BBK 11: ಬಿಗ್ ಬಾಸ್ ಮನೆಯಿಂದ ಯಮುನಾ ಔಟ್

ಬಿಗ್ ಬಾಸ್ ಕನ್ನಡ ಸೀಸನ್ 11ರ ಮೊದಲ ವಾರದ ಎಲಿಮಿನೇಷನ್ ನಲ್ಲಿ ಯಮುನಾ ಶ್ರೀನಿಧಿ ಔಟ್ ಆಗಿದ್ದಾರೆ. ನಟಿಯ ಎಲಿಮಿನೇಷನ್ ಅಭಿಮಾನಿಗಳಿಗೆ ಶಾಕ್ ಕೊಟ್ಟಿದೆ.

ಮೊದಲ ವಾರವೇ ಯಮುನಾ ಎಲಿಮಿನೇಷನ್ ಆಗುತ್ತೆ ಎಂಬುದನ್ನು ಯಾರು ಊಹಿಸಿರಲಿಲ್ಲ. ವಯಸ್ಸು 45 ದಾಟಿದರೂ ಗಟ್ಟಿಗಿತ್ತಿ ಸಹ ಸ್ಪರ್ಧಿಗಳಿಗೆ ಠಕ್ಕರ್ ಕೊಡುತ್ತಿದ್ದರು. ಇದೀಗ ಅವರು ಔಟ್ ಎನ್ನುತ್ತಿದ್ದಂತೆ ಮನೆ ಮಂದಿಗೂ ಅಚ್ಚರಿ‌ ಮೂಡಿಸಿದೆ.

ಇನ್ನೂ ನವರಾತ್ರಿ‌ ಹಬ್ಬದ ಸಂದರ್ಭವಿರುವ ಕಾರಣ, ಎಲಿಮಿನೇಷನ್ ಇರೋದಿಲ್ಲ ಎಂದೇ ಅನೇಕರು ಭಾವಿಸಿದ್ದರು. ಆದರೆ ಈಗ ಯಮುನಾ ಅವರ ದೊಡ್ಮನೆ ಆಟಕ್ಕೆ ಬಿಗ್ ಬಾಸ್ ಅಂತ್ಯ ಹಾಡಿದ್ದಾರೆ.

ಇನ್ನೂ ಯಮುನಾ ಅವರು ಅಶ್ವಿನಿ ನಕ್ಷತ್ರ ಸೀರಿಯಲ್ ಮೂಲಕ ಪರಿಚಿತರಾಗಿದ್ದರು.‌ಆ ನಂತರ ಹಲವು ಸಿನಿಮಾಗಳಲ್ಲಿ ಪೋಷಕ‌ ಪಾತ್ರಗಳಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಭರತನಾಟ್ಯ ಕಲಾವಿದೆಯಾಗಿ ಕೂಡ ಸೈ ಎನಿಸಿಕೊಂಡಿದ್ದಾರೆ.