ನಾನು ಕಷ್ಟಪಟ್ಟು ತಗೊಂಡಿರೋ ಮನೆ ಅವನಿಗ್ಯಾಕೆ ಗಿಫ್ಟ್ ತರ ಬಿಟ್ಕೊಡ್ಲಿ – ರಂಜಿತ್ ಅಕ್ಕ ರಶ್ಮಿ

– ಒಂದೂವರೆ ತಿಂಗಳಿಂದ ಅಪ್ಪಂಗೆ ಊಟ ಕೊಟ್ಟಿಲ್ಲ ನೋಡಿದ್ರೆ ಹೊಟ್ಟೆ ಉರಿಯುತ್ತೆ
– ಬಾಡಿಗೆ ಕಟ್ಟದೇ ಹೆಂಡ್ತಿ ಹೆಸರಿಗೆ ಫ್ಲ್ಯಾಟ್‌ ಬರೆಯೋಕೆ ಹೇಳ್ತಿದ್ದಾನೆ 

ನಾನು ಕಷ್ಟಪಟ್ಟು ತೆಗೆದುಕೊಂಡಿರುವ ಮನೆಯನ್ನು ಅವನಿಗೆ ಯಾಕೆ ಗಿಫ್ಟ್ ತರ ಬಿಟ್ಟುಕೊಡಬೇಕು ಎಂದು ಬಿಗ್‌ಬಾಸ್ ಖ್ಯಾತಿಯ ರಂಜಿತ್ ಸಹೋದರಿ ರಶ್ಮಿ ಕಿಡಿಕಾರಿದ್ದಾರೆ.

`ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, 2017, 2018ರಲ್ಲಿ ನಾನು ಎರಡು ಫ್ಲ್ಯಾಟ್‌ ತಗೊಂಡೆ. ಆಗಿನಿಂದಲೂ ನಾನು EMI ಕಟ್ಟಿಕೊಂಡು ಬರ‍್ತಾ ಇದೀನಿ. ರಂಜಿತ್ ಮದುವೆಯಾದ ಮೇಲೆ ನನಗೆ 3BHK ಮನೆ ಕೊಡು, ನನ್ನ ಮಗಳಿಗೆ ಒಂದು ರೂಮ್, ನನಗೆ ಹಾಗೂ ನನ್ನ ಹೆಂಡತಿಗೆ ಒಂದು ರೂಮ್ ಬೇಕು. ಅಪ್ಪ ಒಂದು ರೂಮ್‌ನಲ್ಲಿರುತ್ತಾರೆ. ನಾನು ಪ್ರತಿ ತಿಂಗಳು ಬಾಡಿಗೆ ಕಟ್ತೀನಿ ಅಂದಿದ್ದ. ಅದಕ್ಕೆ ಸರಿ ಅಂತ ಹೇಳಿದೆ. ಅದಾದ ಮೇಲೆ ಒಂದು ತಿಂಗಳು ಬಾಡಿಗೆ ಕಟ್ಟಿದ್ದ. ಎರಡನೇ ತಿಂಗಳು ಬಾಡಿಗೆ ಕೇಳಿದ್ರೆ ಫ್ಲ್ಯಾಟ್‌ ನನ್ನ ಹೆಂಡತಿ ಹೆಸರಿಗೆ ಬರೆದುಕೊಡು ಎಂದು ಹೇಳ್ತಾನೆ. ನಾನು ಕಷ್ಟಪಟ್ಟು ತೆಗೆದುಕೊಂಡಿರುವ ಮನೆಯನ್ನು ಅವನಿಗೆ ಯಾಕೆ ಗಿಫ್ಟ್ ತರ ಬಿಟ್ಟುಕೊಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.ಇದನ್ನೂ ಓದಿ: ಕಲಾವಿದನಾದ ನನಗೆ ಲೋನ್ ಸಿಗಲ್ಲ ಅಂತ ಅಕ್ಕನ ಸ್ಯಾಲರಿ ಮೇಲೆ ಸಾಲ ಪಡೆದು ಫ್ಲಾಟ್ ಖರೀದಿಸಿದ್ದೆ: ರಂಜಿತ್

ಪ್ರಾಪರ್ಟಿ ತೆಗೆದುಕೊಂಡಾಗಿನಿಂದ ನಾನು EMI ಕಟ್ಕೊಂಡು ಸಾಯ್ತಾ ಬಂದಿದೀನಿ. ನಾನು ಒಂದು ಮನೆಯಿಂದ ಬರೋ ಬಾಡಿಗೆಯನ್ನ EMI ತರ ಅಡ್ಜಸ್ಟ್ ಮಾಡ್ಕೊಂಡು ಹೋಗ್ತಿದೀನಿ. ಇವಾಗ ನನ್ನ ಹೆಸರಿಗೆ, ನನ್ನ ಹೆಂಡತಿ ಹೆಸರಿಗೆ ಬರೆದುಕೊಡು ಅಂದ್ರೆ ಹೇಗೆ? ಅಪ್ಪನೂ ಅವರ ಜೊತೆ ಇರ‍್ತಾರೆ ಅಂತ ಬಿಟ್ಟುಕೊಟ್ಟೆ. ಆದ್ರೆ ಅಪ್ಪನನ್ನೂ ಹೊರಗೆ ಹಾಕಿದಾನೆ. ಒಂದೂವರೆ ತಿಂಗಳಿಂದ ಊಟ ಹಾಕಿಲ್ಲ, ನಮ್ಮ ಮನೆಗೆ ಬಂದು ಊಟ ಮಾಡ್ತಾರೆ. ಮತ್ತೆ ಕೆಳಗೆ ಹೋಗಿ ಅವನ ಮನೇಲಿ ಇರ‍್ತಾರೆ. ಒಂದು ದಿನ ಬಾಗಿಲು ತೆಗೆಯದೇ ಇದ್ದಾಗ ಪಾಪ ಅಪ್ಪ ಬೇಸ್‌ಮೆಂಟಲ್ಲಿ ಹೋಗಿ ಮಲಗಿಕೊಂಡಿದ್ದರು. ಇದೆಲ್ಲ ನೋಡಿದ್ರೆ ನಮಗೆ ಹೊಟ್ಟೆ ಉರಿಯುತ್ತೆ ಎಂದು ಅಸಮಾಧಾನ ಹೊರಹಾಕಿದರು.

