ಅಮ್ಮ ರಾಕಿಯನ್ನ ಮಾತಾಡ್ಸು-ತಾಯಿ ಬಳಿ ಅಕ್ಷತಾ ಮನವಿ

-ಅಕ್ಷತಾ ತಾಯಿ ಕೊಟ್ಟ ಉತ್ತರ ಹೀಗಿತ್ತು
-ಅಕ್ಷತಾ ತಾಯಿ ಬಳಿ ಕ್ಷಮೆಯಾಚಿದ ರಾಕೇಶ್

ಬೆಂಗಳೂರು: ಬಿಗ್‍ಬಾಸ್ ಶೋಗೆ ಪ್ರತಿ ಸೀಸನ್ ನಲ್ಲೂ ಬಿಗ್ ಮನೆಗೆ ಸ್ಪರ್ಧಿಗಳ ಕುಟುಂಬದವರಲ್ಲಿ ಒಬ್ಬರನ್ನು ಕಳುಹಿಸಿ ಎಲ್ಲರಿಗೂ ಸರ್ಪ್ರೈಸ್ ಕೊಡುತ್ತಾರೆ. ಅದೇ ರೀತಿ ಬಿಗ್‍ಬಾಸ್ ಸೀಸನ್ 6ರಲ್ಲೂ ಮಂಗಳವಾರ ಪ್ರಸಾರವಾದ ಸಂಚಿಕೆಯಲ್ಲಿ ಸ್ಪರ್ಧಿಗಳ ಕುಟುಂಬದವರನ್ನು ಬಿಗ್ ಮನೆಗೆ ಕಳುಹಿಸಿದ್ದರು.

ಮೊದಲಿಗೆ ಬಿಗ್ ಬಾಸ್ ಸ್ಪರ್ಧಿಗಳಿಗೆ ಪಾಸ್ ಟಾಸ್ಕ್ ಕೊಟ್ಟಿರುತ್ತಾರೆ. ಅಂದರೆ ಬಿಗ್ ಬಾಸ್ ಪಾಸ್ ಎಂದು ಹೇಳಿದಾಗ ಸ್ಪರ್ಧಿಗಳು ಯಾರೇ ಬಂದರೂ ಮಾತನಾಡದೇ, ಅಲುಗಾಡದೇ ಸುಮ್ಮನೆ ನಿಲ್ಲಬೇಕಾಗುತ್ತದೆ. ಈ ವೇಳೆ ಮೊದಲ ಬಾರಿಗೆ ನವೀನ್ ಅವರ ಅಮ್ಮ ಬರುತ್ತಾರೆ. ನಂತರ ಶಶಿ ಮನೆಯವರು ಬರುತ್ತಾರೆ. ಅವರನ್ನು ಮನೆಯವರೆಲ್ಲಾ ಮಾತನಾಡಿಸಿ ಕಳುಹಿಸುತ್ತಾರೆ.

ಮೂರನೇಯದಾಗಿ ಅಕ್ಷತಾ ಅಮ್ಮ ಬಿಗ್ ಮನೆಗೆ ಬರುತ್ತಾರೆ. ಅಮ್ಮನನ್ನು ನೋಡಿದ ಅಕ್ಷತಾ ತಕ್ಷಣ ಅವರನ್ನು ಅಪ್ಪಿಕೊಂಡು ಅಳುತ್ತಾರೆ. ಅಕ್ಷತಾ ತಾಯಿ ಮನೆಯಲ್ಲಿ ಎಲ್ಲರೂ ಚೆನ್ನಾಗಿದ್ದಾರೆ. ನೀನು ಚೆನ್ನಾಗಿ ಆಟವಾಡುತ್ತಿದ್ದೀಯಾ, ಗೆದ್ದು ಬಾ ಎಂದು ಅಕ್ಷತಾ ಕೈ ಹಿಡಿದುಕೊಂಡು ಹೇಳುತ್ತಾರೆ. ಆದರೆ ರಾಕೇಶ್ ಯಿಂದ ದೂರವಿರು ಎಂದು ಸಲಹೆ ನೀಡಿದ್ದಾರೆ.

