ಧರ್ಮಕ್ಕಾಗಿ 4 ವರ್ಷಗಳ ಪ್ರೀತಿಗೆ ಅಂತ್ಯ ಹಾಡಿದ ‘ಬಿಗ್ ಬಾಸ್’ ಜೋಡಿ

ಬಿಗ್ ಬಾಸ್ ಮನೆಯಲ್ಲಿ (Bigg Boss Hindi 13) ಲವ್ ಆಗೋದು. ಶೋ ಮುಗಿದ ಮೇಲೆ ಬ್ರೇಕಪ್ ಆಗೋದು ಕಾಮನ್ ಆಗಿದೆ. ಬಿಗ್ ಬಾಸ್ ಹಿಂದಿ ಸೀಸನ್ 13ರಲ್ಲಿ ಪ್ರೇಮಿಗಳಾಗಿ ಹೈಲೆಟ್ ಆಗಿದ್ದ ಆಸೀಮ್ ರಿಯಾಜ್ ಮತ್ತು ಹಿಮಾಂಶಿ ಖುರಾನಾ (Himanshi Khurana) ಜೋಡಿ ಧರ್ಮಕ್ಕಾಗಿ ಪ್ರೀತಿಯನ್ನು ತ್ಯಾಗ ಮಾಡಿದ್ದಾರೆ. ಇಬ್ಬರೂ ಬ್ರೇಕಪ್ ಬಗ್ಗೆ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

ಹಿಮಾಂಶಿ ಸಿಖ್ ಧರ್ಮದವರು, ಆಸೀಮ್ ರಿಯಾಜ್ (Asim Riaz) ಮುಸ್ಲಿಂ ಧರ್ಮದವರಾಗಿದ್ದಾರೆ. ಸಿದ್ಧಾರ್ಥ್ ಶುಕ್ಲಾ ವಿನ್ನರ್ ಆಗಿದ್ದ ಬಿಗ್ ಬಾಸ್ ಸೀಸನ್ 13ರಲ್ಲಿ ಆಸೀಮ್ ಮತ್ತು ಹಿಮಾಂಶಿ ಪರಿಚಿತರಾದರು. ಆ ಸ್ನೇಹ ಪ್ರೀತಿಗೆ ತಿರುಗಿ ಶೋ ಮುಗಿದ ಮೇಲೂ ಲಿವಿಂಗ್ ಟು ಗೆದರ್ ರಿಲೇಷನ್‌ಶಿಪ್‌ನಲ್ಲಿದ್ದರು. ಇದೀಗ ಮದುವೆ ವಿಚಾರ ಬಂದಾಗ ಧರ್ಮದ ಬಗ್ಗೆ ಇಬ್ಬರಿಗೂ ಅರಿವಾಗಿದೆ. ಇದನ್ನೂ ಓದಿ:ಎದೆಯ ಗೀಟು ಕಾಣುವಂತೆ ಬೋಲ್ಡ್ ಆಗಿ ಕಾಣಿಸಿಕೊಂಡ ಜಾನ್ವಿ ಕಪೂರ್

ವೈಯಕ್ತಿಕ ಕಾರಣ ಮತ್ತು ಬೇರೆ ಬೇರೆ ಧರ್ಮವಾಗಿರುವ ಕಾರಣ, ಇಬ್ಬರೂ ಒಟ್ಟಿಗೆ ಇರಲು ಸಾಧ್ಯವಿಲ್ಲ. ನಾವು ಈಗ ಒಟ್ಟಿಗೆ ಇಲ್ಲ. ಆದರೆ ನಾವು ಕಳೆದ ಸಮಯ ಅದ್ಭುತವಾಗಿದೆ. ಆದರೆ ಈಗ ನಮ್ಮ ಸಂಬಂಧ ಮುಗಿದಿದೆ. ನಮ್ಮ ಸಂಬಂಧದ ಪ್ರಯಾಣ ಅದ್ಭುತವಾಗಿದೆ. ಜೀವನದಲ್ಲಿ ನಾವು ಮುಂದೆ ಸಾಗುತ್ತಿದ್ದೇವೆ. ನಮ್ಮ ಧರ್ಮಕ್ಕೆ ಗೌರವ ಕೊಡುತ್ತಾ, ನಮ್ಮ ಪ್ರೀತಿಯನ್ನ ತ್ಯಾಗ ಮಾಡುತ್ತಿದ್ದೇವೆ. ಪ್ರತಿಯೊಬ್ಬರು ನಮ್ಮ ಖಾಸಗಿತನವನ್ನು ಗೌರವಿಸಿ ಎಂದು ನಟಿ ಹಿಮಾಂಶಿ ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಬಿಗ್ ಬಾಸ್ ಶೋ (Bigg Boss) ಮೂಲಕ ಆಸೀಮ್ ಮತ್ತು ಹಿಮಾಂಶಿ ಪ್ರೇಕ್ಷಕರಿಗೆ ಇಷ್ಟವಾಗಿದ್ದರು. ಈಗ ಬ್ರೇಕಪ್ ಸುದ್ದಿ ಕೇಳಿ ಫ್ಯಾನ್ಸ್ ಬೇಸರ ಹೊರಹಾಕಿದ್ದಾರೆ. ಇಬ್ಬರೂ ಒಟ್ಟಾಗಿ ಬಾಳಿ ಎಂದು ಮನವಿ ಮಾಡ್ತಿದ್ದಾರೆ.