ನಾನು ಮನೆ ತೆಗೆದುಕೊಳ್ಳುವಾಗ ಸಾಲ ಕೊಟ್ಟಿದ್ದಾನೆ. ಅವನಷ್ಟೇ ಅಲ್ಲ, ನಮ್ಮ ಅಕ್ಕನೂ ಕೊಟ್ಟಿದ್ರು. ನಾನು ತುಂಬಾ ಕಡೆ ಸಾಲ ಮಾಡಿದೀನಿ. ಹೆಚ್ಚು ಕಡಿಮೆ ಅವನು ನನಗೆ 13 ಲಕ್ಷ ರೂ. ಸಾಲ ಕೊಟ್ಟಿದಾನೆ. ನಾನು ವಾಪಸ್ ಕೂಡ ಕೊಟ್ಟಿದ್ದೀನಿ. ಅದರ ಪ್ರೂಫ್ ಕೂಡ ನನ್ನತ್ರ ಇದೆ. ಅವನು 30-40 ಲಕ್ಷ ರೂ. ಕೊಟ್ಟಿದ್ದಾನೆ ಅಂತ ಹೇಳ್ತಾನೆ. ಅವನು ಕೊಟ್ಟಿದ್ರೆ ನಾನ್ಯಾಕೆ 46 ಲಕ್ಷ ರೂ. ಸಾಲ ಮಾಡ್ತಿದ್ದೆ? ಎರಡು ಮನೆ ಇಎಂಐ ನಾನ್ಯಾಕೆ ಕಟ್ತಿದ್ದೆ? ಈಗ ನನಗೆ ಇಎಂಐ ಕಟ್ಟಕ್ಕೆ ಸಮಸ್ಯೆ ಆಗುತ್ತೆ. ನನ್ನ ಸಿಬಿಲ್ ಸ್ಕೋರ್‌ಗೂ ತೊಂದರೆಯಾಗುತ್ತದೆ ಎಂದು ಹೇಳಿದರು.

ಜುಲೈ ತಿಂಗಳಿಂದ ಈ ಸಮಸ್ಯೆ ಶುರುವಾಗಿದೆ. ಜೂನ್ ತಿಂಗಳದ್ದು ಬಾಡಿಗೆ ಕಟ್ಟಿಲ್ಲ. ಇದ್ರಿಂದ ಅವನಿಗೇನು ಸಮಸ್ಯೆ ಇಲ್ಲ, ಇಎಂಐ ಸಮಸ್ಯೆ ನಮಗೆ ಆಗುತ್ತೆ. ಇದು ನನ್ನ ಮನೆ. ಅವನ ಮನೆ ಅಂತ ಪ್ರೂಫ್ ತೋರಿಸಲಿ. ಸಾಲ ಕೊಟ್ಟಿದ್ದಾನೆ ಅಂತ ಹೇಳ್ತಾನೆ ಅದ್ರ ಪ್ರೂಫ್ ಕೂಡ ತೋರಿಸಲಿ. ಆಗ ನಾನು ಹೋರಾಟ ಮಾಡ್ತೀನಿ. ಲೇಟ್ ಆಗಿ ಕಟ್ತೀವಿ ಅಂತ ಅವರು ಸುಮ್ನೆ ಕೂರ‍್ತಾರೆ. ನನಗೆ ಹಾಗೆ ಆಗಲ್ಲ. ಬ್ಯಾಂಕ್‌ನವರು ನನಗೆ ಲೀಗಲ್ ನೋಟಿಸ್ ಕೊಡ್ತಾರೆ. ಅವನು ಹೇಳೋದು ನಿಜ ಆದ್ರೆ. 6 ತಿಂಗಳಲ್ಲಿ ಎಲ್ಲ ಪ್ರೂಫ್ ತೋರಿಸಿ, ಯಾವುದೇ ವಿಚಾರಣೆ ಮಿಸ್ ಮಾಡದೇ ಎಲ್ಲ ಮುಗಿಸಿಕೊಡ್ಲಿ ಎಂದು ತಿಳಿಸಿದರು.ಇದನ್ನೂ ಓದಿ: ಅಕ್ಕ, ಬಾವನ ಜೊತೆ ಗಲಾಟೆ – ಬಿಗ್‌ ಬಾಸ್‌ ರಂಜಿತ್‌ ಮೇಲೆ ದೂರು ದಾಖಲು