ಆಗ ಅಕ್ಷತಾ, ರಾಕೇಶ್ ಕೂಡ ಅಮ್ಮಂದಿರಿಗೆ ತುಂಬಾ ಗೌರವ ಕೊಡುತ್ತಾರೆ ಮಾತನಾಡಿಸು ಎಂದು ಹೇಳುತ್ತಾರೆ. ಆದರೂ ಅಕ್ಷತಾ ಅಮ್ಮ ಎಲ್ಲರನ್ನು ಮಾತನಾಡಿಸಿ ರಾಕೇಶ್ ಅವರನ್ನು ಮಾತನಾಡಿಸುವುದಿಲ್ಲ. ಈ ವೇಳೆ ರಾಕೇಶ್ ಅಲ್ಲೇ ಪಕ್ಕದಲ್ಲಿಯೇ ಕುಳಿತಿರುತ್ತಾರೆ. ಆಗ ಅಕ್ಷತಾ ರಾಕೇಶ್‍ ನ ಮಾತನಾಡಿಸಿ, ಇಲ್ಲಂದ್ರೆ ಬೇಜಾರ್ ಮಾಡಿಕೊಳ್ಳುತ್ತಾರೆ ಮಾತನಾಡಿಸಿ, ಸಮೀಪ ಕರೀಲಾ ಎಂದು ಕೇಳುತ್ತಾರೆ. ಆಗ ಅವರ ತಾಯಿ ಬೇಡ ಎಂದು ಸುಮ್ಮನಾಗುತ್ತಾರೆ.

ಕೊನೆಗೆ ರಾಕೇಶ್ ಬಂದು ನನ್ನ ಮೇಲೆ ಕೋಪನಾ ಎಂದು ಅಕ್ಷತಾ ತಾಯಿಯನ್ನು ಮಾತನಾಡಿಸುತ್ತಾರೆ. ಆಗ ಅಕ್ಷತಾ ಅಮ್ಮ ಹಾಗೇನು ಇಲ್ಲ, ಆದರೆ ಹೊರಗಡೆ ಜನರು ಸುಮ್ಮನೆ ಮಾತನಾಡಿಕೊಳ್ಳುತ್ತಾರೆ. ನೀನು ನನ್ನ ಮಗನ ತರ ಎಂದು ಹೇಳುತ್ತಾರೆ. ಬಳಿಕ ರಾಕೇಶ್ ನನ್ನಿಂದ ಏನಾದರೂ ತಪ್ಪಾಗಿದ್ದರೆ  ಕ್ಷಮಿಸಿ ಎಂದು ಕೇಳಿದ್ದಾರೆ.

ಇದೇ ವೇಳೆ ಅಕ್ಷತಾ ತಾಯಿ ಬಿಗ್ ಮನೆಯಿಂದ ಹೊರ ಬಂದಮೇಲೆ ಎಲ್ಲರನ್ನು ಕರೆದುಕೊಂಡು ಮನೆಗೆ ಬಾ ಎಂದು ಹೇಳಿರುತ್ತಾರೆ. ಆಗ ಅಕ್ಷತಾ ಎಲ್ಲರನ್ನೂ ಮನೆಗೆ ಕರೆದಿದ್ದಾರೆ. ನೀನು ಬಾ ಎಂದು ಹೇಳಿದ್ದಾರೆ.

ಯಾರ ಜೊತೆ ಕಿರಿಕ್ ಮಾಡಬೇಡ, ಕೋಪ ಕಡಿಮೆ ಮಾಡಿಕೋ ಎಂದು ಬಿಗ್‍ಬಾಸ್ ಮನೆಯಲ್ಲಿ ಮಾಡಿದ್ದ ಟಾಸ್ಕ್ ಬಗ್ಗೆ ಮಾತನಾಡುತ್ತಾರೆ. ಕೊನೆಗೆ ಅವರ ಕೈಯಾರೆ ಮಟನ್ ಅಡುಗೆ ಮಾಡಿ ಎಲ್ಲರಿಗೂ ಕೊಟ್ಟು ಬಿಗ್ ಮನೆಯಿಂದ ಹೊರಹೋಗಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *