Bigg Boss: ಕಿಚ್ಚನ ಬೆಂಬಲ ಸಿಗ್ತಿದ್ದಂತೆ ಜೂಮ್‌ನಲ್ಲಿ ಡ್ರೋನ್ ಪ್ರತಾಪ್

ಬಿಗ್ ಬಾಸ್ (Bigg Boss Kannada) ವೀಕೆಂಡ್ ಪಂಚಾಯಿತಿಯಲ್ಲಿ ಸ್ಪರ್ಧಿಗಳಿಗೆ ಕಿಚ್ಚ ಚಳಿ ಬಿಡಿಸಿದ್ದಾರೆ. ಡ್ರೋನ್ ಪ್ರತಾಪ್ ಅವರನ್ನ ಹೀಯಾಳಿಸಿದವರಿಗೆ ಸುದೀಪ್ (Sudeep) ತಕ್ಕ ಪಾಠ ಮಾಡಿದ್ದಾರೆ. ಕಿಚ್ಚನ ಸಪೋರ್ಟ್ ಸಿಗ್ತಿದ್ದಂತೆ ಡ್ರೋನ್ ಪ್ರತಾಪ್ (Drone Prathap) ಜೂಮ್‌ನಲ್ಲಿದ್ದಾರೆ.

ಡ್ರೋನ್ ಪ್ರತಾಪ್‌ಗೆ ಹೀಯಾಳಿಸಿದ್ದ ತುಕಾಲಿ ಸಂತೂಗೆ ಕಿಚ್ಚ ಖಡಕ್ ಕ್ಲಾಸ್ ಮಾಡಿದ್ದಾರೆ. ಇದಾದ ಬಳಿಕ ಪ್ರತಾಪ್ ಹೊಸ ಪ್ರತಾಪವನ್ನ ತೋರಿಸಿದ್ದಾರೆ. ಕಿಚ್ಚನ ಬೆಂಬಲ ಸಿಗ್ತಿದ್ದಂತೆ ಪ್ರತಾಪ್, ಹೊಸ ಜೋಶ್ ಆರಂಭವಾಗಿದೆ. ಪ್ರತಾಪ್ ನಡೆಯಲ್ಲಿ ಆಗಿರುವ ಬದಲಾವಣೆ ನೋಡಿ ಬಿಗ್‌ಬಾಸ್ ಸ್ಪರ್ಧಿಗಳು ಶಾಕ್ ಆಗಿದ್ದಾರೆ. ದೊಡ್ಮನೆಯಲ್ಲಿ ಪ್ರತಾಪ್ ಅತೀ ಹೆಚ್ಚು ಟಾರ್ಗೆಟ್ ಆಗಿದ್ದರು. ಇದನ್ನೂ ಓದಿ:ಪತಿ ರಣ್‌ಬೀರ್, ರಶ್ಮಿಕಾ ಮಂದಣ್ಣ ಲಿಪ್‌ಲಾಕ್‌ಗೆ ಆಲಿಯಾ ಭಟ್ ಪ್ರತಿಕ್ರಿಯೆ

‘ಸೂಪರ್ ಸಂಡೇ ವಿತ್ ಸುದೀಪ್’ ಕಾರ್ಯಕ್ರಮದಲ್ಲಿ ಚಾರ್ಲಿ ನಟಿ ಸಂಗೀತಾ (Sangeetha), ತನಿಷಾ ಜೊತೆ ಮಸ್ತ್ ಆಗಿ ಡ್ರೋನ್ ಪ್ರತಾಪ್ ಹೆಜ್ಜೆ ಹಾಕಿದ್ದಾರೆ. ತುಕಾಲಿ ಸಂತೂ ಅವರೇ ಡ್ರೋನ್ ಪ್ರತಾಪ್‌ಗೆ ಓಪನ್ ಅಪ್ ಆಗಿ ಅಂತಿದ್ರಿ, ಓಪನ್ ಅಪ್ ಆಗೋದು ಹೀಗೆ ಎಂದು ಸುದೀಪ್ ಕಾಲೆಳೆದಿದ್ದಾರೆ. ಮನೆಮಂದಿ ಕೂಡ ಪ್ರತಾಪ ಅವರ ಜೋಶ್ ನೋಡಿ ನಕ್ಕಿದ್ದಾರೆ.

ತುಕಾಲಿ ಸಂತೂ, ವರ್ತೂರ್ ಸಂತೋಷ್, ವಿನಯ್, ಸ್ನೇಹಿತ್ ಸೇರಿದಂತೆ ಅನೇಕರು ಈ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಟೀಕೆಗೆ ಗುರಿಯಾಗಿದ್ದರ ಬಗ್ಗೆ ಮಾತನಾಡಿ, ತಿವಿದಿದ್ದರು. ಈ ವಿಚಾರಕ್ಕೆ ಡ್ರೋನ್ ಪ್ರತಾಪ್ ಕಣ್ಣೀರಿಟ್ಟಿದ್ದರು.

[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]