ಹೊಸ ರಿಯಾಲಿಟಿ ಶೋಗೆ ‘ಬಿಗ್ ಬಾಸ್’ ವಿನ್ನರ್ ಕಾರ್ತಿಕ್ ಹೋಸ್ಟ್‌

‘ಬಿಗ್ ಬಾಸ್ ಕನ್ನಡ 10’ರ (Bigg Boss Kannada 10)  ವಿನ್ನರ್ ಆಗಿ ಗೆದ್ದ ಕಾರ್ತಿಕ್ ಮಹೇಶ್ (Karthik Mahesh) ಇದೀಗ ಸಿನಿಮಾ ಜೊತೆಗೆ ರಿಯಾಲಿಟಿ ಶೋವೊಂದರ ನಿರೂಪಣೆಯನ್ನು ಒಪ್ಪಿಕೊಂಡಿದ್ದಾರೆ. ನಾನು ರೂಲ್ಸ್‌ ಸೆಟ್ ಮಾಡ್ತೀನಿ ಅಂತ ನಟ ಖಡಕ್ ಆಗಿ ಡೈಲಾಗ್ ಹೊಡೆದಿದ್ದಾರೆ. ಇದನ್ನೂ ಓದಿ:‘ಬಿಲ್ಲ ರಂಗ ಭಾಷಾ’ ಸಿನಿಮಾದಲ್ಲಿ ಸುದೀಪ್ ತ್ರಿಬಲ್ ರೋಲ್?

ಜಗತ್ತಿನಲ್ಲಿ ಮೂರು ತರಹದ ಜನರು ಇರುತ್ತಾರೆ. ಒಬ್ಬರು ರೂಲ್ಸ್‌ ಬ್ರೇಕ್ ಮಾಡೋರು, ಒಬ್ಬರು ಫಾಲೋ ಮಾಡೋರು. ಮೂರನೆಯವನು ನಾನು ರೂಲ್ಸ್‌ ಸೆಟ್ ಮಾಡುವವನು ಎಂದು ಮಾಸ್ ಆಗಿ ಕಾರ್ತಿಕ್ ಡೈಲಾಗ್ ಹೇಳಿ ಅಭಿಮಾನಿಗಳ ಮನಗೆದ್ದಿದ್ದಾರೆ. ವಾಹಿನಿ ಹಂಚಿಕೊಂಡಿರುವ ಪ್ರೋಮೊ ಸದ್ಯ ಸದ್ದು ಮಾಡುತ್ತಿದೆ. ಸೆ.15ರಿಂದ ರಾತ್ರಿ 7 ಗಂಟೆಗೆ ‘ಸುವರ್ಣ ಸೆಲೆಬ್ರಿಟಿ ಲೀಗ್’ ಎಂಬ ಹೊಸ ಶೋ ಶುರುವಾಗಲಿದೆ. ವಿಶೇಷ ಅಂದರೆ, ಕಿರುತೆರೆ ಕಲಾವಿದರ ಜೊತೆಗೆ ಮಾಜಿ ಬಿಗ್ ಬಾಸ್ ಸ್ಪರ್ಧಿಗಳು ಕೂಡ ಬರುತ್ತಿದ್ದಾರೆ.

ಅಂದಹಾಗೆ, ‘ರಾಮರಸ’ (Ramarasa) ಸಿನಿಮಾದಲ್ಲಿ ಹೀರೋ ಆಗಿ ಕಾರ್ತಿಕ್ ಪ್ರಸ್ತುತ ನಟಿಸುತ್ತಿದ್ದಾರೆ. ಇದರ ಜೊತೆಗೆ ಧ್ರುವತಾರೆ ಎಂಬ ಸಿನಿಮಾದಲ್ಲಿ ವಿಲನ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ.