ಅಮ್ಮನ ಬಿಟ್ಟು ಹೇಗಿರುವುದು ಅಂತಲೇ ಗೊತ್ತಾಗುತ್ತಿಲ್ಲ: ಕಣ್ಣೀರಿಟ್ಟ ಶುಭಾ ಪೂಂಜಾ

ಸ್ಯಾಂಡಲ್‌ವುಡ್ ನಟಿ ಶುಭಾ ಪೂಂಜಾ (Shubha Poonja) ಅವರ ತಾಯಿ (Mother) ನಿಧನರಾಗಿರುವ ನೋವಿನಲ್ಲಿದ್ದಾರೆ. ಅಮ್ಮ ವಿಧಿವಶರಾಗಿ ಒಂದು ವಾರದ ಬಳಿಕ ಅವರು ರಿಯಾಲಿಟಿ ಶೋ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಈ ವೇಳೆ, ಅಗಲಿದ ಅಮ್ಮನ ನೆನೆದು ಅವರನ್ನು ಬಿಟ್ಟು ಹೇಗಿರುವುದು ಅಂತಲೇ ಗೊತ್ತಾಗುತ್ತಿಲ್ಲ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇದನ್ನೂ ಓದಿ:ಪುನೀತ್‌ ಸರ್ ಫ್ಯಾನ್ಸ್‌ಗೆ ಇವತ್ತು ಹಬ್ಬ – ಅಪ್ಪು ರೀ-ರಿಲೀಸ್‌ ಬಗ್ಗೆ ಅನುಶ್ರೀ ಮಾತು

‘ಬಾಯ್ಸ್ ವರ್ಸಸ್ ಗರ್ಲ್ಸ್’ ಶೋನಲ್ಲಿ ಮಾತನಾಡಿದ ಶುಭಾ ಪೂಂಜಾ, ಅಮ್ಮ ಸಾಯುವ ಹಿಂದಿನ ದಿನದ ರಾತ್ರಿ, ಅವರು ನನ್ನ ಕೈಯನ್ನು ಬಿಟ್ಟೆ ಇಲ್ಲ. ನಾನು ಕೂಡ ಗಟ್ಟಿಯಾಗಿ ಹಿಡಿದುಕೊಂಡಿದ್ದೆ ಎಂದರು. ಇಡೀ ರಾತ್ರಿ ಅಮ್ಮನಿಗೆ ಉಸಿರಾಡುವುದಕ್ಕೆ ಸಾಧ್ಯವಾಗುತ್ತಿರಲಿಲ್ಲ. ಈಗ ಅವರನ್ನು ಬಿಟ್ಟು ನಾನು ಹೇಗೆ ಇರುವುದು ಅಂತ ಗೊತ್ತಾಗುತ್ತಲೇ ಇಲ್ಲ. ಐ ಆಮ್ ನಾಟ್ ಓಕೆ ಎನ್ನುತ್ತಾ ಶುಂಭಾ ಪೂಂಜಾ ಅವರು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಈ ವೇಳೆ, ಕಾರ್ಯಕ್ರಮ ಇತರೆ ಸ್ಪರ್ಧಿಗಳು ಅವರಿಗೆ ಸಂತೈಸಿದ್ದಾರೆ.

ಮಾ.6ರಂದು ಶುಭಾ ತಾಯಿ ನಿಧನರಾದರು. ಆ ಸಂದರ್ಭದಲ್ಲಿ ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ, ನೀನು ಇಲ್ಲದೆ ನನಗೆ ಜೀವನವಿಲ್ಲ. ನಿನ್ನ ಬಿಟ್ಟು ನನಗೆ ಬದುಕೋಕೆ ಬರೋದು ಇಲ್ಲ. 24 ಗಂಟೆ ನಿನ್ನ ಜೊತೆನೇ ಇರುತ್ತಿದ್ದೆ, ಈಗ ನಾನು ಏನು ಮಾಡಲಿ. ಎಲ್ಲಿ ಹೋಗಲಿ ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ, ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದೆ ಆಯ್ತು. ನನ್ನ ಇಡೀ ಜೀವನವೇ ನೀನಾಗಿದ್ದೆ, ನನ್ನ ಯಾಕೆ ಬಿಟ್ಟು ಹೋದೆ ಎಂದು ನಟಿ ಎಮೋಷನಲ್ ಆಗಿ ಬರೆದುಕೊಂಡಿದ್ದರು.

ಅಂದಹಾಗೆ, ಮೊಗ್ಗಿನ ಮನಸ್ಸು, ಚೆಂಡ, ಜಾಕ್‌ಪಾಟ್‌, ಪರಾರಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.