ಇದನ್ನೂ ಓದಿ: ಒಂಟಿಯಾಗಿ ಬಿಗ್‌ಬಾಸ್ ಮನೆಗೆ ಕಾಲಿಟ್ಟ ನಿರೂಪಕಿ ಜಾನ್ಹವಿ, ಗೀತಾ ಧಾರಾವಾಹಿಯ ಧನುಷ್