ಎಷ್ಟು ಜನರ ಜೊತೆ ಮಲಗಿದ್ದೀ?- ಬಾಲಕನ ಅಸಭ್ಯ ಪ್ರಶ್ನೆಗೆ ಉರ್ಫಿ ಜಾವೇದ್ ಶಾಕ್

ದಾ ವಿಚಿತ್ರ ಉಡುಗೆಗಳನ್ನು ಧರಿಸುವ ಮೂಲಕ ಸದ್ದು ಮಾಡುವ ಬಾಲಿವುಡ್ ಬ್ಯೂಟಿ ಉರ್ಫಿ ಜಾವೇದ್ (Urfi Javed) ಮತ್ತೆ ಸುದ್ದಿಯಲ್ಲಿದ್ದಾರೆ. ಬಾಲಕನೊಬ್ಬ (Boy) ಅಶ್ಲೀಲ ಪ್ರಶ್ನೆ ಕೇಳಿದ್ದರ ಬಗ್ಗೆ ನಟಿ ಬೇಸರ ವ್ಯಕ್ತಪಡಿಸಿದ್ದಾರೆ. ತನ್ನ ತಾಯಿಯ ಮುಂದೆಯೇ ಎಷ್ಟು ಜನರ ಜೊತೆ ಮಲಗಿದ್ದೀ? ಎಂದು ಕೇಳಿದ ಬಾಲಕನ ಅಸಭ್ಯ ಮಾತಿಗೆ ಉರ್ಫಿ ಶಾಕ್ ಆಗಿದ್ದಾರೆ. ಇದನ್ನೂ ಓದಿ:ಹೆಣ್ಣು ಮಗುವಿಗೆ ಜನ್ಮ ನೀಡಿದ ಮಿಲನಾ ನಾಗರಾಜ್

ನಿನ್ನೆ ನನ್ನ ಕುಟುಂಬದವರ ಮುಂದೆ ತುಂಬಾ ಕಿರಿಕಿರಿ ಆಗುವಂತಹ ಘಟನೆ ನಡೆಯಿತು. ಪಾಪರಾಜಿಗಳು ನನ್ನ ಫೋಟೋ ತೆಗೆಯುತ್ತಿರುವಾಗ ಹುಡುಗರ ಗುಂಪೊಂದು ನನ್ನ ನೋಡಿ ಕಾಮೆಂಟ್ ಹೊಡೆದರು. ಆಗ ಎಲ್ಲರ ಎದುರಿನಲ್ಲೂ ನೀನು ಎಷ್ಟು ಜನರ ಜೊತೆ ಮಲಗಿದ್ದೀಯಾ? ಅಂತ ಬಾಲಕನೊಬ್ಬ ಕೇಳಿದ್ದಾನೆ. ಆ ಹುಡುಗನಿಗೆ ಅಂದಾಜು 15 ವರ್ಷ ಇರಬಹುದು. ನನ್ನ ಕುಟುಂಬ ಮತ್ತು ತಾಯಿ ಎದುರಿನಲ್ಲೇ ಅವನು ಹಾಗೆ ಕೇಳಿದ ಎಂದು ಉರ್ಫಿ ಸೋಶಿಯಲ್ ಮೀಡಿಯಾದಲ್ಲಿ ನಡೆದ ಘಟನೆಯ ಬಗ್ಗೆ ವಿವರಿಸಿದ್ದಾರೆ.

ಆ ಪ್ರಶ್ನೆ ಕೇಳಿಸಿಕೊಂಡು ನನಗೆ ನನ್ನ ಕುಟುಂಬದ ಮುಂದೆ ತುಂಬಾ ಮುಜುಗರ ಆಯಿತು. ಇದರಿಂದ ನನ್ನ ತಾಯಿಗೆ ಬೇಸರವಾಯಿತು. ಪಾಪರಾಜಿಗಳ ಎದುರಿನಲ್ಲೇ ನಾನು ಆ ಹುಡುಗನಿಗೆ ಬಾರಿಸಬೇಕು ಎಂದುಕೊಂಡೆ. ಮಹಿಳೆಯರಿಗೆ ಮತ್ತು ಎಲ್ಲ ಜನರಿಗೆ ಗೌರವ ಕೊಡುವುದನ್ನು ನಿಮ್ಮ ಹುಡುಗರಿಗೆ ಕಲಿಸಿಕೊಡಿ ಎಂದಿದ್ದಾರೆ ನಟಿ. ಆ ಹುಡುಗನ ತಂದೆ-ತಾಯಿ ಬಗ್ಗೆ ನನಗೆ ಪಾಪ ಎನಿಸಿತು ಎಂದು ಉರ್ಫಿ ಜಾವೇದ್ ಇನ್ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಅಂದಹಾಗೆ, ನಟಿ ಉರ್ಫಿ ‘ಫಾಲೋ ಕರ್ ಲೋ ಯಾರ್’ ಎಂಬ ಶೋನಲ್ಲಿ ಕಾಣಿಸಿಕೊಳ್ತಿದ್ದಾರೆ. ಇದರ ವೈಯಕ್ತಿಕ ಬದುಕಿನ ಹಲವು ವಿಚಾರಗಳನ್ನು ನಟಿ ರಿವೀಲ್ ಮಾಡಿದ್ದಾರೆ.