ರನ್ನರ್ ಅಪ್‍ಗೆ 6 ಲಕ್ಷ, ದೀಪಿಕಾಗೂ 6 ಲಕ್ಷ ರೂ. ಬಹುಮಾನ

ಬೆಂಗಳೂರು: ಮೂರು ತಿಂಗಳು ಕನ್ನಡದ ವೀಕ್ಷಕರಿಗೆ ಮನರಂಜನೆಯ ರಸದೌತಣ ಉಣ ಬಡಿಸಿದ್ದ ‘ಬಿಗ್‍ಬಾಸ್ ಸೀಸನ್ 7’ ರ ಫಿನಾಲೆ ಅದ್ಧೂರಿಯಾಗಿ ಮುಗಿದಿದೆ. ವಿನ್ನರ್ ಆಗಿ ನಟ ಶೈನ್ ಶೆಟ್ಟಿ ಹೊರಹೊಮ್ಮಿದ್ದಾರೆ. ಹ್ಯಾಸ ನಟ ಕುರಿ ಪ್ರತಾಪ್ ರನ್ನರ್ ಅಪ್ ಆಗಿದ್ದಾರೆ.

ಭಾನುವಾರ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಬಿಗ್‍ಬಾಸ್ ವೇದಿಕೆಯಲ್ಲಿ ನಟ ಕಿಚ್ಚ ಸುದೀಪ್ ತಮ್ಮ ಎಡಗಡೆ ನಿಂತಿದ್ದ ಶೈನ್ ಶೆಟ್ಟಿ ಕೈಯನ್ನು ಎತ್ತಿ ವಿಜೇತರೆಂದರು ಘೋಷಿಸಿದ್ದಾರೆ. ಬಲಗಡೆ ನಿಂತಿದ್ದ ಕುರಿ ಪ್ರತಾಪ್ ರನ್ನರ್ ಆಗಿ ಹೊರಹೊಮ್ಮಿದ್ದಾರೆ. ಕುರಿ ಪ್ರತಾಪ್ ಅವರು ತಮ್ಮ ಕಾಮಿಡಿ ಮೂಲಕ ಬಿಗ್ ಮನೆಯಲ್ಲಿ ಸಾಕಷ್ಟು ಮನರಂಜನೆ ನೀಡಿದ್ದರು. ಈ ಮೂಲಕ ಸಾಕಷ್ಟು ಅಭಿಮಾನಿಗಳು ಗಳಿಸಿಕೊಂಡಿದ್ದಾರೆ.

‘ಬಿಗ್‍ಬಾಸ್ ಸೀಸನ್ 7’ ರ ರನ್ನರ್ ಅಪ್ ಆಗಿದ್ದ ಕುರಿ ಪ್ರತಾಪ್‍ಗೆ ಆರು ಲಕ್ಷ ಬಹುಮಾನ ಸಿಕ್ಕಿದೆ. ರನ್ನರ್ ಅಪ್ ಕುರಿ ಪ್ರತಾಪ್‍ಗೆ ಇಂಡಸ್ಟ್ರಿ 555 ಡಿ. ಟಿಎಂಟಿ ಕಂಪನಿಯಿಂದ ಒಂದು ಲಕ್ಷ ರೂ. 7 ಅಪ್ ಕಡೆಯಿಂದ 5 ಲಕ್ಷ ರೂ. ಬಹುಮಾನ ಸಿಕ್ಕಿದೆ. ಹೀಗಾಗಿ ಒಟ್ಟಾಗಿ 6 ಲಕ್ಷ ರೂ. ಕುರಿ ಪ್ರತಾಪ್‍ಗೆ ಸಿಕ್ಕಿದೆ. ಇತ್ತ ಶನಿವಾರ ಬಿಗ್‍ಬಾಸ್ ಮನೆಯಿಂದ ಎಲಿಮಿನೇಟ್ ಆದ ದೀಪಿಕಾ ದಾಸ್‍ಗೂ 6 ಲಕ್ಷ ರೂ. ಬಹುಮಾನ ಸಿಕ್ಕಿದೆ.

ಬಿಗ್‍ಬಾಸ್ ಸ್ಪರ್ಧಿಗಳಿಗೆ ‘ಇಂಡಿಯಾ ಗೇಟ್ ಬಾಸ್ಮತಿ ರೈಸ್’ ಅವರು ಸಂಕ್ರಾಂತಿ ಹಬ್ಬಕ್ಕಾಗಿ ಸ್ಪೆಷಲ್ ಊಟ ಕಳುಹಿಸಿದ್ದರು. ಆಗ ಸ್ಪರ್ಧಿಗಳು ಒಂದು ಹಾಡಿಗೆ ಡ್ಯಾನ್ಸ್ ಮಾಡುವ ಮೂಲಕ ಕಂಪನಿಗೆ ಧನ್ಯವಾದ ತಿಳಿಸಿದ್ದರು. ಆ ಹಾಡನ್ನು ಕಂಪನಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು. ಆ ಹಾಡಿನಲ್ಲಿ ಅಧಿಕ ವೋಟ್ ದೀಪಿಕಾ ದಾಸ್‍ಗೆ ಬಂದಿತ್ತು. ಹೀಗಾಗಿ ಕಂಪನಿ ಅವರಿಗೆ 5 ಲಕ್ಷ ರೂ. ಬಹುಮಾನ ಕೊಟ್ಟಿದೆ. ಇದಲ್ಲದೇ ‘ಬಿಗ್‍ಬಾಸ್ ಸೀಸನ್ 7’ ಐದು ಫೈನಲಿಸ್ಟ್ ಗಳಲ್ಲಿ ದೀಪಿಕಾ ದಾಸ್ ಒಬ್ಬರಾಗಿದ್ದರಿಂದ 1 ಲಕ್ಷ ರೂ. ಬಹುಮಾನ ಸಿಕ್ಕಿದೆ. ಹೀಗಾಗಿ ದೀಪಿಕಾ ದಾಸ್‍ಗೆ ಒಟ್ಟಾಗಿ 6 ಲಕ್ಷ ರೂ. ಬಹುಮಾನ ಸಿಕ್ಕಿದೆ.

ದೀಪಿಕಾ ದಾಸ್ ಬಿಗ್ ಮನೆಯಲ್ಲಿ ಸ್ಟ್ರಾಂಗ್ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದರು. ಜೊತೆಗೆ ಯಾವುದೇ ಟಾಸ್ಕ್ ಇದ್ದರೂ ಕೂಡ ಉತ್ತಮವಾಗಿ ಆಟವಾಡುತ್ತಿದ್ದರು. ಆಟದ ಜೊತೆಗೆ ಬಿಗ್‍ಬಾಸ್ ಮನೆಯಲ್ಲಿ ತುಂಬಾ ಚೆನ್ನಾಗಿ ಅಡುಗೆ ಮಾಡುತ್ತಿದ್ದರು. ಆದರೆ ಬಿಗ್‍ಬಾಸ್ ಮುಗಿಯುವ ಹಂತದಲ್ಲಿ ದೀಪಿಕಾ ಸ್ವಲ್ಪ ಸೈಲೆಂಟ್ ಆಗಿದ್ದರು. ಆದರೂ ದೀಪಿಕಾ ದಾಸ್ ಅಪಾರ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

Comments

Leave a Reply

Your email address will not be published. Required fields are marked *