ದರ್ಶನ್ ಅಭಿಮಾನಿಗಳಿಂದ ಅಶ್ಲೀಲ ಕಾಮೆಂಟ್ ಕಿರುಕುಳ- ನೋವು ಹಂಚಿಕೊಂಡ ಸೋನು

‘ಬಿಗ್ ಬಾಸ್’ (Bigg Boss) ಖ್ಯಾತಿಯ ಸೋನು ಶ್ರೀನಿವಾಸ್ ಗೌಡಗೆ (Sonu Srinivas Gowda) ದರ್ಶನ್ ಅಭಿಮಾನಿಗಳಿಂದ (Darshan Fans) ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ನಟಿ ಸೋನು ವಿಡಿಯೋ ಮೂಲಕ ನೋವು ತೋಡಿಕೊಂಡಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್‌ ಅರೆಸ್ಟ್‌ ಆಗಿದ್ದು, ಅವರ ಪರ ಸೋನು ಮಾತನಾಡಲಿಲ್ಲ ಎಂಬ ಕಾರಣಕ್ಕೆ ಸೋನು ಅಶ್ಲೀಲ ಕಾಮೆಂಟ್‌ಗಳಿಂದ ಕಿರುಕುಳ ಕೊಡುತ್ತಿದ್ದಾರೆ ಎಂದು ನಟಿ ಮಾತನಾಡಿದ್ದಾರೆ.

ಸೋನು ಗೌಡ ಮಾತನಾಡಿ, ಇನ್ಸ್ಟಾಗ್ರಾಂ, ಯುಟ್ಯೂಬ್‌ನಲ್ಲಿ ತುಂಬಾ ಕೆಟ್ಟ ಕಾಮೆಂಟ್‌ಗಳು ನನಗೆ ಬರುತ್ತಿವೆ. ದರ್ಶನ್ ಅವರ ಬಗ್ಗೆ ನಾನು ಏನು ಮಾತನಾಡಿಲ್ಲ ಎಂದು. ನಾವು ಇನ್ನೂ ಚಿಕ್ಕವರು. ನಾವು ಅವರ ಬಗ್ಗೆ ಮಾತನಾಡುವಷ್ಟು ಇನ್ನೂ ಬೆಳೆದಿಲ್ಲ. ನಾವು ಒಂದ ಸಲ ಫ್ಯಾನ್ ಅಂತಾದರೆ, ಸಾಯುವರೆಗೂ ನಾವು ಫ್ಯಾನ್ ಆಗಿರುತ್ತೇವೆ. ತಪ್ಪು ಯಾರೇ ಮಾಡಿದ್ರೂ ಶಿಕ್ಷೆ ಆಗಿಯೇ ಆಗುತ್ತೆ. ನಾವು ಒಳ್ಳೆಯವರಾಗಿರಬಹುದು, ಕೆಟ್ಟವರಾಗಿರಬಹುದು ಆದರೆ ತೀರ್ಪು ಬಂದೇ ಬರುತ್ತದೆ. ಅಲ್ಲಿಯವರೆಗೂ ಕಾಯಿರಿ. ಅಲ್ಲಿಯವರೆಗೆ ನಮಗೆ ಕೆಟ್ಟ ಕಾಮೆಂಟ್ ಮಾಡಬೇಡಿ. ಅಲ್ಲಿಯವರೆಗೆ ಆ ದೇವರು ಎರಡೂ ಕುಟುಂಬಕ್ಕೆ ಧೈರ್ಯ ಕೊಡಲಿ ಎಂದು ಕೇಳಿಕೊಳ್ಳುತ್ತೇನೆ. ನಮ್ಮ ಬಾಸ್ ದರ್ಶನ್ ಅವರು ಇಂತಹ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಹೋಪ್ ಇಟ್ಟುಕೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಅಕ್ರಮವಾಗಿ ಮಗುವೊಂದನ್ನು ದತ್ತು ಪಡೆದ ವಿಚಾರವಾಗಿ 11 ದಿನಗಳ ಕಾಲ ನಟಿ ಸೋನು ಬಂಧನದಲ್ಲಿದ್ದರು. ಆ ನಂತರ ಬಿಡುಗಡೆಯಾದರು. ಇದನ್ನೂ ಓದಿ:ಮತ್ತೆ ಒಂದಾಯ್ತು ಒಂದು ಮೊಟ್ಟೆಯ ಕಥೆ ಟೀಮ್- ‘ರೂಪಾಂತರ’ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ

ಅಂದಹಾಗೆ, ‘ಕ್ಯಾಡ್ಬರೀಸ್’ ಸಿನಿಮಾದಲ್ಲಿ ಸೋನು ಶ್ರೀನಿವಾಸ್ ಗೌಡ ಕೂಡ ಕಾಣಿಸಿಕೊಂಡಿದ್ದಾರೆ. ಐಟಂ ಹಾಡಿಗೆ ನಟಿ ಹೆಜ್ಜೆ ಹಾಕಿದ್ದಾರೆ. ಧರ್ಮ ಕೀರ್ತಿರಾಜ್, ಅದ್ವಿತಿ ಶೆಟ್ಟಿ ನಟನೆಯ ಸಿನಿಮಾ ಇದಾಗಿದೆ. ಈ ಚಿತ್ರದ ರಿಲೀಸ್‌ಗೆ ಸೋನು ಎದುರು ನೋಡ್ತಿದ್ದಾರೆ.