ಲಾಂಗ್ ವಿವಾದ: ವಿನಯ್, ರಜತ್‌ಗೆ ಷರತ್ತುಬದ್ಧ ಜಾಮೀನು ಮಂಜೂರು

ಚ್ಚು ಹಿಡಿದು ರೀಲ್ಸ್ ಮಾಡಿ ಬಂಧನಕ್ಕೆ ಒಳಗಾಗಿದ್ದ ವಿನಯ್ ಗೌಡ (Vinay Gowda) ಹಾಗೂ ರಜತ್‌ಗೆ (Rajath) 24ನೇ ಎಸಿಎಂಎಂ ಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ:ಆಸ್ಟ್ರೇಲಿಯಾದಲ್ಲಿ ಸಮಂತಾ- ಪ್ರವಾಸದ ಫೋಟೋ ಹಂಚಿಕೊಂಡ ನಟಿ

ವಿನಯ್ ಗೌಡ ಹಾಗೂ ರಜತ್‌ಗೆ 24ನೇ ಎಸಿಎಂಎಂ ಕೋರ್ಟ್ ಜಾಮೀನು ನೀಡಿದೆ. ಸದ್ಯ ಇಬ್ಬರನ್ನು ಪರಪ್ಪನ ಅಗ್ರಹಾರ ಜೈಲಿಗೆ ಬಸವೇಶ್ವರ ನಗರ ಪೊಲೀಸರು ಸ್ಥಳಾಂತರಿಸಿದ್ದಾರೆ. ಜಾಮೀನು ಆದೇಶ ಪ್ರತಿ ಜೈಲಿಗೆ ತಲುಪಿದ ನಂತರ ಇಬ್ಬರನ್ನೂ ರಿಲೀಸ್ ಮಾಡಲಿದ್ದಾರೆ. ಇಬ್ಬರಿಗೂ ತಲಾ 10,000 ರೂ ಶ್ಯೂರಿಟಿ ನೀಡುವ ಷರತ್ತನ್ನು ನ್ಯಾಯಾಲಯ ವಿಧಿಸಿದೆ.

ಇನ್ನೂ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದಕ್ಕೆ ಶಸ್ತ್ರಾಸ್ತ್ರ ಕಾಯ್ದೆಯಡಿ ರಜತ್, ವಿನಯ್‌ರನ್ನು ಬಂಧಿಸಲಾಗಿತ್ತು. ಮಾ.26ರಿಂದ ಮಾ.28ರವರೆಗೆ 3 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರ್ಟ್ ಆದೇಶ ನೀಡಿತ್ತು. ಇದನ್ನೂ ಓದಿ:ಫ್ಯಾಮಿಲಿ ಫೋಟೋ ಹಂಚಿಕೊಂಡ ದರ್ಶನ್ ಪತ್ನಿ- ಯಾರ ಕಣ್ಣು ನಿಮ್ಮೇಲೆ ಬೀಳದಿರಲಿ ಎಂದ ಫ್ಯಾನ್ಸ್

ರಜತ್ ಅವರು ದರ್ಶನ್ ನಟನೆಯ ‘ಕರಿಯ’ ಸಿನಿಮಾ ಲುಕ್‌ನಲ್ಲಿ ಕಾಣಿಸಿಕೊಂಡಿದ್ರೆ, ಇತ್ತ ವಿನಯ್ ಪುಷ್ಪರಾಜ್ ಲುಕ್‌ನಲ್ಲಿ ಮಚ್ಚು ಹಿಡಿದು ಇಬ್ಬರು ರೀಲ್ಸ್ ಮಾಡಿ ಕಾನೂನು ಸಂಕಷ್ಟಕ್ಕೆ ಸಿಲುಕಿದ್ದರು.